ಪುರಾತನ ಧರ‍್ಮಿಕ ಸಂಸ್ಕೃತಿ ಪಾಲಿಸಿದರೆ ಮನಶ್ಸಾಂತಿ

ಆಸ್ತಿ ವಿವಾದ ಹಿನ್ನಲೆ ಒಂದೆ ಕುಟುಂಬದವರ ಜಟಾಪಟಿ

ಶ್ರೀದುರ್ಗಾಪರಮೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪನೆ

ಏಕಾಏಕಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ

April 20, 2025

Ctv News Kannada

Chikkaballapura

ಸ್ವಾಭಿಮಾನಿ ಸಮಾವೇಶ ಹಿನ್ನಲೆ ಪೂರ್ವಭಾವಿ ಸಭೆ

1 min read

ಸ್ವಾಭಿಮಾನಿ ಸಮಾವೇಶ ಹಿನ್ನಲೆ ಪೂರ್ವಭಾವಿ ಸಭೆ

ಕಾಂಗ್ರೆಸ್‌ನಿ0ದ ಡಿ.೫ರಂದು ನಡೆಯಲಿರುವ ಸಮಾವೇಶ

ಡಿಸೆಂಬರ್ 5 ರಂದು ಹಾಸನದಲ್ಲಿ ನಡೆಯುವ ಸ್ವಾಭಿಮಾನ ಸಮಾವೇಶದ ಹಿನ್ನೆಲೆ ನಂಜನಗೂಡು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಇಂದು ಪೂರ್ವಭಾವಿ ಸಭೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್, ಮೈಸೂರಿನಲ್ಲಿ ಸಮಾವೇಶ ಹಮ್ಮಿಕೊಳ್ಳಬೇಕು ಎಂದು ನಿರ್ಧರಿಸಲಾಗಿತ್ತು. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರಿಂದ ಹಾಸನದಲ್ಲಿ ಸ್ವಾಭಿಮಾನಿ, ಜನಕಲ್ಯಾಣ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಉಪ ಚುನಾವಣೆ ಯಲ್ಲಿ ಭರ್ಜರಿ ಜಯಗಳಿಸಿದ್ದೇವೆ. ಜನಪರ ಕೆಲಸಗಳನ್ನು ಮಾಡಿದ್ದೇವೆ. 136 ಸೀಟ್ ಬಂದಿತ್ತು. ಪ್ರಸ್ತುತ ಈಗ ೧೩೯ ಸೀಟುಗಳು ಆಗಿದೆ. ಸಿದ್ದರಾಮಯ್ಯನವರ ಸರ್ಕಾರ ಪೂರ್ಣ ಪ್ರಮಾಣದ ಸರ್ಕಾರ ವಾಗಿದೆ. ಸಿಎಂ ಹಾಗೂ ಡಿಕೆ ಶಿವಕುಮಾರ್ ಅವರ ದಿಟ್ಟ ಹೋರಾಟದಿಂದ, ಪಾದಯಾತ್ರೆಯಿಂದ ಹೆಚ್ಚು ಸ್ಥಾನ ಸಿಕ್ಕಿದೆ ಎಂದರು.

ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾಂಗ್ರೆಸ್ ನಾಯಕರನ್ನು ಬಿಜೆಪಿಯ ಕೆಲವರು ಟಾರ್ಗೆಟ್ ಮಾಡ್ತಾ ಇದ್ದಾರೆ. ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಕಳೆದ ಸರ್ಕಾರವನ್ನು ಜನತೆ ದಿಕ್ಕರಿಸಿ, ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತಂದರು. ಎಷ್ಟೇ ಆರೋಪ ಬಂದರೂ ಸಿದ್ದರಾಮಯ್ಯನವರು ತಮ್ಮ ಕೆಲಸ ಮಾಡ್ತಾ ಇದ್ದಾರೆ. ಮುಡ ಪ್ರಕರಣ ಕೋರ್ಟ್ ನಲ್ಲಿದೆ. ಸಿದ್ದರಾಮಯ್ಯರವರು ವಕೀಲರು ಆಗುರಿವುದರಿಂದ ಅವರಿಗೆ ಏನು ಮಾಡಬೇಕೆಂದು ಗೊತ್ತಿದೆ ಎಂದರು.

ಅಧಿಕಾರ ವಹಿಸಿಕೊಂಡ ನಂತರ ಎಲ್ಲ ಭರವಸೆ ಈಡೇರಿಸಿದ್ದರೂ ಕಾಂಗ್ರೆಸ್ ಮೇಲೆ ನಿರಂತರ ಹಿಂಸೆಯನ್ನು ಬಿಜೆಪಿ ಕೊಡ್ತಾ ಇದೆ. ಆದರೂ ನಾವು ಕುಗ್ಗೋರಲ್ಲ. ಈ ಭಾಗದ ೧೫ ಸಾವಿರ ಕಾಂಗ್ರೆಸ್ ಕಾರ್ಯಕರ್ತರ ನಿರೀಕ್ಷೆಯಲ್ಲಿದ್ದು, ನಿಮ್ಮ ಶಕ್ತಿ ಯನ್ನು ತೋರಿಸಲು ಮತ್ತಷ್ಟು ಹೆಚ್ಚಿನ ಸಂಖ್ಯೆ ಯಲ್ಲಿ ಬಂದು ಮುಖ್ಯಮಂತ್ರಿಗಳ ಕೈ ಬಲ ಪಡಿಸಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾಧ್ಯಕ್ಷ ಶ್ರೀಕಂಠ ಸ್ವಾಮಿ, ಕುರಟ್ಟಿ ಮಹೇಶ್, ಲತಾ ಸಿದ್ದ ಶೆಟ್ಟಿ ಇದ್ದರು.

About The Author

Leave a Reply

Your email address will not be published. Required fields are marked *