ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಹಿರಿಯ ಅಧಿಕಾರಿಗಳ ಆದೇಶಗಳನ್ನೂ ಪಾಲಿಸದ ನಗರಸಭೆ

1 min read

ಹಿರಿಯ ಅಧಿಕಾರಿಗಳ ಆದೇಶಗಳನ್ನೂ ಪಾಲಿಸದ ನಗರಸಭೆ

ನಾಮಫಲಕಗಳು ಕಾಣುವಂತೆ ಹಾಕಲು ಆದೇಶವಿದ್ದರೂ ಗಮನವಿಲ್ಲ

ಚಿಕ್ಕಬಳ್ಳಾಪುರ ಮಾತ್ರವಲ್ಲದೆ ಎಲ್ಲ ಸಂಸ್ಥೆಗಳಲ್ಲಿಯೂ ಇದೇ ಸ್ಥಿತಿ

ಖುದ್ದು ಭೇಟಿ ನಡೀಇ ಪರಿಶೀಲಿಸಿ, ಸೂಚನೆ ನೀಡಿದ ಪಿಡಿ

ಅದು ಇಢೀ ನಗರವನ್ನು ಸ್ವಚ್ಛವಾಗಿಡೋ ನಗರಸಭೆ ಕಚೇರಿ. ಅಲ್ಲಿ ಸಾರ್ವಜನಿಕರಿಗೆ ನುಕೂಲವಾಗುವಂತೆ ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂಬುದು ಸರ್ಕಾರಿ ನಿಯಮ. ಆದರೆ ಜಿಲ್ಲಾಕೇಂದ್ರ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಮಾತ್ರ ಇಂತಹ ಯಾವುದೇ ಸೌಲಭ್ಯಗಳಿಲ್ಲ. ಇನ್ನು ಸೌಲಭ್ಯಗಳಿಲ್ಲ ಎಂಬುದನ್ನು ನೋಡಿದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸರಿಪಡಿಸಿ ವರದಿ ನೀಡುವಂತೆ ಸೂಚನೆ ನೀಡಿದರೂ ಅಧಿಕಾರಿಗಳು ಮಾತ್ರ ಖ್ಯಾರೆ ಎನ್ನುತ್ತಿಲ್ಲ.

ಹೌದು, ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳೇ ಹಾಗೆ, ಮಾಡಬೇಕಾದ ಯಾವುದೇ ಕೆಲಸ ಮಾಡಲ್ಲ ಎಂಬುದಕ್ಕೆ ಈ ಸ್ಟೋರಿ ನಿದರ್ಶನ. ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಇತ್ತೀಚಿಗೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ನಗರಸಭೆ ಸೇರಿದಂತೆ ಪಟ್ಟಣ ಪಂಚಾಯಿತಿ ಮತ್ತು ಪುರಸಭೆಗಳಲ್ಲಿ ಕಂಡ ಸಮಸ್ಯೆಗಳನ್ನು ಕೂಡಲೇಸರಿಪಡಿಸಿ ವರದಿ ನಡೆಯುವಂತೆ ಸೂಚನೆ ನೀಡಿದ್ದಾರೆ. ಆದರೆ ಪಾಪ ನಮ್ಮ ನಗರ ಸ್ಥಳೀಯ ಸಂಸ್ಥೆಗಳ ಅಧಿಕರಿಗಳಿಗೆ ಪುರುಸೊತ್ತೇ ಇಲ್ಲ್ಲದ ಕಾರಣ ಆ ಸಮಸ್ಯೆಗಳ ಪರಿಹಾರದತ್ತ ಗಮನವೂ ಹರಿಸಿಲ್ಲ.

ಇಷ್ಟಕ್ಕೂ ನಗರಸಭೆಗಳಲ್ಲಿ ಇರುವ ಸಮಸ್ಯೆಗಳಾದರೂ ಏನು, ಯೋಜನಾ ನಿರ್ದೇಶಕರು ಸೂಚನೆ ನೀಡಿರುವುದಾದರೂ ಏನು ಅಂತೀರಾ, ಇಲ್ಲೊಮ್ಮೆ ನೋಡಿ. ಇದು ನಗರಸಭೆಯ ಸೂಚನಾ ಫಲಕ. ಇಲ್ಲಿ ಯಾವ ಯಾವ ವಿಚಾರಕ್ಕೆ ಯಾವ ಯಾವ ಅಧಿಕಾರಿಯನ್ನು ನೇಮಿಸಲಾಗಿದೆ ಎಂಬುದನ್ನು ಸೂಚಿಸೋ ಫಲಕ. ಜವಾಬ್ದಾರಿಗಳನ್ನು ನೀಡಿ ಅಧಿಕಾರಿಯನ್ನೇನೋ ನೇಮಿಸಲಾಗಿದೆ. ಆದರೆ ವಿವಿಧ ಕೆಲಸಗಳಿಗಾಗಿ ನಗರಸಭೆಗೆ ಸಾರ್ವಜನಿಕರು ಕಾಲಿಟ್ಟರೆ ಅವರು ಕೂರಲು ಒಂದು ಕುರ್ಚಿಯೂ ಇಲ್ಲ. ಬಂದವರು ಹಿರಿಯ ನಾಗರಿಕರಾಗಲೀ, ಮಹಿಳೆಯರಗಾಲೀ, ಅವರು ನಿಂತೇ ತಮ್ಮ ಸಮಸ್ಯೆಗಳನ್ನು ನಗರಸಭೆ ಅಧಿಕಾರಿಗಳಿಗೆ ನಿವೇಧಿಸಿಕೊಳ್ಳಬೇಕು.

ಇನ್ನು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿಯಂತ್ರಣ ಮಾಡಲು ಯಾವುದೇ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟರೆ ಕೂಡಲೇ ಸಂಪರ್ಕಿಸಿ ಎಂದು ರಾಜ್ಯ ಲೋಕಾಯುಕ್ತರ ದೂರವಾಣಿ ಸಂಖ್ಯೆಯನ್ನು ಹಾಕಬೇಕು ಎಂಬ ನಿಯಮವಿದೆ. ಆದರೆ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಲೋಕಾಯುಕ್ತರ ದೂರವಾಣಿ ಸಂಖ್ಯೆ ಸೂಚಿಸುವ ನಾಮಫಲಕ ಕಾಣಿಸದಂತೆ ಮೂಲೆಗೆ ಹಾಕಲಾಗಿದೆ. ಇನ್ನು ಸಾಮಾನ್ಯನ ಅಸ್ತ್ರಎಂದೇ ಬಿಂಭಿತವಾಗಿರುವ ಆರ್‌ಟಿಐ, ಅದೇ ಕಣ್ರೀ ಮಾಹಿತಿ ಹಕ್ಕು ಕಾಯ್ದೆ ಇದೆಯಲ್ಲಾ, ಅದಕ್ಕೆ ಸಂಬ0ಧಿಸಿದ ಯಾವುದೇ ಮಾಹಿತಿ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇಲ್ಲ. ಒಂದು ವೇಳೆ ಮಾಹಿತಿ ಕೇಳಿದರೆ, ಕೊಡೋದೂ ಇಲ್ಲ ಎಂಬ ಸ್ಥಿತಿ ಇದೆ.

ಈ ಎಲ್ಲ ಅವ್ಯವಸ್ಥೆಗಳನ್ನು ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿರುವ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಸೆಪ್ಟೆಂಬರ್ 10 ರಂದು ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ. ಸಂಬ0ಧಿಸಿದ ನಗರಸಭೆ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಬರೆದಿರುವ ಈ ಪತ್ರದಲ್ಲಿ ಮಾಹಿತಿ ಹಕ್ಕು ಅಧಿನಿಯಮ 2005 ವಿವರಗಳು, ಲೋಕಾಯುಕ್ತ ಕಚೇರಿಯ ಅಧಿಕಾರಿಗಳ ವಿವರಗಳು, ಸಕಾಲ ಸೇವೆಯ ವಿವರಗಳು, ಜನನ ಮರಣ ದೃಢೀಕರಣ ಪತ್ರಗಳ ನಕಲು ಶುಲ್ಕದ ಮಾಹಿತಿಯ ನಾಮಫಲಕಗಳನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರಚುರ ಪಡಿಸದೇ ಇರುವುದು ಮತ್ತು ಕೆಲ ವಿವರಗಳು ಅಳಿಸಿರುವ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರಿಂದ ಸಾರ್ವಜನಿಕರಿಗೆ ಅನನುಕೂಲವಾಗುತ್ತಿದ್ದು, ಈ ಎಲ್ಲ ವಿವರಗಳನ್ನು ಸರಿಪಡಿಸುವಂತೆ ಅವರು ಸೂಚಿಸಿದ್ದಾರೆ. ಅಲ್ಲದೆ ಕಚೇರಿಯಲ್ಲಿ ಕರ್ತವ್ ನಿರ್ವಹಿಸುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಹಾಕಿಕೊಳ್ಳುವಂತೆ ಸೂಚಿಸಲಾಗಿದೆ. ವಿವಿಧ ಕೆಲಸಗಳಿಗಾಗಿ ಕೇರಿಗೆ ಬರುವ ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆಯೂ ಸೂಚಿಸಲಾಗಿದೆ. ಅಲ್ಲದೆ ಸಕಾಲ ಮತ್ತು ಮಾಹಿತಿ ಹಕ್ಕು ನಿಯಮದಡಿ ನಿಗಧಿಪಡಿಸಿದ ಕಾಲಮಿತಿಯೊಳಗೆ ಸಾರ್ವಜನಿಕರ ಮನವಿಗಳನ್ನು ವಿಲೇ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ ಈ ಎಲ್ಲ ವಿಚಾರಗಳಿಗೆ ಸಂಬ0ಧಿಸಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಂಡ ಕ್ರಮದ ಬಗ್ಗೆ ವರದಿ ನಡೀಉವಂತೆಯೂ ಸೂಚನೆ ನೀಡಲಾಗಿದೆ.

ಹೀಗೆ ವರದಿ ನೀಡಲು ನಿರ್ದೇಶಕರು ಕಾಲಮಿತಿಯನ್ನು ನಿಗಧಿ ಮಾಡಿಲ್ಲವಾದರೂ ಈವರೆಗೆ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಯಾವುದೇ ಕ್ರಮ ವಹಿಸಿಲ್ಲ. ಇನ್ನು ನಗದರಸಭೆಗೆ ವಿವಿಧ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಗೆ ಸೂಕ್ತ ವಾಹನ ನಿಲುಗಡೆ ಜಾಗವನ್ನೂ ಗುರ್ತಿಸಿಲ್ಲ. ಹಾಗಾಗಿ ನಗರಸಭೆ ಆವರಣದಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿ, ಜನರು ಸಂಚರಿಸಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಈ ಶೌಚಾಲಯವನ್ನೊಮ್ಮೆ ನೋಡಿ. ಇಲ್ಲಿ ಕಾಣ್ತಾ ಇದೆಯಲ್ಲಾ, ಇದು ನಗರಸಭೆ ಆವರಣದೊಳಗೆ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ. ಈ ಶೌಚಾಲಯವನ್ನು ಉಫಯೋಗಿಸುವವರೂ ಇದ್ದಾರೆ. ಇಡೀ ನಗರವನ್ನು ಸ್ವಚ್ಛವಾಗಿಡಲು ಇರುವ ನಗರಸಭೆ ತನ್ನದೇ ಆವರಣದಲ್ಲಿರುವ ಶೌಚಾಲಯವನ್ನೂ ಸ್ವಚ್ಛವಾಗಿಡಲು ಸಾಧ್ಯವಾಗಿಲ್ಲ ಎಂಬುದಕ್ಕೆ ನೀವು ನೋಡುತ್ತಿರುವ ಶೌಚಾಲಯವೇ ನಿದರ್ಶನ. ಮುರಿದ ಬಾಗಿಲು, ದುರ್ವಾಸನೆ ಬೀರುತ್ತಿರುವ ಶೌಚಾಲಯ, ತೊಳೆದು ವರ್ಷಗಳಾದಂತೆ ಕಾಣುತ್ತಿರುವ ಮೂತ್ರಾಲಯ. ಇದರ ಸ್ಥಿತಿಯನ್ನು ಕಂಡರೆ ಶೌಚದ ಜೊತೆಗೆ ವಾಂತಿಯೂ ಬರದೇ ಇರಲ್ಲ.

ಪಾಪ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಕಚೇರಿಯನ್ನು ಮಾತ್ರ ಪರಿಶೀಲಿಸಿ, ಇರುವ ಸಮಸ್ಯೆಗಳನ್ನು ಸರಿಪಡಿಸುವಂತೆ ಸೂಚಿಸಿದ್ದಾರೆ. ಅವರೇನಾದರೂ ಈ ಶೌಚಾಲಯ ನೋಡಿದ್ದರೆ ಅಲ್ಲಿಯೇ ತಲೆ ತಿರುಗಿ ಬೀಳುತ್ತಿದ್ದರೇನೋ. ಯಾಕೆಂದರೆ ಈ ಶೌಚಾಲಯದ ಸ್ಥಿತಿ ಅಷ್ಟು ಗಂಭೀರವಾಗಿದೆ. ಇರುವ ಸಮಸ್ಯೆಗಳೆಲ್ಲ ನಗರಸಭೆಯಲ್ಲಿಯೇ ಇವೆ. ಇವುಗಳನ್ನು ಸರಪಿಡಿಸುವಂತೆ ಯೋಜನಾ ನಿರ್ದೇಶಕರೇನೋ ಸೂಚನೆ ನಡೀಇದ್ದಾರೆ. ಆದರೆ ಆ ಸೂಚನೆಯಂತೆ ನಮ್ಮ ನಗರಸಬೆ ಅಧಿಕಾರಿಗಳು ಸರಿಪಡಿಸುವ ಯಾವುದೇ ಸೂಚನೆಯೂ ಕಾಣುತ್ತಿಲ್ಲ.

ಒಟ್ಟಿನಲ್ಲಿ ನಾಳೆ ನಗರಸಭೆಗೆ ನೂತನ ಸಾರಥಿ, ಅದೇ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಯಾರೇ ಅಧ್ಯಕ್ಷರಾದರೂ ಮೊದಲಿಗೆ ನಗರಸಭೆಯನ್ನು ಸ್ವಚ್ಛಗೊಳಿಸಿ, ನಂತರ ನಗರವನ್ನು ಸ್ವಚ್ಛಗೊಳಿಸಬೇಕಾದ ಜವಾಬ್ದಾರಿ ಹೊತ್ತಿದ್ದಾರೆ. ಆ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಕಾರ್ಯಪ್ರವೃತ್ತರಾಗುವರೇ ಎಂಬುದನ್ನು ಕಾದು ನೋಡೋಣ.

 

About The Author

Leave a Reply

Your email address will not be published. Required fields are marked *