ದಶಕಗಳಿಂದ ಇದ್ದ ರಸ್ತೆ ಸಮಸ್ಯೆಗೆ ಕೊನೆಗೂ ಮುಕ್ತಿ
1 min readದಶಕಗಳಿಂದ ಇದ್ದ ರಸ್ತೆ ಸಮಸ್ಯೆಗೆ ಕೊನೆಗೂ ಮುಕ್ತಿ
ಗ್ರಾಪಂ ಸದಸ್ಯರ ನೇತೃತ್ವದಲ್ಲಿ ರಸ್ತೆ ಬಿಡಿಸಿಕೊಟ್ಟ ಅಧಿಕಾರಿಗಳು
ಅದು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆ. ದಶಕಗಳು ಕಳೆದರೂ ಆ ರಸ್ತೆ ಅಭಿವೃದ್ಧಿಯಾಗಿಲ್ಲ. ಇನ್ನು ಅಭಿವೃದ್ಧಿಯಾಗದ ರಸ್ತೆ ಯಾಕಬೇಕು ಎನಿಸಿಕೋ ಏನೋ, ಅಕ್ಕಪಕ್ಕದ ಜಮೀನಿನವರು ಆ ರಸ್ತೆಯನ್ನೂ ಒತ್ತುವರಿ ಮಾಡಿದ್ದರು. ಇದರಿಂದ ಆ ಗ್ರಾಮದ ಜನ ರಸ್ತೆಯಿಲ್ಲದ ಕಾರಣ ತಹಸೀಲ್ದಾರ್ ಸೇರಿದಂತೆ ಸಂಬ0ಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಉಪಯೋಗವಾಗಿರಲಿಲ್ಲ. ಆದರೆ ಕೊನೆಗೂ ಒಬ್ಬರು ಸಮಸ್ಯೆ ಬಗೆಹರಿಸಿದರು. ಹಾಗಾದರೆ ಸಮಸ್ಯೆ ಬಗೆಹರಿಸಿದವರು ಯಾರು, ಎಲ್ಲಿನ ಸಮಸ್ಯೆ ಅದು, ಅನ್ನದೋದನ್ನ ನೋಡೋಣ ಬನ್ನಿ.
ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯನ್ನು ಅಭಿವೃದ್ದಿ ಮಾಡುವಂತೆ ಗ್ರಾಮಸ್ಥರು ಹಲವು ಬಾರಿ ತಹಸೀಲ್ದಾರ್ ಸೇರಿದಂತೆ ಸಂಬ0ಧಿಸಿದ ಎಲ್ಲ ಅಧಿಕಾರಿಗಳಿಗೂ ಮೊರೆ ಇಟ್ಟಿದ್ದರು. ಆದರೆ ಅದುಲ ನೀಡಿರಲಿಲ್ಲ. ಆರಂಭದಲ್ಲಿದ್ದ ಎತ್ತಿನ ಗಾಡಿ ದಾರಿಯನ್ನೂ ಅಕ್ಕಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡ ಪರಿಣಾಮ ಅಲ್ಲಿ ರಸ್ತೆ ಇದೆ ಎಂಬುದೇ ಮರೆಯುವಂತೆ ಮಾಡಿತ್ತು. ಇದರಿಂದ ಆ ಗ್ರಾಮಸ್ಥರು ಸಂಚರಿಸಲು ತೀವ್ರ ಸಂಕಷ್ಟ ಎದುರಾಗಿತ್ತು. ಈ ಸಮಸ್ಯೆ ನಿರಂತರವಾಗಿದ್ದ ಕಾರಣ ಅದನ್ನು ಪರಿಹರಿಸಲು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮುಂದೆ ಬಂದು, ಗ್ರಾಮಸ್ಥರಿಗೆ ನ್ಯಾಯ ಮತ್ತು ರಸ್ತೆ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು ೩೦ ವರ್ಷಗಳಿಂದ ಇದ್ದ ರಸ್ತೆ ಸಮಸ್ಯೆ ಬಗೆ ಹರಿಸುವಲ್ಲಿ ಗ್ರಾಮ ಪಂಚಾಯತಿ ಸದಸ್ಯ ಆನಂದ್ ಯಶಸ್ವಿಯಾಗಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಯಲವಳ್ಳಿ ಯಿಂದ ಶ್ರೀನಿವಾಸಪುರ ಮುಖ್ಯ ರಸ್ತೆ ವರೆಗೆ ಬಂಡಿದಾರಿಯಿತ್ತು. ಆದರೆ ರಸ್ತೆ ಬದಿಯ ಜಮೀನು ಮಾಲೀಕರು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರು. ಇದರಿಂದ ಹಲವು ವರ್ಷಗಳಿಂದ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಜಮೀನು ಮಾಲೀಕರು ರಸ್ತೆ ಸಮಸ್ಯೆ ಎದುರಿಸುವಂತಾಗಿದ್ದು.
ಈ ರಸ್ತೆ ಬಗೆಹರಿಸುವಂತೆ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ. ಕಳೆದ 7 ದಿನಗಳ ಹಿಂದೆ ಗ್ರಾಮಸ್ಥರು ಮತ್ತೆ ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿದ್ದು, ಸ್ಥಳಕ್ಕೆ ತಾಲೂಕು ದಂಡಾಧಿಕಾರಿ, ಕಂದಾಯ ಇಲಾಖೆ ಹಾಗು ಸರ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸರ್ವೇ ಮಾಡಿದ್ದಾರೆ. ನಂತರ ಒತ್ತುವರಿಯಾಗಿದ್ದ ಜಮೀನು ಹೆಬ್ಬಟ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಆನಂದ್ ಮುಂದಾಲತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಒತ್ತುವರಿ ತೆರವುಗೊಳಿಸಿ ರಸ್ತೆ ಸಮಸ್ಯೆ ಬಗೆಹರಿಸಿದ್ದಾರೆ. ರಸ್ತೆ ಸಮಸ್ಯೆ ಬಗೆಹರಿಸಿಕೊಟ್ಟ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಆನಂದ್ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.