ಕೋವಿಡ್ ಹಗರಣದ ವರದಿ ಸಂಪೂರ್ಣ ರಾಜಕೀಯ ಷಡ್ಯಂತ್ರ
1 min readಕೋವಿಡ್ ಹಗರಣದ ವರದಿ ಸಂಪೂರ್ಣ ರಾಜಕೀಯ ಷಡ್ಯಂತ್ರ
ಸಚಿವ ಎಂ.ಬಿ.ಪಾಟೀಲ್ ಸ್ವಲ್ಪ ತಿಳಿವಳಿಕೆಯಿಂದ ಮಾತಾಡಬೇಕು
ರಾಜ್ಯ ಸರ್ಕಾರದ ವಿರುದ್ಧ ಸಂಸದ ಡಾ.ಕೆ.ಸುಧಾಕರ್ ಆಕ್ರೋಶ
ಕೋವಿಡ್ ಹಗರಣದ ವರದಿ ಸಂಪೂರ್ಣ ರಾಜಕೀಯ ಷಡ್ಯಂತ್ರ. ಸಚಿವ ಎಂ.ಬಿ.ಪಾಟೀಲ್ ಸ್ವಲ್ಪ ತಿಳಿವಳಿಕೆಯಿಂದ ಮಾತಾಡಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು. ದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಗರಣದ ವರದಿಯಲ್ಲಿ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆಯೇ ಎಂದು ನೋಡಬೇಕು ಎಂದರು.
ಕೋವಿಡ್ ಹಗರಣದ ವರದಿ ಸಂಪೂರ್ಣ ರಾಜಕೀಯ ಷಡ್ಯಂತ್ರ. ಸಚಿವ ಎಂ.ಬಿ.ಪಾಟೀಲ್ ಸ್ವಲ್ಪ ತಿಳಿವಳಿಕೆಯಿಂದ ಮಾತಾಡಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು. ದೇವನಹಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಚಿವ ಎಂ.ಬಿ.ಪಾಟೀಲ್ ಅವರು ಸಂಸ್ಕಾರವAತರು ಹಾಗೂ ವಿದ್ಯಾವಂತರು ಎಂದು ತಿಳಿದಿದ್ದೇನೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಹೀಗೆ ಮಾತನಾಡಿದರೆ ಏನು ಹೇಳಬೇಕು, ಕೈಗಾರಿಕಾ ಇಲಾಖೆಯಲ್ಲಿ ನಡೆದ ಎಲ್ಲ ಅಕ್ರಮಕ್ಕೆ ಎಂ.ಬಿ.ಪಾಟೀಲ್ ಹೊಣೆ ಎನ್ನಬೇಕೆ, ರೈಲ್ವೆ ಅಪಘಾತವಾದರೆ ಅದಕ್ಕೆ ಸಂಪೂರ್ಣ ರೈಲ್ವೆ ಸಚಿವರೇ ಕಾರಣವಾಗುತ್ತಾರಾ, ಸ್ವಲ್ಪ ತಿಳಿವಳಿಕೆಯಿಂದ ಮಾತಾಡಬೇಕು ಎಂದರು.
ಇದು ಸಂಪೂರ್ಣ ರಾಜಕೀಯ ಷಡ್ಯಂತ್ರ. ಮುಖ್ಯಮಂತ್ರಿಗಳ ಭವಿಷ್ಯ ಕೋರ್ಟಿನಲ್ಲಿದ್ದು, ಅದು ಡೋಲಾಯಮಾನವಾಗಿದೆ. ನಿವೃತ್ತ ನ್ಯಾಯಾಧೀಶರ ಬಳಿ ರಾತ್ರೋರಾತ್ರಿ ತರಿಸಿಕೊಂಡ ಈ ವರದಿಯಲ್ಲಿ ಏನಿದೆ ಎಂದು ತಿಳಿಸಲಿ. ಕೋವಿಡ್ ನಿರ್ವಹಣೆಯನ್ನು ಒಬ್ಬ ಸಚಿವ ಮಾಡಿಲ್ಲ. ಅದನ್ನು ಇಡೀ ಸರ್ಕಾರ ಮಾಡಿದೆ. ಉತ್ತಮ ಕೋವಿಡ್ ನಿರ್ವಹಣೆಗಾಗಿ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿಯೂ ಬಂದಿದೆ. ತಾಂತ್ರಿಕ ಸಮಿತಿ, ತಜ್ಞರ ಸಮಿತಿ, ಅಧಿಕಾರಿಗಳ ತಂಡ ಅಲ್ಲಿತ್ತು. ಯಾವುದೇ ನಿರ್ಧಾರವನ್ನು ಒಬ್ಬ ವ್ಯಕ್ತಿ ಕೈಗೊಂಡಿಲ್ಲ. ನಾನು ಕೂಡ ಆ ತಂಡದಲ್ಲಿ ಒಬ್ಬ ಸದಸ್ಯನಾಗಿದ್ದೆ ಎಂದರು.
ದಿಶಾ ಸಭೆಯ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರದ ಭೂಜಲ, ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ಯೋಜನೆಗಳ ಪ್ರಗತಿ ಬಗ್ಗೆ ಮಾಹಿತಿ ಪಡೆಯಲಾಗಿದೆ. ನಾನು ಆರೋಗ್ಯ ಸಚಿವನಾಗಿದ್ದಾಗ ಆಯುಷ್ಮಾನ್ ಕಾರ್ಡ್ ವಿತರಿಸುವ ಕಾರ್ಯ ವೇಗವಾಗಿ ಸಾಗಿತ್ತು. ಆದರೆ ಕಳೆದ 15 ತಿಂಗಳಿ0ದ ಇಡೀ ರಾಜ್ಯದಲ್ಲಿ ಕಾರ್ಡ್ ವಿತರಣೆ ನಿಧಾನಗತಿಯಲ್ಲಿ ಸಾಗಿದೆ. ಶೇ.100 ರಷ್ಟು ಅನುಷ್ಠಾನವಾದರೆ ಎಲ್ಲರಿಗೂ 5 ಲಕ್ಷ ರೂ. ಆರೋಗ್ಯ ವಿಮೆ ದೊರೆಯುತ್ತದೆ. ಇಂತಹ ಯೋಜನೆ ಬೇರೆ ಯಾವುದೇ ದೇಶದಲ್ಲಿಲ್ಲ. ಇದೇ ರೀತಿ ಉಚಿತ ನಿವೇಶನ, ವಸತಿ ಯೋಜನೆಗಳ ಬಗ್ಗೆ ಚರ್ಚಿಸಿದ್ದೇನೆ. ಎಲ್ಲ ಯೋಜನೆಗಳಿಗೆ ಒತ್ತು ನೀಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂಚೂಣಿ ಸಾಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.