ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಆಕ್ರೋಶ

ನಾಳೆ ನಡೆಲಿದೆಯೇ ನಗರಸಭೆ ಅಂಗಡಿಗಳ ಹರಾಜು

ಊರದೇವತೆ ಜಾಲಾರಿ ಗಂಗಮಾAಬದೇವಿ ಕರಗಮಹೋತ್ಸವ

ಚಿಕ್ಕಕಾಡಿಗೇನಹಳ್ಳಿಯಲ್ಲಿ ಅದ್ಧೂರಿ ಅಂಬೇಡ್ಕರ್ ಜಯಂತಿ

April 17, 2025

Ctv News Kannada

Chikkaballapura

Bangalor

1 min read

ಬೆಂಗಳೂರು ನಗರ ಮತ್ತು ಕೋಲಾರ ಮತ್ತು ಸುತ್ತಮುತ್ತಲಿನ ಪ್ರಯಾಣಿಕರು ವಿದ್ಯುತ್ ಚಾಲಿತ ಮೆಮು ರೈಲು ಸೇವೆಗಾಗಿ ಇನ್ನಷ್ಟು ದಿನ ಕಾಯಬೇಕಿದೆ. ಮೆಮೆ ರೈಲೊಂದು ಅಯೋಧ್ಯೆಗೆ ತೆರಳಿದ್ದು, ಇನ್ನೂ ವಾಪಸ್ ಬಂದಿಲ್ಲ.ಪ್ರತಿನಿತ್ಯ ಸಾವಿರಾರು ಜನರು ಕೋಲಾರ, ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು ನಗರಕ್ಕೆ ಆಗಮಿಸುತ್ತಾರೆ. ಆದರೆ ಡೆಮು ರೈಲಿನಲ್ಲಿ ಸೀಟು ಸಿಗುವುದು ಕಷ್ಟವಾಗಿದೆ. ಈ ಮಾರ್ಗದಲ್ಲಿ ಮೆಮು ರೈಲು ಓಡಿಸಬೇಕು ಎಂಬ ಬೇಡಿಕೆ ಇದೆ.ಕರ್ನಾಟಕದ ರೈಲು ಯೋಜನೆಗಳು; ಹೊಸ ಮಾರ್ಗ, ದ್ವಿಪಥ ವಿವರಗಳು ಆರ್‌ಟಿಐ ಮೂಲಕ ಈ ಕುರಿತು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವನ್ನು ಪ್ರಶ್ನೆ ಮಾಡಲಾಗಿತ್ತು. ಆಗ ಬೇಡಿಕೆಯಂತೆ ಮೆಮು ರೈಲನ್ನು ಅಯೋಧ್ಯೆಗೆ ಕಳಿಸಲಾಗಿದೆ. ಅದು ಇನ್ನೂ ವಾಪಸ್ ಬಂದಿಲ್ಲ. ಬಂದ ಬಳಿಕ ಕೋಲಾರ-ಬೆಂಗಳೂರು ಮಾರ್ಗದಲ್ಲಿ ಮೆಮು ರೈಲು ಓಡಿಸುವ ಕುರಿತು ತೀರ್ಮಾನಿಸಲಾಗುತ್ತದೆ ಎಂಬ ಉತ್ತರ ಬಂದಿದೆ.ವೇಗ ಪಡೆದ ಬೈಯಪ್ಪನಹಳ್ಳಿ-ಹೊಸೂರು ದ್ವಿಪಥ ರೈಲ್ವೆ ಕಾಮಗಾರಿವಿದ್ಯುದೀಕರಣ ಪೂರ್ಣ: ಯಲಹಂಕ-ಬಂಗಾರಪೇಟೆ ವಯಾ ಕೋಲಾರ ನಡುವಿನ 149 ಕಿ. ಮೀ. ಉದ್ದದ ಮಾರ್ಗದ ವಿದ್ಯುದೀಕರಣ ಏಳು ತಿಂಗಳ ಹಿಂದೆ ಪೂರ್ಣಗೊಂಡಿದೆ. ಆದ್ದರಿಂದ ಡೆಮು ಬದಲು ಮೆಮು ರೈಲು ಓಡಿಸಿದರೆ ಹೆಚ್ಚಿನ ಜನರು ಸಂಚಾರ ನಡೆಸಲು ಅನುಕೂಲವಾಗುತ್ತದೆ ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು. ಮೈಸೂರು-ಬೆಂಗಳೂರು ಮೆಮು ರೈಲು ಪ್ರಯಾಣಿಕರ ಗಮನಕ್ಕೆ ಬೆಂಗಳೂರು-ಚಿಕ್ಕಬಳ್ಳಾಪುರ ನಡುವೆ ಎಲೆಕ್ಟ್ರಿಕ್ ರೈಲುಗಳು ಸಂಚಾರ ನಡೆಸುತ್ತಿವೆ. ಆದರೆ ವಿದ್ಯುದೀಕರಣ ಪೂರ್ಣಗೊಂಡರೂ ಸಹ ಅದಕ್ಕೂ ಮುಂದೆ ರೈಲು ಓಡಿಸುತ್ತಿಲ್ಲ. ಹೊಸ ಮಾರ್ಗದಲ್ಲಿ ಮೆಮು ರೈಲು ಓಡಿಸಲು ರೈಲುಗಳ ಕೊರತೆ ಇದೆ. ಅಯೋಧ್ಯೆಗೆ ಹೋಗಿರುವ ರೈಲು ವಾಪಸ್ ಬಂದ ಬಳಿಕ ದಿನಕ್ಕೆ 2-3 ರೈಲುಗಳನ್ನು ಓಡಿಸಬಹುದು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.ಕೇವಲ ರೈಲುಗಳ ಕೊರತೆ ಮಾತ್ರವಲ್ಲ, ಸಿಬ್ಬಂದಿ ಕೊರತೆಯೂ ಇದೆ. ಮೆಮು ರೈಲು ಸಂಚಾರ ಆರಂಭಿಸಿದರೆ ಕೋಲಾರ ನಿಲ್ದಾಣದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಬೇಕಿದೆ. ರೈಲು ನಿರ್ವಹಣೆಗೆ ಹೆಚ್ಚಿನ ತಾಂತ್ರಿಕ ಸಹಾಯವೂ ಬೇಕು. ನೇಮಕಾತಿ ಆಗದ ಕಾರಣ ಸಿಬ್ಬಂದಿಗಳ ಕೊರತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೆಮು ರೈಲಿನ ಕೊರತೆ ಇದೆ. ಕೋಲಾರ ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿದೆ. ಚಿಕ್ಕಬಳ್ಳಾಪುರ-ಕೋಲಾರ ಮಾರ್ಗ ಏಕಪಥವಾಗಿದೆ. ಚಿಕ್ಕಬಳ್ಳಾಪುರ ತನಕ ಸಾಗುವ ರೈಲನ್ನು ಕೋಲಾರ ತನಕ ವಿಸ್ತರಣೆ ಮಾಡುವುದು ಸದ್ಯಕ್ಕೆ ಕಷ್ಟ ಎಂದು ಇಲಾಖೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ವಿವರಣೆ ನೀಡಿದೆ.ಈ ಮಾರ್ಗದಲ್ಲಿ 4 ಡೆಮು ರೈಲುಗಳು ಸಂಚಾರ ನಡೆಸುತ್ತಿವೆ. ಕೆಲವು ರೈಲುಗಳು ಕೆಎಸ್‌ಆರ್ ಬೆಂಗಳೂರು, ಕೆಲವು ಯಲಹಂಕ ಮತ್ತೆ ಕೆಲವು ಕೋಲಾರದಿಂದ ಹೊರಡುತ್ತವೆ. ಒಂದು ಡೆಮು ರೈಲು ಹಾಸನ ತನಕ ಸಹ ಸಂಚಾರ ನಡೆಸುತ್ತದೆ. ಕೋಲಾರ-ಬೆಂಗಳೂರು ನಡುವಿನ ಪ್ರಯಾಣದ ಅವಧಿ ಸುಮಾರು 3 ಗಂಟೆ. ಆದರೆ ಸೀಟು ಸಿಗುವುದಿಲ್ಲ ಎಂಬುದು ಜನರ ಆರೋಪ.ಡೆಮು ರೈಲಿನಲ್ಲಿ 8 ಬೋಗಿಗಳಿದ್ದು, ಗರಿಷ್ಠ 800 ಪ್ರಯಾಣಿಕರು ಸಂಚಾರ ನಡೆಸಬಹುದು. ಅದೇ ಮೆಮೆ ರೈಲು 16 ಬೋಗಿ ಒಳಗೊಂಡಿದ್ದು, 1000 ಜನರು ಪ್ರಯಾಣ ಮಾಡಬಹುದು. ಅಲ್ಲದೇ ಇದು ವೇಗವಾಗಿ ಸಂಚಾರ ನಡೆಸುವುದರಿಂದ ಸಮಯವೂ ಉಳಿತಾಯವಾಗುತ್ತದೆ.

ಬೆಂಗಳೂರು ನಗರ ಮತ್ತು ಕೋಲಾರ ಮತ್ತು ಸುತ್ತಮುತ್ತಲಿನ ಪ್ರಯಾಣಿಕರು ವಿದ್ಯುತ್ ಚಾಲಿತ ಮೆಮು ರೈಲು ಸೇವೆಗಾಗಿ ಇನ್ನಷ್ಟು ದಿನ ಕಾಯಬೇಕಿದೆ. ಮೆಮೆ ರೈಲೊಂದು ಅಯೋಧ್ಯೆಗೆ ತೆರಳಿದ್ದು, ಇನ್ನೂ...

ಬೆಂಗಳೂರು : ಬಿಬಿಎಂಪಿ ಸಿಬ್ಬಂದಿಗಳಿಗೆ ಮೊಬೈಲ್ ಆಯಪ್ ನಲ್ಲಿ ಬಯೋಮೆಟ್ರಿಕ್ ಹಾಜರಿ ಕಡ್ಡಾಯಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ. ಹೌದು, ಬಿಬಿಎಂಪಿಯ ಕೇಂದ್ರ ಕಚೇರಿ...