ಬಿಸಿ ಬಿಸಿ ಚರ್ಚೆ, ಮಾತಿನ ಚಕಮಕಿಗೆ ಸಾಕ್ಷಯಾದ ಸಾಮಾನ್ಯ ಸಭೆ
1 min readಬಿಸಿ ಬಿಸಿ ಚರ್ಚೆ, ಮಾತಿನ ಚಕಮಕಿಗೆ ಸಾಕ್ಷಯಾದ ಸಾಮಾನ್ಯ ಸಭೆ
ಸಂಸದರ ಎದುರಿನಲ್ಲಿಯೇ ಸದಸ್ಯರ ಮಾತಿನ ಕುಸ್ತಿ
ನಗರಸಭೆ ಪೈಪ್ ಕಳುವಿನ ಬಗ್ಗೆಯೂ ಮಾತಿನ ಚಕಮಕಿ
ನಿವೇಶನ ಹಂಚಿಕೆಗೆ ಕೊನೆಗೂ ಒಪ್ಪಿಗೆ ಪಡೆದ ಸಭೆ
ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಗಜೇಂದ್ರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಮಾನ್ಯ ಸಭೆ ಭಾರೀ ಗದ್ದಲ, ಬಿಸಿ ಬಿಸಿ ಚರ್ಚೆ, ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ಸಂಸದರ ಎದುರಿನಲ್ಲಿಯೇ ಸದಸ್ಯರು ಮಾತಿನ ಗುದ್ದಾಟ ನಡೆಸಿದ್ದು ವಿಶೇಷವಾಗಿತ್ತು. ಇನ್ನು ನಗರಸಭೆ ಪೈಪುಗಳ ಕಳುವಿಗೆ ಸಂಬAಧಿಸಿ ತೀವ್ರ ಚರ್ಚೆ ನಡೆದು, ತನಿಖೆಗೆ ನೀಡುವ ಭರವಸೆಯಿಂದ ತಣ್ಣಗಾಯಿತು. ಈ ಮಾತಿನ ಜಂಗೀ ಕುಸ್ತಿಯ ನಡುವೆಯೇ ಹಲವು ವಿಚಾರಗಳು ಅನುಮೋದನೆ ಪಡೆಯಲಾಯಿತು.
ಹೌದು, ನಿರೀಕ್ಷೆಯಂತೆ ಚಿಕ್ಕಬಳ್ಳಾಪುರ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆದವು. ಅಷ್ಟೇ ಅಲ್ಲ, ಮಾತಿನ ಚಕಮಕಿಯೂ ನಡೆಯಿತು. ಅಲ್ಲದೆ ತಮ್ಮ ತಪ್ಪು ಮುಚ್ಚಿಕೊಳ್ಳುವ ಭರದಲ್ಲಿ ಸದಸ್ಯರೊಬ್ಬರು ಹೊರಗಿನಿಂದ ಬಂದು ಸದಸ್ಯರಾದವರು ಎಂದು ಹೇಳುವ ಮೂಲಕ ಸದಸ್ಯರ ಆಕ್ರೋಶಕ್ಕೂ ಕಾರಣರಾದರು. ಈ ಎಲ್ಲ ಗೊಂದಲ, ಗದ್ದಲಗಳ ನಡುವೆಯೂ ಸಾರ್ವಜನಿಕರ ಹಿತಾಸಕ್ತಿಯ ವಿಚಾರಗಳು ಚರ್ಚೆ ನಡೆದು ನುಮೋದನೆ ಪಡೆದಿದ್ದು ಇಂದಿನ ಸಾಮಾನ್ಯ ಸಭೆಯ ವಿಶೇಷವಾಗಿತ್ತು.
ಇಂದು ಬೆಳಗ್ಗೆ 11 ಗಂಟೆಗೆ ನಗರಸಭೆ ಸಾಮಾನ್ಯ ಸಭೆ ಕರೆಯಲಾಗಿತ್ತು. ಆದರೆ ನಿಗಧಿತ ಸಮಯಕ್ಕೆ ಆಯುಕ್ತರು, ಉಪಾಧ್ಯಕ್ಷರು ಸೇರಿದಂತೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಸಭೆಗೆ ಹಾಜರಾದರೂ ಅಧ್ಯಕ್ಷರು ಮಾತ್ರ ಹಾಜರಾಗಿದ್ದು 11.30ಕ್ಕೆ. ಹಾಗಾಗಿ ಸಾಮಾನ್ಯ ಸಭೆ 11.30 ಅಧಿಕೃತವಾಗಿ ಆರಂಭವಾಯಿತು. ಸಭೆ ಆರಂಭವಾಗುತ್ತಿದ್ದ0ತೆಯೇ ಮೊದಲ ವಿಷಯವಾಗಿದ್ದ ಹಿಂದಿನ ಸಭೆಯ ನಡಾವಳಿಗಳನ್ನು ಓದಿ ರೆಕಾರ್ಡ್ ಮಾಡುವ ವಿಚಾರಕ್ಕೆ ಸಂಬ0ಧಿಸಿ ೨೦ನೇ ವಾರ್ಡಿನ ಸದಸ್ಯ ನರಸಿಂಹಮೂರ್ತಿ ಮತ್ತು ೧೫ನೇ ವಾರ್ಡಿನ ಅಂಬರೀಷ್ ಅವರು ವಿರೋಧ ವ್ಯಕ್ತಪಡಿಸಿದರು.
ನಗರಸಭೆಯಲ್ಲಿ ಅಧ್ಯಕ್ಷರಿಲ್ಲದೆ ಆಡಳಿತಾಧಿಕಾರಿ ಇದ್ದ ಅವಧಿಯಲ್ಲಿ ಕೋಟ್ಯಂತರ ರುಪಾಯಿ ವ್ಯವಹಾರ ನಡೆದಿದೆ. ಈ ವಿಚಾರಕ್ಕೆ ಸಂಬ0ಧಿಸಿ ಯಾವ ವಾರ್ಡಿನಲ್ಲಿ ಯಾವ ಕಾಮಗಾರಿ ಆಗಿದೆ, ಯಾವ ಕಾಮಗಾರಿ ಆಗಿಲ್ಲ ಎಂಬ ಬಗ್ಗೆ ಸಮಗ್ರ ಪರಿಶೀಲನೆ ನಡೆಯಬೇಕು ಎಂದು ಆಗ್ರಹಿಸಿದರು. ೧೫ನೇ ವಾರ್ಡಿನ ಸದಸ್ಯ ಅಂಬರೀಷ್ ಮಾತನಾಡಿ, ನಗರಸಭೆ ಮುಂಭಗದಲ್ಲಿಯೇ ನಡೆದ ಕಾಮಗಾರಿಯೊಂದಕ್ಕೆ ನಗರಸಭೆಯ ಜೆಸಿಬಿ, ನಗರಸಭೆಯ ಟ್ಯಾಕ್ಟರ್ರ್ ಬಳಸಲಾಗಿದೆ. ಆದರೆ 50 ಸಾವಿರ ಬಿಲ್ ಮಾಡಲಾಗಿದೆ. ಇದು ಉದಾಹರಣೆ ಮಾತ್ರ, ಇಂತಹ ವಿಚಾರಗಳು ಇನ್ನೂ ಎಷ್ಟು ನಡೆದಿವೆ ಎಂಬ ಬಗ್ಗೆ ಪರಿಶೀಲನೆ ನಡೆಯಬೇಕು ಎಂದು ಆಗ್ರಹಿಸಿದರು.
ಅಕ್ರಮ ನಡೆದಿದೆ ಎಂದು ನಾವು ಆರೋಪ ಮಾಡುತ್ತಿಲ್ಲ, ಕಾನೂನಾತ್ಮಕವಾಗಿ ನಡೆದಿದೆಯೇ ಇಲ್ಲವೆ ಎಂಬ ಬಗ್ಗೆ ಪರಿಶೀಲನೆ ನಡೆಯಬೇಕು. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳನ್ನೂ ದೂರುತ್ತಿಲ್ಲ. ಜಿಲ್ಲಾಧಿಕಾರಿಗಳು ಎಲ್ಲವನ್ನೂ ಗಮನಿಸಲು ಸಾಧ್ಯವಿಲ್ಲ. ಹಾಗಾಗಿ ಸದಸ್ಯರೇ ತಮ್ಮ ತಮ್ಮ ವಾರ್ಡುಗಳಲ್ಲಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ, ಮಾಹಿತಿ ನೀಡಬೇಕೆಂದು ಅವರು ಹೇಳಿದರು. ನಗರಸಭೆ ಅಧ್ಯಕ್ಷ ಗಜೇಂದ್ರ ಪ್ರತಿಕ್ರಿಯಿಸಿ, ಈ ಬಗ್ಗೆ ಪರಿಶೀಲನೆ ನಡೆಸಿ, ನಂತರ ಬಿಲ್ ಮಾಡಲು ಸೂಚಿಸುವುದಾಗಿ ಹೇಳಿದ ನಂತರ ಪರಿಸ್ಥಿತಿ ತಿಳಿಯಾಯಿತು.
ಈ ವಿಚಾರಗಳು ಮುಗಿಯುವ ವೇಳೆಗೆ ಸಮಯ 12.30 ಆಗಿತ್ತು. ಇದೇ ಸಮಯಕ್ಕೆ ಸಂಸದ ಡಾ.ಕೆ. ಸುಧಾಕರ್ ಅವರ ಆಗಮನವಾಯಿತು. ಸಂಸದರು ಆಗಮಿಸಿದ್ದಾರೆ ಎಂದು ತಿಳಿಯುತ್ತಿದ್ದಂತೆ ಆಯುಕ್ತರು, ಅಧ್ಯಕ್ಷ, ಉಪಾಧ್ಯಕ್ಷರು ಸಭೆಯಿಂದ ಹೊರ ನಡೆದು, ಸಂಸದರನ್ನು ಸ್ವಾಗತಿಸಿದರು. ನೇರವಾಗಿ ಸಭೆಗೆ ಆಗಮಿಸಿದ ಸಂಸದರು, ತಮ್ಮ ಅವಧಿಯಲ್ಲಿ ಬಡವರಿಗೆ ಸೂರು ಕಲ್ಪಿಸಲು ಮಾಡಿದ್ದ ಯೋಜನೆಯ ಬಗ್ಗೆ ಕ್ರಮ ವಹಿಸುವಂತೆ, ಇಜದು ಬಡವರ ಯೋಜನೆಯಾಗಿದ್ದು, ಇದಕ್ಕೆ ಪ್ರತಿಯೊಬ್ಬ ಸದಸ್ಯರೂ ಕೈ ಜೋಡಿಸುವಂತೆ ಕೋರಿದರು.
ಆದರೆ ಜಮೀನು ನಗರಸಭೆ ವಶಕ್ಕೆ ಬಾರದಿರುವುದು ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳ ಬಗ್ಗೆ ಸದಸ್ಯ ಅಂಬರೀಶ್ ಸೇರಿದಂತೆ ಹಲವರು ಸಂಸದರ ಗಮನಕ್ಕೆ ತಂದರು. ಅಲ್ಲದೆ ಇದಕ್ಕೆ ಹೆಚ್ಚು ವೆಚ್ಚವಾಗಲಿದ್ದು, ಅದಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರದಿಂದ ಮಂಜಡೂರು ಮಾಡಿಸುವಂತೆ ಮಾಜಿ ಅಧ್ಯಕ್ಷ ಆನಂದರೆಡ್ಡಿ ಸಂಸದರನ್ನು ಕೋರಿದರು. ಕೇಂದ್ರ ದಿಂದ ಸಿಗುವ ಅನುದಾನದ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿ, ಅನುದಾನ ತರುವ ಪ್ರಯತ್ನ ಮಾಡುವುದಾಗಿ, ಆಯುಕ್ತರು, ಜಿಲ್ಲಾಧಿಕಾರಿಗಳು ಕೂಡಲೇ ಮಾಡಬೇಕಾದ ಕ್ರಮಗಳನ್ನು ಪೂರೈಸುವಂತೆ ಹೇಳಿದರು.
ಅಲ್ಲದೆ ಮುಂದಿನ ಒಂದು ವರ್ಷದಲ್ಲಿ ನಗರಸಭೆ ಚುನಾವಣೆಗಳು ಎದುರಾಗಲಿದ್ದು, ಹಾಲಿ ಸದಸ್ಯರು ನೀಡಿರುವ ಪಟ್ಟಿಯಂತೆ ಲಾಭನುಭವಿಗಳಿಗೆ ನಿವೇಶನ ಕ್ಕುಪತ್ರಗಳನ್ನು ವಿತರಿಸಲಾಗಿದೆ. ಈ ಯೋಜನೆ ಪೂರ್ಣಗೊಂಡರೆ ಲಾಭನುಭವಿಗಳಿಗೆ ನಿವೇಶನ ಸಿಗುವ ಜೊತೆಗೆ ರಾಜಕೀಯವಾಗಿಯೂ ಹೆಚ್ಚು ಅನುಕೂಲವಾಗಲಿದೆ. ಹಾಗಾಗಿ ಪಕ್ಷಾತೀತವಾಗಿ ಎಲ್ಲ ಸದಸ್ಯರೂ ಬಡವರ ಕಾರ್ಯಕ್ಕೆ ಕೈ ಜೋಡಿಸುವಂತೆ ಕೋರಿದರು. ಈ ವಿಚಾರದಲ್ಲಿ ಹೆಚ್ಚು ಚರ್ಚೆಯಾಗದೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.
ಕೇವಲ ನಿವೇಶನ ವಿಚಾರವಾಗಿ ಮಾತ್ರ ಮಾತನಾಡಿ, ಒಪ್ಪಿಗೆ ಪಡೆದ ಸಂಸದರು ಸಭೆಯಿಂದ ಹೊರ ನಡೆದರು. ಸಂಸದರ ನಿರ್ಗಮನದ ಕಾರಣ ಸುಮಾರು ಅರ್ಧ ಗಂಟೆ ಕಾಲ ಸಭೆಯನ್ನು ಮುಂದೂಡಲಾಗಿತ್ತು. ನಂತರ ಸಭೆ ಆರಂಭವಾಗುತ್ತಿದ್ದAತೆ ಸಭೆಯಲ್ಲಿ ಊಟದ ವಿಚಾರ ಪ್ರಸ್ತಾಪವಾಗಿ, ಕುಳಿತಿದ್ದ ಸದಸ್ಯರಿಗೆ ಅವರ ಜಾಗಕ್ಕೆ ಊಟ ಸರಬರಾಜು ಮಾಡಲಾಯಿತು. ಊಟದ ಸಮಯ ಆಗಿದ್ದ ಕಾರಣ ಸದಸ್ಯರು ತಕುಳಿತಿದ್ದ ಜಾಗಕ್ಕೇ ಊಟ ಸರಬರಾಜು ಮಾಡಲಾಯಿತು. ಇದರಿಂದ ಸದಸ್ಯ ಅಂಬರೀಶ್ ಮಧ್ಯಪ್ರವೇಶ ಮಾಡಿ, ಸದಸ್ಯರು ಊಟ ಮಾಡಲಾದರೂ ಸಮಯ ಕೊಡಿ ಎಂದು ಕೋರಿದರು. ಹಾಗಾಗಿ ಸಭೆಯನ್ನು ಮತ್ತೆ 10 ನಿಮಿಷ ಮುಂದೂಡಲಾಯಿತು.
ಊಟ ಮಗಿಸಿದ ನಂತರ ಸಭೆ ಆರಂಭವಾಗುತ್ತಿದ್ದ0ತೆಯೇ ನಗರಸಭೆಗೆ ಸೇರಿದ ಪೈಪುಗಳ ಕಳು ಪ್ರಕ ಣಕ್ಕೆ ಸಂಬ0ಧಿಸಿ ಭಾರೀ ಕೋಲಾಹಲವೇ ಎದ್ದಿತು. ನಗರಸಭೆ ಕೊಳವೆ ಬಾವಿಯಲ್ಲಿ ಪೈಪುಗಳ ಕಳುವಾಗಿರುವ ಬಗ್ಗೆ 20ನೇ ವಾರ್ಡಿನ ಸದಸ್ಯ ನರಸಿಂಹಮೂರ್ತಿ ಪ್ರಸ್ತಾಪ ಮಾಡಿದರೆ, ಈ ಕುರಿತು ಸಮರ್ಪಕ ತನಿಖೆ ಆಗಬೇಕು ಎಂದು 15ನೇ ವಾರ್ಡಿನ ಸದಸ್ಯ ಅಂಬರೀಶ್ ಒತ್ತಾಯಿಸಿದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಗಜೇಂದ್ರ, ಈ ವಿಚಾರ ಈಗಾಗಲೇ ತನಿಖೆಯಾಗಿ ಪ್ರಕರಣ ನಡೆದಿಲ್ಲ ಎಂಬುದು ತಿಳಿದಿರುವ ಕಾರಣ ಈ ವಿಚಾರ ಕೈಬಿಡಬೇಕೆಂದು ಹೇಳಿದರು.
ಆದರೆ ಅಧ್ಯಕ್ಷರ ಮಾತಿಗೆ ಒಪ್ಪದ ಸದಸ್ಯರು ಈ ಸಂಬ0ಧ ನಗರಸಭೆ ಅಧಿಕಾರಿಗಳೇ ದೂರು ನಡೀಇದ್ದಾರೆ. ಈ ಸಂಬAಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗಿದ್ದರೂ ಪ್ರಕರಣವನ್ನು ಹಗುರವಾಗಿ ಪರಿಗಣಿಸಬಾರದು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ, ಸತ್ಯಾಸತ್ಯತೆ ಬಯಲಿಗೆ ಎಳೆಯಬೇಕೆಂದು ಆಗ್ರಹಿಸಿದರು. ಅದೇ ಸಮಯಕ್ಕೆ ಮಧ್ಯ ಪ್ರವೇಶ ಮಾಡಿದ 18ನೇ ವಾರ್ಡಿನ ಸದಸ್ಯ ಎ.ಬಿ. ಮಂಜುನಾಥ್, ಹೊರ ಊರುಗಳಿಂದ ಬದವರು ಇಲ್ಲಿ ಸದಸ್ಯರಾಗಿದ್ದಾರೆ ಎಂದು ಹೇಳುವ ಮೂಲಕ ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ಪಡೆಯಲು ಕಾರಣರಾದರು.
ಹೊರ ಊರಿನಿಂದ ಬಂದು, ನಗರಸಭೆ ಸದಸ್ಯರಾಗಬಾರದು ಎಂಬ ನಿಯಮವಿದೆಯೇ, ಈ ವಿಚಾರ ಹೇಳಲು ಇವರು ಯಾರು, ಪೈಪುಗಳ ಕಳುವಿನ ಬಗ್ಗೆ ಸಮರ್ಪಕ ತನಿಖೆಯಾಗಬೇಕು ಎಂದು ನರಸಿಂಹಮೂರ್ತಿ ಮತ್ತು ಅಂಬರೀಶ್ ಪಟ್ಟು ಹಿಡಿದರು. ಆದರೆ ಅಧ್ಯಕ್ಷರು ಅಜೆಂಡಾದಲ್ಲಿ ಇಲ್ಲದ ವಿಚಾರ ಪ್ರಸ್ತಾಪ ಮಾಡಬಾರದು, ಎಂದು ತೆರೆ ಎಳೆಯುವ ಪ್ರಯತ್ನ ಮಾಡಿದರು. ಆದರೆ ಸದಸ್ಯರು ಅಧ್ಯಕ್ಷರ ಮಾತಿಗೆ ಒಪ್ಪದ ಕಾರಣ ಮಧ್ಯ ಪ್ರವೇಶ ಮಾಡಿದ ಸದಸ್ಯ ಕಣಿತಹಳ್ಳಿ ವಂಕಟೇಶ್, ಈ ಪ್ರಕರಣದ ಬಗ್ಗೆ ಸಾರ್ವಜನಿಕರು ದೂರು ನಡೀಇದ್ದಾರೆ. ಹಾಗಾಗಿ ಸಮರ್ಪಕವಾಗಿ ತನಿಖೆ ನಡೆಸಿ, ಅದರ ಸತ್ಯಾಸತ್ಯತೆ ಹೊರಗಿಡುವಂತೆ ಸೂಚಿಸಿದರು. ಇದಕ್ಕೆ ಆಯುಕ್ತರು ಮತ್ತು ಅಧ್ಯಕ್ಷ ತೆಯರು ಒಪ್ಪಿದ ಕಾರಣ ಪರಿಸ್ಥಿತಿ ತಿಳಿಯಾಯಿತು.
ನಂತರ ಮಾತನಾಡಿದ ನಗರಸಭೆ ಉಪಾಧ್ಯಕ್ಷ ನಾಗರಾಜ್ ಜೆ, ಐಡಿಎಸ್‌ಎಂಟಿ ಬಡಾವಣೆಯಲ್ಲಿ ಸುಮಾರು ಒಂದೂವರೆ ಎಕರೆ ಪ್ರದೇಶ ಉದ್ಯಾನಕ್ಕಾಗಿ ಮೀಸಲಿಟ್ಟಿದ್ದು, ಈ ಏಜ್ಞಡಿಕ್ಷಿ ಪ್ರಸ್ತುತ ಪಾಳುಬಿದ್ದಿದೆ. ಆದರೆ ಅದನ್ನು ನೆನಪಿನ ಉದ್ಯಾನ ಎಂದು ನಾಮಕರಣ ಮಾಡಿ, ಚಿಕ್ಕಬಳ್ಳಾಪುರಕ್ಕೆ ಬರುವ ಗಣ್ಯರಿಂದ ಒಂದೊAದು ಗಿಡ ನೆಡಿಸಿದಲ್ಲಿ ಅದು ಶಾಶ್ವತವಾಗಿ ಉಳಿಯುವ ಜೊತೆಗೆ ಅದೊಂದು ಸ್ಮಾರಕ ಉದ್ಯಾನವಾಗಿ ಉಳಿಯಲಿದೆ ಎಂದು ಪ್ರಸ್ತಾವನೆ ಸಲ್ಲಿಸಿದರು. ಇದಕ್ಕೆ ಎಲ್ಲ ಸದಸ್ಯರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.
ಉಳಿದಂತೆ ನಗರಸಭೆ ಸಿಬ್ಬಂದಿ ಅನಾರಾಗ್ಯ ಪೀಡಿತರಾಗಿದ್ದು, ಅವರಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆದು, ಹಿರಿಯ ಪತ್ರಕರ್ತರೊಬ್ಬರಿಗೂ ಇತ್ತೀಚಿಗೆ ಅನಾರೋಗ್ಯ ನಿಮಿತ್ತ ವೆಚ್ಚವಾಗಿದ್ದು, ಅವರೂ ಪರಿಹಾರಕ್ಕಾಗಿ ನಗರಸಬೆಗೆ ಮನವಿ ಸಲ್ಲಿಸಿದ್ದು, ಇಬ್ಬರಿಗೂ ತಲಾ 25 ಸಾವಿರದಂತೆ ಪರಿಹಾರ ನೀಡಲು ಸಭೆ ಒಪ್ಪಿಗೆ ಸೂಚಿಸಿತು. ನಗರಸಭೆಯ ಎಲ್ಲ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.