ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ವಿಚಾರ: ಸಚಿವ ಮಹದೇವಪ್ಪ ಸ್ಪಷ್ಟನೆ

1 min read

ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಾ. ಹೆಚ್​. ಸಿ ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ.

ನಂಜನಗೂಡು ಉಪ ಚುನಾವಣೆಯಲ್ಲಿ ಸೊಂಟಕ್ಕೆ ಪೆಟ್ಟಾಗಿತ್ತು. ಒಳಗಡೆ ಕೀವಾಗಿ ಕಾಲು ಎತ್ತದಂತಾಗಿತ್ತು. ಅಂದಿನಿಂದ ಈ ಸಮಸ್ಯೆ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಕುಳಿತರೆ ಬೇಗ ಏಳಲು ಆಗೋದಿಲ್ಲ. ಬಗ್ಗಲು ಕೂಡ ಸಾಧ್ಯವಾಗೋದಿಲ್ಲ. ಎಷ್ಟೋ ಜನ ಕಾಲು ಮುಂದಕ್ಕೆ ಇಟ್ಟು ನಮಸ್ಕಾರ ಮಾಡಿಸಿಕೊಳ್ಳೋರಿದ್ದಾರೆ. ಹಾಗೆ ನಾನು ಮಾಡುವವನಲ್ಲ. ನೀವು ಗಮನಿಸಿದ್ದು ಸಂತಸ ತಂದಿದೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದಂತಾಗುತ್ತೆ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ.

ಆಪರೇಷನ್ ಕಮಲದ ಬಗ್ಗೆ ಡಿಕೆಶಿ ಹೇಳಿಕೆ ವಿಚಾರ ಕುರಿತು ಮಾತನಾಡಿದ ಅವರು, ನಮ್ಮ ಅಧ್ಯಕ್ಷರಿಗೆ ಮಾಹಿತಿ ಇರುತ್ತದೆ. ಹೀಗಾಗಿ ಅವರು ಹೇಳಿರುತ್ತಾರೆ. ನಾನು ಅಧಿಕಾರಿಗಳ ಸಭೆಯಲ್ಲಿದ್ದೇನೆ. ಹೀಗಾಗಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಮಗಿಂತ ಮಾಧ್ಯಮಗಳಿಗೆ ಹೆಚ್ಚು ಮಾಹಿತಿ ಇದೆ. ಬಹುಮತವಿಲ್ಲದೆ ಬಿಜೆಪಿ ಎರಡು ಸಲ ಅಧಿಕಾರಕ್ಕೆ ಬಂದಿದೆ‌. ಅದು ಹೇಗೆ ಬಂದಿದ್ದು ಅನ್ನೋದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಇತಿಹಾಸವೇ ಹಾಗಿದೆ. ಆ ಇತಿಹಾಸವನ್ನು ಮಾಧ್ಯಮದವರೇ ಹೇಳಿ ಬಿಡಲಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಬಿಜೆಪಿ ಬರ ಅಧ್ಯಯನದ ಬಗ್ಗೆ ಎಸ್ ಟಿ ಸೋಮಶೇಖರ್​ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಬರ ಅಧ್ಯಯನದ ಬದಲು ಕೇಂದ್ರ ಸರ್ಕಾರದ ಮನವೊಲಿಸಿ ಅಂದಿರೋ ವಿಚಾರವನ್ನು ಅವರು ಸರಿಯಾಗಿಯೇ ಹೇಳಿದ್ದಾರೆ. ಅವರು ಆ ಬಗ್ಗೆ ಕರಾರುವಕ್ಕಾಗಿ ಹೇಳಿದ್ದಾರೆ. ಕೇಂದ್ರಕ್ಕೆ ಹೋಗಿ ಕೇಳಿ ಅಂದಿದ್ದಾರೆ. ಬರದ ಎಲ್ಲ ವರದಿಯನ್ನೂ ನೀಡಲಾಗಿದೆ‌. ರಾಜ್ಯದ ಜನರ ಹಿತ ಕಾಯಬೇಕೆಂದಿದ್ದರೆ ಕೇಂದ್ರಕ್ಕೆ ಕೇಳಲಿ. ಸಂಕಷ್ಟದಲ್ಲಿರೋ ರೈತರಿಗೆ ಪರಿಹಾರ ಕೊಡಬೇಕೆಂದರೆ ಕೇಂದ್ರವನ್ನು ಕೇಳಲಿ. ರೂ. 4000 ಕೋಟಿ ಹಣ ಕೇಳಲಾಗಿದೆ. ದಯವಿಟ್ಟು ಆ ಹಣವನ್ನು ನೀಡುವಂತೆ ಕೇಳಲಿ ಎಂದು ಒತ್ತಾಯಿಸಿದರು.

ಅಂಗರಕ್ಷಕನಿಂದ ಶೂ ತೊಡಿಸಿಕೊಂಡ ಸಚಿವ ಮಹದೇವಪ್ಪ: ಇಂದು ಬೆಳಗ್ಗೆ ಇಲ್ಲಿನ ಸರ್ಕಾರಿ ಹಾಸ್ಟೆಲ್​​ಗೆ ಭೇಟಿ ನೀಡಿದ್ದ ಹೆಚ್ ಸಿ ಮಹದೇವಪ್ಪ ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ಧಾರವಾಡ ನಗರದ ಸಪ್ತಾಪುರದಲ್ಲಿರುವ ವಿದ್ಯಾರ್ಥಿ ನಿಲಯಕ್ಕೆ ತೆರಳಿದ್ದ ಸಚಿವರ ಬಳಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಈ ವೇಳೆ ಸಚಿವ ಮಹದೇವಪ್ಪ ಅವರು ಅಧಿಕಾರಿಗಳಿಂದ ವಿವಿಧ ಮಾಹಿತಿ ಪಡೆದುಕೊಂಡರು.

ಬಳಿಕ ಸಚಿವರು ಊಟದ ವ್ಯವಸ್ಥೆ ಸೇರಿ ಹಾಸ್ಟೆಲ್​ನ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಡುಗೆ ಮನೆಗೆ ತೆರಳಿ ವಾಪಸ್ ಆದ ಸಚಿವ ಮಹದೇವಪ್ಪ ಅವರು ಅಂಗರಕ್ಷಕನ ಕೈಯಿಂದ ಶೂ ಹಾಕಿಸಿಕೊಂಡ ಘಟನೆ ನಡೆಯಿತು. ಹಾಸ್ಟೆಲ್​ನ ಅಡುಗೆ ಮನೆಗೆ ಭೇಟಿ ನೀಡಿದ್ದ ಸಂದರ್ಭ ಸಚಿವರು ಶೂ ಹೊರಗಡೆಯೇ ಬಿಚ್ಚಿಟ್ಟಿದ್ದರು. ಈ ಕುರಿತು ಸಚಿವರು ಸ್ಪಷ್ಟನೆ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *