ರೇಷ್ಮೆ ಹುಳು ಸಾಕಣೆ ಮನೆ ಬಳಿ ನಿಲ್ಲಿಸಿದ್ದ ಬೈಕ್ ಭಸ್ಮ
1 min readಮಳಮಾಚನಹಳ್ಳಿಯಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಗೆ ಬೆಂಕಿ
ರೇಷ್ಮೆ ಹುಳು ಸಾಕಣೆ ಮನೆ ಬಳಿ ನಿಲ್ಲಿಸಿದ್ದ ಬೈಕ್ ಭಸ್ಮ
ರೇಷ್ಮೆ ಹುಳು ಸಾಕಣೆ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಎರಡು ಕುಟುಂಬಗಳಿಗೆ ಸೇರಿದ ಐದು ಬೈಕ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ನಡೆದಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ಮುನಿರಾಜು ಮತ್ತು ಮೂರ್ತಿ ಎಂಬ ಅಣ್ಣ ತಮ್ಮಂದರಿದ್ದು, ಇವರಿಗೆ ಸೇರಿದ ಐದು ದ್ವಿಚಕ್ರ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದು, ಬೈಕ್‌ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮೂರ್ತಿ ಮತ್ತು ಮುನಿರಾಜು ಅವರ ವಾಸದ ಮನೆ ಹಾಗೂ ರೇಷ್ಮೆ ಹುಳು ಸಾಕಣೆ ಮನೆಗಳು ಅಕ್ಕ ಪಕ್ಕದಲ್ಲಿದ್ದು, ದ್ವಿಚಕ್ರವಾಹನಗಳನ್ನು ಹುಳು ಸಾಕಣೆ ಮನೆಯ ಬಳಿ ನಿಲ್ಲಿಸಲಾಗಿತ್ತು.
ಬೆಳಗ್ಗೆ ಎಂದಿನ0ತೆ ಎದ್ದು ನೋಡಿದಾಗ ಬೈಕ್‌ಗಳು ಬೆಂಕಿಗೆ ಸುಟ್ಟು ಕರಕಲಾಗಿರುವುದು ಕಂಡು ಬಂದಿದೆ.ಯಾರು ಯಾಕೆ ಈ ಕೃತ್ಯ ಮಾಡಿದ್ದಾರೆ ಎಂಬುದು ನಿಖರವಾಗಿ ಗೊತ್ತಿಲ್ಲ. ಮುನಿರಾಜು ಪತ್ನಿ ಈ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.