ಉಚ್ಛಾಟನೆ ಮಾಡಿದ ಪತ್ರ ಬಿಡುಗಡೆ ಮಾಡಿದ ಜಿಲಾಧ್ಯಕ್ಷ
1 min readಮುಂದುವರಿದ ಜೆಡಿಎಸ್ ಮುಖಂಡರ ಟಾಕ್ ವಾರ್
ಉಚ್ಛಾಟನೆ ಮಾಡಿದ ಪತ್ರ ಬಿಡುಗಡೆ ಮಾಡಿದ ಜಿಲಾಧ್ಯಕ್ಷ
ಇಬ್ಬರು ನಗರಸಭಾ ಸದಸ್ಯರು ಪಕ್ಷದಿಂದ ಉಚ್ಛಾಟನೆ
ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಜೆಡಿಎಸ್ ಮುಖಂಡರ ಟಾಕ್ ವಾರ್ ಜೋರಾಗಿ ನಡೆಯುತ್ತಿದೆ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಜೆಡಿಎಸ್ ನಗರಸಭೆ ಸದಸ್ಯರು, ನೆನ್ನೆಯಷ್ಟೇ ಸುದ್ದಿಗೋಷ್ಟಿ ನಡೆಸಿ ನಾವು ಯಾವುದೇ ತಪ್ಪು ಮಾಡಿಲ್ಲಾ ಹಾಗೂ ಪಕ್ಷದಿಂದ ಉಚ್ಚಾಟನೆ ಆಗಿಲ್ಲಾ ಎಂದು ಸ್ಪಷ್ಟಪಡಿಸಿದರು. ಆದರೆ ಇಂದು ಜೆಡಿಎಸ್ ಜಿಲ್ಲಾಧ್ಯಕ್ಷರು ಸುದ್ದಿಗೋಷ್ಟಿ ನಡೆಸಿ ನಗರಸಭೆ ಸದಸ್ಯ ಆರ್. ಮಟಮಪ್ಪ ಹಾಗೂ ವೀಣಾರಾಮು ಅವರ ವಿರುದ್ದ ಕಿಡಿಕಾರಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತಾಮುನಿಯಪ್ಪ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಜೆಡಿಎಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿ ಪಕ್ಷದ ವಿಫ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ನಗರಸಭೆ ಸದಸ್ಯರರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಹಿಂದೆ ವಿಪ್ ಉಲ್ಲಂಘಿಸಿದ ಸದಸ್ಯರ ವಿರುದ್ಧ ಕ್ರಮಕ್ಕೆ ವರಿಷ್ಠ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದು, ಕುಮಾರಸ್ವಾಮಿ ಅವರು ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷರಿಂದ ಯಾವುದೇ ಚುಟುವಟಿಕೆಗಳು ನಡೆದಿಲ್ಲಾ, ಅವರಿಂದಲೇ ಕ್ಷೇತ್ರದಲ್ಲಿ ಜೆಡಿಎಸ್ ನಾಶವಾಗಿದೆ ಎಂಬ ಆರೋಪಕ್ಕೆ ತಿರುಗೇಟು ಕೊಟ್ಟ ಮುಖಂಡರು, ಜಿಲ್ಲಾಧ್ಯಕ್ಷರು ಆರ್ಥಿಕವಾಗಿ , ಪಕ್ಷದ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಆದರೆ ನೀವು ಹಣಗಳಿಸುವ ಉದ್ದೇಶದಿಂದ ಪಕ್ಷದ ವಿರೋಧಿ ಚಟುವಟಿಕೆ ಮಾಡಿ ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ಸುಳ್ಳು ಆರೋಪ ಮಾಡುವುದು ಸರಿಯಿಲ್ಲಾ ಎಂದು ಎಚ್ಚರಿಕೆ ನೀಡಿದರು.
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ವೇಳೆ ಜೆಡಿಎಸ್ ಸದಸ್ಯರಿಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ ಪರಿಣಾಮ ಜೆಡಿಎಸ್‌ನಿಂದ ವಿಪ್ ಉಲ್ಲಂಘಿಸಿದ ಆರೋಪದ ಮೇಲೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಇದರ ಬೆನ್ನಲ್ಲೆ ಸುದ್ದಿಗೋಷ್ಠಿ ನಡೆಸಿದ ನಗರಸಭಾ ಸದಸ್ಯ ಮಟಮಪ್ಪ, ಜೆಡಿಎಸ್ ವರಿಷ್ಠರಿಂದ ಯಾವುದೇ ಉಚ್ಚಾಟನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಈ ಹಿಂದೆ ಜೆಡಿಎಸ್ ವರಿಷ್ಠರಾದಂತಹ ಕುಮಾರಸ್ವಾಮಿ ಅವರು ಪಕ್ಷದ ವಿರುದ್ಧ ಮತ ಚಲಾಯಿಸಿದ್ದ ಇಬ್ಬರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಜಿಲ್ಲೆಯ ಜೆಡಿಎಸ್ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 28 ರಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಗರಸಭಾ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ ನಗರಸಭೆ ಸದಸ್ಯ ಮಟಮಪ್ಪ ಹಾಗೂ ವೀಣಾ ರಾಮು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷರಿಗೆ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ನಗರಸಭೆ ಸದಸ್ಯರ ಮನೆಗಳಿಗೆ ತೆರಳಿ ನೋಟಿಸ್ ನೀಡಿದ್ದರು. ನಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸುಳ್ಳು ಹೇಳಿರುವುದು ಈಗ ನಗೆ ಪಾಟಲಿಗೆ ಕಾರಣವಾಗಿದೆ ಎಂದರು.
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ವಿಫ್ ಉಲ್ಲಂಘಿಸಿದ ಹಿನ್ನೆಲೆ ಪಕ್ಷದಿಂದ ಉಚ್ಚಾಟನೆ ಮಾಡಲು ನಗರಸಭೆ ಸದಸ್ಯರ ಮನೆಯ ಮುಂಭಾಗ ನೋಟಿಸ್ ಅಂಟಿಸಲಾಗಿತ್ತು. ಪಕ್ಷದ ವರಿಷ್ಠರಿಂದ ಮಾಹಿತಿ ಬಂದಿಲ್ಲ ಎಂದು ಇಲ್ಲಸಲ್ಲದ ಸುಳ್ಳು ಆರೋಪಗಳನ್ನ ನಗರಸಭೆ ಸದಸ್ಯ ಮಟಮಪ್ಪ ಮಾಡಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.
https://www.youtube.com/watch?v=uWt8qLWDKJw