ಗುಣಮುಖರಾದ ಸದ್ಗುರುಗೆ ರಾಜ್ಯದಿಂದ ಅದ್ಧೂರಿ ಸ್ವಾಗತ
1 min read
ನಾನು ಪೂರ್ಣ ಚೇತರಿಸಿಕೊಂಡಿದ್ದೇನೆ, ಸದ್ಗುರು
ಗುಣಮುಖರಾದ ಸದ್ಗುರುಗೆ ರಾಜ್ಯದಿಂದ ಅದ್ಧೂರಿ ಸ್ವಾಗತ
ಚೇತರಿಕೆ ನಂತರ ಮರಳಿದ ಸದ್ಗುರುಗೆ ಜನರ ಹಾರೈಕೆ
ಅಮೆರಿಕಾ ಆಶ್ರಮದಲ್ಲಿ ಏಳು ತಿಂಗಳ ಚೇತರಿಕೆ ನಂತರ ಚಿಕ್ಕಬಳ್ಳಾಪುರ ಸನ್ನಿಧಿಗೆ ಮರಳಿದ ಸದ್ಗುರುಗಳಿಗೆ ಭಕ್ತಿಯ ಕಣ್ಣೀರು, ನೃತ್ಯ ಮತ್ತು ಸಂಗೀತದೊ0ದಿಗೆ ಭಾವಪೂರ್ಣ ಸ್ವಾಗತ ದೊರೆಯಿತು.
ಆ ಸಮಯದಲ್ಲಿ ನಾನು ಹೋಗಿಬಿಟ್ಟೆ ಎಂದು ಅವರು ಭಾವಿಸಿದ್ದರು. ಅದಾದ ನಂತರವೂ ನನಗೆ ಜ್ಞಾಪಕಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ, ವಿವೇಚನಾ ಶಕ್ತಿ ಕುಂದುತ್ತದೆ ಎಂದು ಹೇಳಿದರು. ಆದರೆ ನಾನು ಈಗ ಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ… ಹೀಗಂತ ಹೇಳಿದವರು ಸದ್ಗುರುಗಳು. ತಮ್ಮನ್ನು ಸ್ವಾಗತಿಸಲು ನೆರೆದಿದ್ದ ಸಹಸ್ರಾರು ಜನರ ಮುಂದೆ ಮಾತನಾಡಿದ ಸದ್ಗುರುಗಳು ತಾವು ಚೇತರಿಸಿಕೊಂಡಿರುವುದಾಗಿ ಘೋಷಿಸಿದರು.
ಸದ್ಗುರು ಸನ್ನಿಧಿಯಲ್ಲಿ ನೆರೆದಿದ್ದವರನ್ನು 2025ರ ಜನವರಿ 11 ರಿಂದ 14 ರವರೆಗೆ ನಡೆಯುವ ಮಕರ ಸಂಕ್ರಾ0ತಿ ಆಚರಣೆಯಲ್ಲಿ ಭಾಗವಹಿಸಲು ಸದ್ಗುರುಗಳು ಆಹ್ವಾನಿಸಿದರು. ಈ ಉತ್ಸವದಲ್ಲಿ ಸಾಂಪ್ರದಾಯಿಕ ಜಾತ್ರೆ ಮತ್ತು ಮಹಾಶೂಲ ಮಂಟಪದ ಭವ್ಯ ಉದ್ಘಾಟನೆ ನಡೆಯಲಿದೆ. ಈ ಹಿಂದೆ, ಮಾಧ್ಯಮದೊಂದಿಗಿನ ಸಂವಾದದಲ್ಲಿ, ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿರುವ ಮಿರಾಕಲ್ ಆಫ್ ಮೈಂಡ್ ಆ್ಯಪ್‌ನ್ನು ಸದ್ಗುರುಗಳು ಘೋಷಿಸಿದರು.
ಅದ್ಭುತವೆಂದರೆ ಮಾನವ ಮನಸ್ಸು. ಈ ಮನಸ್ಸಿನಲ್ಲಿ, ನೀವು ದೇವರು, ರಾಕ್ಷಸ ಮತ್ತು ನರಕವನ್ನು ಸೃಷ್ಟಿಸಿದ್ದೀರಿ. ದುರದೃಷ್ಟವಶಾತ್, ಹಲವಾರು ಜನರಿಗೆ, ಈ ಅದ್ಭುತ ಹಿಂಸಾ ಕೊಠಡಿಯಾಗಿ ಪರಿವರ್ತನೆಯಾಗಿದೆ. ಅವರು ಅದನ್ನು ಒತ್ತಡ, ಆತಂಕ, ಹುಚ್ಚು ಎಂದೆಲ್ಲ ಕರೆಯುತ್ತಾರೆ. ಮಾನವರು, ವಿಶೇಷವಾಗಿ ಯುವಜನರು, ನಿಮ್ಮಲ್ಲಿ ಒಂದು ಅದ್ಭುತ ಕುಳಿತಿದೆ ಎಂಬುದನ್ನು ಅರಿತುಕೊಳ್ಳುವ ಸಮಯ ಇದು. ನೀವು ಅದನ್ನು ದುಃಖವನ್ನಾಗಿ ಮಾಡಿಕೊಳ್ಳುತ್ತಿದ್ದೀರಿ ಎಂದು ಹೇಳಿದರು.
ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ, ಮಿರಾಕಲ್ ಆಫ್ ಮೈಂಡ್ ಆ್ಯಪ್ ಎಲ್ಲಿಯಾದರೂ ಅಭ್ಯಾಸ ಮಾಡಬಹುದಾದ ಸರಳ ಧ್ಯಾನ ಪ್ರಕ್ರಿಯೆ ನೀಡಲಿದ್ದು, ಜೀವನಕ್ಕೆ ಶಾಂತಿ, ಆನಂದ ಮತ್ತು ಉತ್ಸಾಹ ತರಲಿದೆ. ಈಶ ಫೌಂಡೇಶನ್ ಸಾಮಾಜಿಕ ಅಭಿವೃದ್ಧಿ ವಿಭಾಗವಾದ ಈಶ ಔಟ್ರೀಚ್, ವಿವಿಧ ರೈತ ಉತ್ಪಾದಕ ಸಂಸ್ಥೆಗಳು ಕಳೆದ ಆರು ತಿಂಗಳಲ್ಲಿ ಐದು ರಾಷ್ಟಿಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗೆಲ್ಲಲು ಮಾರ್ಗದರ್ಶನ ನೀಡಿದೆ. ಎಫ್ಪಿಒಗಳ ಯಶಸ್ಸಿನ ಬಗ್ಗೆ ಮಾತನಾಡಿದ ಸದ್ಗುರುಗಳು, ವಿಸ್ತರಣೆಯ ಅಗತ್ಯವನ್ನು ಒತ್ತಿ ಹೇಳಿ, ಪ್ರಸ್ತುತ, ಪ್ರತಿ ಎಫ್ಪಿಒದಲ್ಲಿ ಸರಾಸರಿ 1 ಸಾವಿರದಿಂದ 1,400 ಸದಸ್ಯರ ಭಾಗವಹಿಸುವಿಕೆ ಇದೆ ಎಂದರು. ಇದು 10 ಸಾವಿರದಿಂದ 25 ಸಾವಿರ ಸದಸ್ಯರವರೆಗೆ ಬೆಳೆಯಬೇಕು, ಅವುಗಳನ್ನು ಸ್ವತಃ ಮೆಗಾ ಕಾರ್ಪೊರೇಷನ್‌ಗಳನ್ನಾಗಿ ಪರಿವರ್ತಿಸಬೇಕು ಎಂದರು.
ಪ್ರಸ್ತುತ, ಈಶ ಔಟ್ರೀಚ್ ಕರ್ನಾಟಕದಲ್ಲಿ ಮೈಸೂರು, ತುಮಕೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಆರು ಎಫ್ಪಿಒಗಳಿಗೆ ಮಾರ್ಗದರ್ಶನ ನೀಡುತ್ತಿದ್ದು, ಪ್ರತಿ ಎಫ್ಪಿಒದಲ್ಲಿ ಸರಾಸರಿ 400 ಕ್ಕೂ ಹೆಚ್ಚು ರೈತರು ಸದಸ್ಯರಾಗಿದ್ದಾರೆ.