ತಾಲೂಕು ಮಟ್ಟದ ಜನಸ್ಪಂಧನಾ ಕಾರ್ಯಕ್ರಮ
1 min readಶಾಸಕರಿಂದ ಮತ್ತೆ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮ
ತಾಲೂಕು ಮಟ್ಟದ ಜನಸ್ಪಂಧನಾ ಕಾರ್ಯಕ್ರಮ
ಶಾಸಕ ಪ್ರದೀಪ್ ಈಶ್ವರ್ ನಮಸ್ತೆ ಚಿಕ್ಕಬಳ್ಳಾಪುರ ಇಂದು ಕಂದವಾರ ಬಾಗಿಲಿನಿಂದ ಆರಂಭವಾಗಿ ನಗರಸಭೆ ವರೆಗೂ ನಡೆಯಿತು. ಈ ವೇಳೆ ಜನರ ಸಮಸ್ಯೆಗಳ ಬಗ್ಗೆ ಶಾಸಕರು ಕೇಳಿ ಮಾಹಿತಿ ಪಡೆದರು.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಇಂದು ಮತ್ತೆ ಕಾಣಿಸಿಕೊಂಡರು. ಇಂದು ಬೆಳಗ್ಗೆ ೭ ಗಂಟೆಯಿAದಲೆ ನಗರದ ಕಂದವಾರ ಬಾಗಿಲುನಿಂದ ಆರಂಭವಾದ ಕಾರ್ಯಕ್ರಮ ಮನೆ ಮನೆಗೆ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆ ಆಲಿಸಿದ್ರು, ಸಾರ್ವಜನಿಕರ ಕುಂದು ಕೊರತೆಗಳ ಪರಿಹಾರಕ್ಕೆ ಸಂಬoಧಿಸಿದ ಅಧಿಕಾರಿಗಳಿಗೆ ತಿಳಿಸುವ ಭರವಸೆ ನೀಡಿದರು.
ಶಾಸಕ ಪ್ರದೀಪ್ ಈಶ್ವರ್ ಅವರ ಬಳಿ ನಾಗರಿಕರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಕಣ್ಣೀರಿಟ್ಟ ಘಟನೆಯೂ ನಡೆಯಿತು. ಕಂದವಾರ ಬಾಗಿಲಿನ ವೆಂಕಟರಮಣ ಸ್ವಾಮಿ ದೇವಸ್ಥಾನದಿಂದ ನಗರ್ತರ ಪೇಟೆಯ ಮೂಲಕ ನಗರ ಸಭೆ ಕಛೇರಿ ವರೆಗೂ ಜನರ ಕಷ್ಟಗಳನ್ನು ಶಾಸಕರು ವಿಚಾರಿಸಿಸಿದರು. ನಂತರ ನಗರಸಭೆ ಮುಂದೆ ಮೂರು ನೂತನ ಕಸ ವಿಲೇವಾರಿ ವಾಹನಗಳಿಗೆ ಸ್ವತಃ ವಾಹನ ಚಾಲನೆ ಮಾಡುವ ಮೂಲಕ ಶಾಸಕರು ಚಾಲನೆ ನೀಡಿದರು.
ನಂತರ ತಾಲೂಕು ಕಛೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾದರು. ಜನರ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲಿಯೇ ಆಗುವ ಕೆಲಸಗಳನ್ನು ಪೂರ್ಣಗೋಳಿಸಿದ್ರು. ಶಾಸಕ ಪ್ರದೀಪ್ ಈಶ್ವರ್ ಅವರ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಜನ ಸಾಲಿನಲ್ಲಿ ನಿಂತು ಅಹವಾಲು ನೀಡಿ, ಬಗೆಹರೆಸಿಕೊಡುವಂತೆ ಕೋರಿದರು. ಸ್ಥಳದಲ್ಲೆ ಇದ್ದ ಅಧಿಕಾರಿಗಳಿಗೆ ಆಗುವ ಕೆಲಸಗಳನ್ನು ಬೇಗ ಮಾಡಿಕೊಡಿ ಎಂದು ಶಾಸಕರು ಸೂಚಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಬಾಸ್ಕರ್, ಉಪ ವಿಭಾಗಧಿಕಾರಿ ಅಶ್ವಿನ್, ತಹಶಿಲ್ದಾರ್ ಅನಿಲ್ ಕುಮಾರ್, ತಾಲ್ಲೂಕು ನಿರ್ವಹಣಾಧಿಕಾರಿ ಮಂಜುನಾಥ್, ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.