ನಕಲಿ ಡೆತ್ ಸರ್ಟಿಫಿಕೇಟ್ ಪ್ರಕರಣದಲ್ಲಿ ಶಿರಸ್ತೆದಾರ್ ಅಮಾನತು
1 min readನಕಲಿ ಡೆತ್ ಸರ್ಟಿಫಿಕೇಟ್ ಪ್ರಕರಣದಲ್ಲಿ ಶಿರಸ್ತೆದಾರ್ ಅಮಾನತು
ಹಣದ ದುರಾಸೆಗೆ ನಕಲಿ ಸರ್ಟಿಫಿಕೆಟ್ ನೀಡಿದವ ಎತ್ತಂಗಡಿ
ಬದುಕಿರುವಾಗಲೇ ಮರಣ ಪತ್ರ ನೀಡಿದ ಪ್ರಕರಣಕ್ಕೆ ಸಂಬಧಿಸಿ ಮೂವರು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಐವರ ವಿರುದ್ಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂಜನಗೂಡು ತಾಲ್ಲೂಕಿನ ಮುಳ್ಳೂರು ಗ್ರಾಮದ ಚಂದ್ರಶೇಖರ್ ಎಂಬುವರು ಮೃತಪಟ್ಟಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿ, ಜಮೀನು ಖಾತೆ ಮಾಡಿಸಿಕೊಳ್ಳಲು ಮರಣ ಪತ್ರವನ್ನು ಅಧಿಕಾರಿಗಳು ನೀಡಿದ್ದರು.
ಬದುಕಿರುವಾಗಲೇ ಮರಣ ಪತ್ರ ನೀಡಿದ ಪ್ರಕರಣಕ್ಕೆ ಸಂಬoಧಿಸಿ ಮೂವರು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಐವರ ವಿರುದ್ಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂಜನಗೂಡು ತಾಲ್ಲೂಕಿನ ಮುಳ್ಳೂರು ಗ್ರಾಮದ ಚಂದ್ರಶೇಖರ್ ಎಂಬುವರು ಮೃತಪಟ್ಟಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿ, ಜಮೀನು ಖಾತೆ ಮಾಡಿಸಿಕೊಳ್ಳಲು ಮರಣ ಪತ್ರವನ್ನು ಅಧಿಕಾರಿಗಳು ನೀಡಿದ್ದರು. ಚಂದ್ರಶೇಖರ್ ಎಂಬುವರು ಕೆನಡಾ ದೇಶದಲ್ಲಿ ವಾಸವಾಗಿದ್ದು, ಮುಳ್ಳೂರು ಗ್ರಾಮದಲ್ಲಿರುವ ಸರ್ವೆ ನಂಬರ್ 442 ರಲ್ಲಿ 1026 ಗುಂಟೆ ಮತ್ತು 444ರ ಸರ್ವೆ ನಂಬರ್‌ನಲ್ಲಿ 1.30 ಗುಂಟೆ ಜಮೀನು ಇದೆ.
ಹಾಗಾಗಿ ಈ ಜಮೀನು ಅಕ್ರಮವಾಗಿ ಖಾತೆ ಮಾಡಿಸಿಕೊಳ್ಳಲು ಕೃಷ್ಣೇಗೌಡ ಮತ್ತು ಶಿವ ಮಲ್ಲೇಗೌಡ ಎಂಬುವವರು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಶಾಮಿಲಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಯಾರನ್ನು ವಿಚಾರಣೆ ಮಾಡದೆ ಜಮೀನಿಗೆ ತೆರಳಿ ಪರಿಶೀಲಿಸದೆ ನಂಜನಗೂಡು ಕಂದಾಯ ಇಲಾಖೆಯ ಗೋಳೂರು ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್, ರಾಜಸ್ವ ನಿರೀಕ್ಷಕ ಜೆ.ಪ್ರಕಾಶ್, ಶಿರಸ್ತೆದಾರ್ ಶ್ರೀನಾಥ್ ಎಂಬುವವರು ಖಾತೆ ಬದಲಾವಣೆ ಮಾಡಿದ್ದರು.
ಈ ವಿಚಾರವಾಗಿ ಐವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚಂದ್ರಶೇಖರ್ ಸಂಬAಧಿ ಎನ್.ನಾಗರಾಜರಾವ್ ಬಿಳಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿ ತಪ್ಪಿತಸ್ಥ ಅಧಿಕಾರಿಗಳನ್ನು ಬಂಧಿಸಬೇಕು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಮೂವರು ಅಧಿಕಾರಿಗಳನ್ನು ಅಮಾನತು ಮಾಡಬೇಕು. ಎಂದು ಆಗ್ರಹ ಪಡಿಸಿದರು. ರಾಜ್ಯ ಆಡಳಿತ ಮಂಡಳಿಯ ಮೊರೆ ಹೋಗಿದ್ದರು.
ನಂಜನಗೂಡು ತಹಸೀಲ್ದಾರ್ ಅವರ ವರದಿಯ ಆಧಾರದ ಮೇಲೆ ಪರಿಶೀಲಿಸಿದ ಬಳಿಕ ಮೈಸೂರಿನ ಪ್ರಾದೇಶಿಕ ಆಯುಕ್ತರು ಶಿರಸ್ತೆದಾರ್ ಶ್ರೀನಾಥ್ ಎಂಬವರನ್ನು ಅಮಾನತು ಪಡಿಸಿ ಆದೇಶ ನೀಡಿದ್ದಾರೆ. ಇನ್ನು ಬಾಕಿ ಉಳಿದಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿ ಆಡಳಿತ ಮಂಡಳಿಯ ಮುಖ್ಯಸ್ಥರು ತನಿಖೆ ನಡೆಸುತ್ತಿದ್ದಾರೆ.