ಮಹಿಳೆಯರಿಗೆ ಪರಿಕರ ವಿತರಿಸಿದ ತಹಶೀಲ್ದಾರ್
1 min readಮಹಿಳೆಯರಿಗೆ ಪರಿಕರ ವಿತರಿಸಿದ ತಹಶೀಲ್ದಾರ್
ಖಾಸಗಿ ಸಂಸ್ಥೆಯಿ0ದ ಮಹಿಳೆಯರಿಗೆ ಪರಿಕರ ವಿತರಣೆ
ನ0ಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಗುರುಮಲ್ಲೆಶ್ವರ ದಾಸೋಹ ಮಠದ ಸಭಾಗಣದಲ್ಲಿ ಐಟಿಸಿ ಮತ್ತು ಬಂಧನ್ ಕೊನ್ನಗರ್ ಟಿಎಚ್‌ಪಿಯಿಂದ ಮಹಿಳೆಯರಿಗೆ ಉಚಿತ ಪರಿಕರಗಳ ವಿತರಣೆ ಮಾಡಲಾಯಿತು. ಗ್ರೇಡ್ 2 ತಹಶೀಲ್ದಾರ್ ಮಹೇಶ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು.
ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಗುರುಮಲ್ಲೆಶ್ವರ ದಾಸೋಹ ಮಠದ ಸಭಾಗಣದಲ್ಲಿ ಐಟಿಸಿ ಮತ್ತು ಬಂಧನ್ ಕೊನ್ನಗರ್ ಟಿಎಚ್‌ಪಿಯಿಂದ ಮಹಿಳೆಯರಿಗೆ ಉಚಿತ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ . ಗ್ರೇಡ್೨ ತಹಶೀಲ್ದಾರ್ ಮಹೇಶ್ ಪಾಟೀಲ್, ಗ್ರಾಮೀಣ ಜನರಿಗೆ ಉದ್ಯೋಗವಕಾಶ ಕಲ್ಪಿಸಲು ಐಟಿಸಿ ಮತ್ತು ಬಂಧನ್ ಕೊನ್ನಗರ್ ಸಂಸ್ಥೆ ಬಡತನದಲ್ಲಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಸ್ವಾವಲಂಬಿ ಜೀವನ ನಡೆಸಲು ಟೈಲರಿಂಗ್ ತರಬೇತಿ ನೀಡಿ, ಹೊಲಿಗೆ ಯಂತ್ರ, ತಳ್ಳುವ ಗಾಡಿ, ದಿನಸಿ ಅಂಗಡಿಗೆ ಬೇಕಾದ ಧಾನ್ಯ ನೀಡಿ ಬದುಕಿಗೆ ಆಶ್ರಯವಾಗುತ್ತಿದೆ ಎಂದರು.
ಮಹಿಳೆಯರು ಇದರ ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸರ್ಕಾರದಿಂದ ಸಿಗುವ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ನೀವು ಕಲಿತ ಕೆಲಸವನ್ನು ಇನ್ನೊಬ್ಬರಿಗೆ ಹೇಳಿಕೊಂಡು ಅವರಿಗೂ ಆಶ್ರಯ ನೀಡಬೇಕು ಎಂದರು. ಸುಮಾರು ೫೦ಕ್ಕೂ ಹೆಚ್ಚು ಮಹಿಳಾಲಾನುಭಾವಿಗಳಿಗೆ ಹೊಲಿಗೆ ಯಂತ್ರ, ರೆಡಿಮೇಡ್ ಉಡುಪುಗಳು, ಸೌಂದರ್ಯ ವಕಗಳು, ದಿನಸಿ ವಸ್ತುಗಳು, ಬ್ಯಾಗ್ ಮೇಕಿಂಗ್, ಪಾಸ್ಟ್ ಡ್, ತಳ್ಳುವ ಗಾಡಿ, ಪಾತ್ರೆ ಸೇರಿದಂತೆ ವಿವಿಧ ಪರಿಕರಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಐಟಿಸಿ ಸಂಸ್ಥೆಯ ಮುಖ್ಯಸ್ಥ ವಿಜಯ್ ಸಿಂಗ್, ಕಾರ್ಯನಿರ್ವಾಹಕ ಅಧಿಕಾರಿ ಮಂಜು, ಹಿರಿಯ ಮೇಲ್ವಿಚಾರಕ ಮನೋಜ್, ಹದಿನಾರು ಗ್ರಾಪಂ ಅಧ್ಯಕ್ಷೆ ಸಣ್ಣತಾಯಮ್ಮ, ಬಿಳಿಗೆರೆ ಗ್ರಾಪಂ ಅಧ್ಯಕ್ಷೆ ರಾಜಮ್ಮ, ಕೆಂಪಿಸಿದ್ದನಹುAಡಿ ಗ್ರಾಪಂ ಉಪಾಧ್ಯಕ್ಷೆ ಲಕ್ಷಮ್ಮ ಇದ್ದರು.