ಕಾಡು ಪ್ರಾಣಿಗಳ ಬಲಿಗೆ ಇಡಲಾಗಿದ್ದ ನಾಡಬಾಂಬ್ ಸ್ಪೋಟಕ್ಕೆ ಎತ್ತಿನ ಬಾಯಿ ಚಿದ್ರ
1 min read
ಉತ್ತರಕರ್ನಾಟಕದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ರೈತ ಮಲಿಯಪ್ಪ, ಬಡತನದ ಜೀವನ ನಿರ್ವಹಣೆಯಲ್ಲಿ ಎತ್ತುಗಳನ್ನು ಆಶ್ರಯಿಸಿಕೊಂಡಿದ್ದ, ಇನ್ನು ತನ್ನ ಎರಡು ಎತ್ತುಗಳನ್ನು ತನ್ನ ಜಮೀನಿನ ಪಕ್ಕದಲ್ಲಿ ಮೇಯಲು ಬಿಟ್ಟು ಮನೆಕಡೆಗೆ ಬಂದಿರುತ್ತಾನೆ, ಮನೆಗೆ ಬಂದ ಸ್ವಲ್ಪ ಸಮಯದ ನಂತರ ಏಕಾಏಕಿ ಭಾರಿ ಶಬ್ದ ಕೇಳಿಸಲಾಗಿ ರೈತ ಓಡೋಡಿ ಹೊಲದ ಬಳಿ ಬಂದು ಎತ್ತುಗಳನ್ನು ನೋಡಿದಾಗ ಎತ್ತಿನ ಮುಖದ ಭಾಗ ಛಿದ್ರವಾಗಿತ್ತು, ಬಾಯಲ್ಲಿ ರಕ್ತ ಬರುತಿತ್ತು, ಆ ಘಟನೆಯನ್ನು ನೋಡಿದ ರೈತ ಮಲಿಯಪ್ಪ ಅಯ್ಯೋ ದೇವರೇ ತನಗೆ ದುಡಿದು ತಿನ್ನಲು ಆಸರೆಯಾಗಿದ್ದ ಎತ್ತಿಗೆ ಹೀಗಾಯಿತಲ,್ಲ ೮೦ ಸಾವಿರ ಸಾಲ ಮಾಡಿ ಖರೀದಿಸಿದ್ದ ಸಾಲ ತೀರಿಸುವುದು ಹೇಗೆಂದು ತಲೆ ಮೇಲೆ ಕೈಹೊತ್ತು ಕುಳಿತ ರೈತ ಮಲಿಯಪ್ಪನ ಗೋಳು ಮುಗಿಲುಮುಟ್ಟುವಂತಿತ್ತು.
ಅರಣ್ಯದಲ್ಲಿ ಯಾರೊ ದುಷ್ಕರ್ಮಿಗಳು ಕಾಡುಹಂದಿಗಳನ್ನ ಬೇಟೆಯಾಡಲು ಇಟ್ಟಿದ್ದ ನಾಡಬಾಂಬ್ ಅನ್ನು ತಿಂದು ಹಸು ಬಾಯಿ ಸ್ಪೋಟಗೊಂಡಿದೆಯಾದರೂ ಈ ಕೃತ್ಯವನ್ನು ಯಾರೋ ಬೇಟೆಗಾರರು ಮಾಡಿರುತ್ತಾರೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿರುತ್ತಾರೆ
ಈ ಘಟನೆ ನಡೆದ ಕೂಡಲೇ ಹರವದಿ ಗ್ರಾಮದ ರೈತರು ಭಯಭೀತರಾಗಿದ್ದು ಸಂಬAಧಪಟ್ಟ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
https://www.youtube.com/watch?v=Qw1m3rkl24Q&t=3s