ಬಿಡಿಸಲು ಮಧ್ಯ ಹೋದ ಅಜ್ಜಿ ಸಾವು!
1 min read
ಅಪ್ರಾಪ್ತ ಮಗ, ತಂದೆಯ ನಡುವೆ ಜಗಳ
ಬಿಡಿಸಲು ಮಧ್ಯ ಹೋದ ಅಜ್ಜಿ ಸಾವು!
ದಿನನಿತ್ಯದ ಖರ್ಚಿಗೆ ಹಣ ನೀಡಿಲ್ಲ ಎಂಬ ನೆಪ ಒಡ್ಡಿ ಅಪ್ರಾಪ್ತ ಮಗ ಮತ್ತು ತಂದೆಯ ನಡುವೆ ಜಗಳ ನಡೆಯುತ್ತಿದ್ದ ವೇಳೆ ಸಮಾಧಾನಪಡಿಸಲು ಮಧೆ್ಯಪ್ರವೇಶ ಮಾಡಿದ ಅಜ್ಜಿ ವತಪಟ್ಟಿರುವ ರುವ ಘಟನೆ ನಂಜನಗೂಡು ತಾಲೂಕಿನ ಅಲ್ಲಯ್ಯನಪುರ ಗ್ರಾಮದಲ್ಲಿ ನಡೆದಿದೆ.
ಅಲ್ಲಯ್ಯನಪುರ ಗ್ರಾಮದ ಮಹೇಶ್ ಆಲಿಯಾಸ್ ಪುನೀತ್ ಎಂಬ ಅಪ್ರಾಪ್ತ ಬಾಲಕ ತನ್ನ ತಂದೆ ಮಹೇಶನ ಜೊತೆ ಕಳೆದ ಒಂದು ವಾರದಿಂದ ಮನೆಯ ಖರ್ಚಿಗೆ ಹಣ ನೀಡಿಲ್ಲ ಎಂದು ಜೋರು ಧ್ವನಿಯಲ್ಲಿ ಮನೆಯ ಮುಂದೆ ಜಗಳವಾಡುತ್ತಿದ್ದನಂತೆ. ಈ ಸಂದರ್ಭದಲ್ಲಿ ಇಬ್ಬರ ಮಾತಿನ ಚಕಮಕಿ ಕೇಳಿದ ೮೦ ವರ್ಷದ ಅಜ್ಜಿ ನಾಗಮ್ಮ ಎಂಬುವರು ಜಗಳ ಬಿಡಿಸಲು ಮುಂದೆ ಬಂದಿದ್ದಾರೆ. ಮಹೇಶನ ಮಗ ಅಪ್ರಾಪ್ತ ಬಾಲಕ ಅಜ್ಜಿಯ ಜುಟ್ಟು ಹಿಡಿದು ಕಾಂಕ್ರಿಟ್ ರಸ್ತೆಗೆ ಎಳೆದು ಬಿಟ್ಟ ಪರಿಣಾಮ ೮೦ ವರ್ಷದ ಅಜ್ಜಿ ನಾಗಮ್ಮಳ ತಲೆ ಕಾಂಕ್ರಿಟ್ ರಸ್ತೆಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ಅಜ್ಜಿಯ ಸಹೋದರ ನಾಗಣ್ಣ ಎಂಬವರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದಾವಿಸಿ ವಿಚಾರ ಮುಟ್ಟಿಸಿದ ಬಳಿಕ ಪಿಎಸ್‌ಐ ಚೇತನ್ ಕುಮಾರ್, ದೆದಾರ್ ದೊಡ್ಡಯ್ಯ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಬಳಿಕ ಪ್ರಕರಣ ದಾಖಲು ಮಾಡಿಕೊಂಡು ಮೃತ ಮಹಿಳೆಯ ಶವವನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಅಪ್ರಾಪ್ತ ಬಾಲಕನ ಬಂಧ0ನಕ್ಕೆ ಬಲೆ ಬೀಸಿದ್ದಾರೆ.