ಕಾಮಗಾರಿ ಮಾಡಿಯೇ ಬಿಲ್ ಪಡೆಯಲಾಗಿದೆ
1 min readಕಾಮಗಾರಿ ಮಾಡಿಯೇ ಬಿಲ್ ಪಡೆಯಲಾಗಿದೆ
ನರೇಗಾ ಕಾಮಗಾರಿಗೆ ಶಾಸಕರ ನಿಧಿ ಬಿಲ್ ಪಡೆದ ಆರೋಪ
ಗುತ್ತಿಗೆದಾರ ಶಿವಾರೆಡ್ಡಿಯಿಂದ ಸ್ಪಷ್ಟನೆ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನಾರಮಾಕಲಹಳ್ಳಿಯಲ್ಲಿ ಕಾಮಗಾರಿ ಮಾಡದೇ ಬಿಲ್ ಪಡೆದಿರುವ ಆರೋಪಕ್ಕೆ ಸಂಬ0ಧಿಸಿ ಗುತ್ತಿಗೆದಾರರು ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನಡೀಇದ್ದಾರೆ.
ಕಾಲುವೆ ಕಾಮಗಾರಿ ಹಾಗೂ ರಸ್ತೆ ಕಾಮಗಾರಿ ನರೇಗಾದಲ್ಲಿ ಮಾಡಿ, ಮತ್ತೆ ಶಾಸಕರ ಅನುದಾನದಲ್ಲಿಯೂ ಬಿಲ್ ಪಡೆಯಲಾಗಿದೆ ಎಂದು ವೆಂಕಟರಾಮರೆಡ್ಡಿ ಎಂಬುವರು ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಗುತ್ತಿಗೆದಾರ ವಲಗೇರನಹಳ್ಳಿ ಶಿವಾರೆಡ್ಡಿ ಶ್ರೀನಿವಾಸಪುರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ, ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ನಾನು ಕಾಮಗಾರಿ ಮಾಡದೇ ಯಾವುದೇ ಬಿಲ್ ಪಡೆದಿಲ್ಲ, ಕಾಮಗಾರಿ ಮಾಡುವ ಟೋಗಳನ್ನು ತೋರಿಸಿ ನಾನು ಕಾಮಗಾರಿ ಮಾಡಿಯೇ ಬಿಲ್ ಪಡಿದಿದ್ದೇನೆ ಎಂದು ಹೇಳಿದರು.
ಅಧಿಕಾರಿಗಳ ಮೇಲೆ ಯಾವುದೇ ಕಾರಣಕ್ಕೂ ಶಾಸಕರಿಂದ ಒತ್ತಡ ಹೇರಿಲ್ಲ. ನನ್ನ ಏಳಿಗೆ ಸಹಿಸಲಾಗದೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಸ್ಥಳಕ್ಕೆ ಸಂಬ0ಧ ಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ ನಂತರವೇ ಕಾಮಗಾರಿ ಮಾಡಲಾಗಿದೆ. ನನ್ನ ಮೇಲೆ ಆಪಾದನೆ ಮಾಡಿರುವ ವ್ಯಕ್ತಿ ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡುವುದು, ಮಾವಿನ ತೋಟದಲ್ಲಿ ಮಾವಿನಕಾಯಿ ಕೀಳಿರುವ ವಿಚಾರಕ್ಕೆ. ನಾನು ಶ್ರೀನಿವಾಸಪುರ ಪೊಲೀಸ್ ಠಾಣೆಗೆ ದೂರು ನೀಡಿದರೆ ಪೊಲೀಸ್ ಇನ್ಸ್ಪೆಕ್ಟರ್ ನನಗೆ ಎನ್‌ಸಿಆರ್ ನೀಡುತ್ತಾರೆ ಎಂದು ಹೇಳಿದರು.
ನನ್ನ ಮೇಲೆ ಆರೋಪ ಮಾಡುತ್ತಿರುವ ವ್ಯಕ್ತಿ ನನ್ನ ವಿರುದ್ಧ ದೂರು ನೀಡಿದರೆ ಆ ಪ್ರಕರಣದಲ್ಲಿ ನನ್ನನ್ನು ಬಂಧಿಸುತ್ತಾರೆ ಎಂದು ಪೊಲೀಸ್ ನಡೆಯ ವಿರುದ್ಧವೂ ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದರು.