ಸಿಎಂ ಕುರ್ಚಿ ಖಾಲಿಯಿಲ್ಲ. ಅಲ್ಲಿ ಟಗರು ಕೂತಿದೆ. ಸುಲಭವಾಗಿ ಕೆಳಗೆ ಇಳಿಸೋಕೆ ಆಗಲ್ಲ; ಸಚಿವ ಜಮೀರ್ ಅಹಮ್ಮದ್
1 min read
ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಅಲ್ಲಿ ಟಗರು ಕೂತಿದೆ. ಅಷ್ಟು ಸುಲಭವಾಗಿ ಕೆಳಗೆ ಇಳಿಸೋಕೆ ಆಗಲ್ಲ. ಟಗರು ಕೊಂಬು ಮುರಿಯೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಜಮೀರ್ ಅಹಮ್ಮದ್ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಕ್ಪ್ ಅದಾಲತ್ ಸಭೆ ಬಳಿಕ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಅವರು, ನನಗೂ ಮುಖ್ಯಮಂತ್ರಿಯಾಗುವ ಸಿಎಂ ಆಗುವ ಆಸೆ ಇದೆ, ನಿಮಗೆ ಇಲ್ಲವೇ ಎಂದು ಪ್ರಶ್ನಿಸಿದರು.
ಸಿಎಂ ಆಸೆ ಎಲ್ಲರಿಗೂ ಇದೆ. ಯಾರಿಗೆ ಇರುವುದಿಲ್ಲ ಹೇಳಿ ನಿಮಗೆ ಮುಖ್ಯಮಂತ್ರಿಯಾಗುವ ಆಸೆ ಇಲ್ಲವೇ, ಪರೋಕ್ಷವಾಗಿ ನನಗೂ ಸಿಎಂ ಆಸೆ ಇದೆ ಎಂದು ಜಮೀರ್ ಅಹ್ಮದ್ ಎಂದು ಪುನರುಚ್ಚರಿಸಿದರು.
ಶಿಗ್ಗಾಂವಿ ಉಪ ಚುನಾವಣೆ ವಿಚಾರ ಈ ಬಾರಿಯೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಿ ಎಂದು ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ. ಐದು ಸಲ ಸೋತಿದ್ದಾರೆ ಬೇಡ ಎಂದಿದ್ದಾರೆ.
ಈ ಸಲವೂ ಕೊಡಿ. ನಾವು ಗೆಲ್ಲಿಸುತ್ತೇವೆ ಎಂದಿದ್ದೇವೆ ನಿರೀಕ್ಷೆ ಇದೆ ಕೊಡುತ್ತಾರೆ ಎಂದು. ಆದರೆ ಕೇಳುವುದು ನಮ್ಮ ಕರ್ತವ್ಯ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಂಡು ಬರುತ್ತೇವೆ ಕಾಂಗ್ರೆಸ್ ನಲ್ಲಿ ಪೈಟ್ ಇದೆ ಎಂದರೆ ಗೆಲ್ಲುತ್ತೇವೆ ಎಂದರ್ಥ ಅಲ್ಲಿ ಡಿಮ್ಯಾಂಡ್ ಇದೆ ಅದಕ್ಕೆ ಕಾಂಗ್ರೆಸ್ ನಿಂದ ಟಿಕೆಟ್ ಕೇಳುತ್ತಿದ್ದಾರೆ. ಅಂತಿಮವಾಗಿ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ
ಕೇಂದ್ರ ಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಹಗಲು ಕಸನು ಕಾಣುತ್ತಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 30 ಸಾವಿರ ಲೀಡ್ ನಲ್ಲಿ ಗೆಲ್ಲುತ್ತೇವೆ ಎಂದು ಎಚ್ಡಿಕೆಗೆ ತಿರುಗೇಟು ನೀಡಿದರು.
ನೂತನ ಸಂಸದ ಬಸವರಾಜ್ ಬೊಮ್ಮಾಯಿ ಅವರು ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸದಸ್ಯದಲ್ಲೇ ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ನಿಂದ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲು ಜಮೀರ್ ಅಹಮ್ಮದ್ ಆಗ್ರಹಿಸಿದ್ದಾರೆ.
ಈ ಬಾರಿಯೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಿ ಎಂದು ಹೈಕಮಾಂಡ್ಗೆ ಮನವಿ ಮಾಡಿದ್ದೇವೆ. ಐದು ಸಲ ಸೋತಿದ್ದಾರೆ ಬೇಡ ಎಂದಿದ್ದಾರೆ. ಈ ಸಲವೂ ಕೊಡಿ. ನಾವು ಗಲ್ಲಿಸುತ್ತೇವೆ ಎಂದಿದ್ದೇವೆ. ಟಿಕೆಟ್ ಸಿಗುವ ನಿರೀಕ್ಷೆ ಇದೆ ಕೊಡುತ್ತಾರೆ ಎಂದು ಹೇಳಿದರು.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday