ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ನವೆಂಬರ್ 3ರಂದು ಬಾನಂಗಳದಲ್ಲಿ ವಿಸ್ಮಯ! ಚಂದ್ರನ ಬಳಿಯೇ ಆಗುತ್ತೆ ಈ ಮ್ಯಾಜಿಕ್​

1 min read

 ವಿಶ್ವವು ಅನೇಕ ಸೋಜಿಗಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ವಿಜ್ಞಾನಿಗಳು ಈ ವಿಸ್ಮಯವನ್ನು ಒಂದೊಂದಾಗಿ ಹೊರಹಾಕುವ ಪ್ರಯತ್ನ ನಡೆಸುತ್ತಿದ್ದು ಅದಕ್ಕಾಗಿ ಅನೇಕ ಸಂಶೋಧನೆಗಳನ್ನು(Re-Search) ಕೈಗೊಳ್ಳುತ್ತಿದ್ದಾರೆ. ಆದರೆ ನಿಸರ್ಗ ತನ್ನೊಳಗಿನ ಬಗೆದಷ್ಟೂ ಮುಗಿಯದ ರಹಸ್ಯಗಳನ್ನು ಬಿಚ್ಚಿಡುತ್ತಲೇ ಇದೆ.

ಬಾನಂಗಳದಲ್ಲಿ ಕೂಡ ಇಂತಹ ಚಮತ್ಕಾರಗಳು (Magic) ಒಮ್ಮೊಮ್ಮೆ ನಮ್ಮ ಕಣ್ಣಿಗೆ ಕಂಡುಬರುತ್ತಲೇ ಇರುತ್ತದೆ. ಸೂರ್ಯನ ನಿರ್ಗಮನವಾದ ನಂತರ ಆಕಾಶದಲ್ಲಿ ಚಂದ್ರ ಹಾಗೂ ನಕ್ಷತ್ರಗಳು ಕಂಡುಬರುತ್ತವೆ. ಇದೇ ಸಮಯದಲ್ಲಿ (Time) ನಮ್ಮ ಕಣ್ಣನ್ನು ವಿಸ್ಮಯಗೊಳಿಸುವ ಚಮತ್ಕಾರಗಳು ಒಂದೊಂದಾಗಿ ಕಂಡುಬರುತ್ತದೆ.

ಬಾನಂಗಳದಲ್ಲಿ ನಡೆಯಲಿದೆ ಚಮತ್ಕಾರ

ರಾತ್ರಿಯ ವೇಳೆ ಆಕಾಶದತ್ತ ನೀವು ಸೂಕ್ಷ್ಮವಾಗಿ ಗಮನಿಸಿದಾಗ ಚಂದ್ರನ ಸಮೀಪ ಹೊಳೆಯುವ ನಕ್ಷತ್ರವೊಂದನ್ನು ಕಾಣುತ್ತೀರಿ. ಇದು ನಕ್ಷತ್ರ ಎಂದು ನೀವು ಭಾವಿಸಿದರೆ ನೀವು ಅದನ್ನು ಚಮತ್ಕಾರ ಎಂದು ಒಪ್ಪಿಕೊಳ್ಳಲೇಬೇಕು.

ಏಕೆಂದರೆ ಇದು ಗುರು ಗ್ರಹವಾಗಿದೆ ಹಾಗೂ ಈ ಗ್ರಹ ಅತ್ಯಂತ ಪ್ರಕಾಶಮಾನವಾದ್ದರಿಂದ ಹೊಳೆಯುತ್ತದೆ ಅಂತೆಯೇ ಖಗೋಳ ವೀಕ್ಷಕರಿಗೆ ನಕ್ಷತ್ರದಂತಹ ನೋಟವನ್ನೊದಗಿಸುತ್ತದೆ.

ಗುರು ಗ್ರಹದ ಈ ಅನನ್ಯ ನೋಟ ವರ್ಷದ ಸೀಮಿತ ದಿನದಂದು ಗೋಚರಿಸುತ್ತದೆ. ಈ ಬಾರಿ ನವೆಂಬರ್ 3 ರಂದು ಗುರು ಗ್ರಹದ ಈ ಉಜ್ವಲ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಪ್ರಕಾಶಮಾನವಾಗಿ ಹೊಳೆಯಲಿರುವ ಗುರು ಗ್ರಹ

ಸೌರವ್ಯೂಹದ ಅತಿದೊಡ್ಡ ಗ್ರಹ ಎಂದೇ ಕರೆಯಿಸಿಕೊಂಡಿರುವ ಗುರು ಗ್ರಹ ವಿರುದ್ಧ ದಿಕ್ಕಿನಲ್ಲಿದೆ ಅಂದರೆ ಸೂರ್ಯನಿಗೆ ನೇರವಾಗಿ ವಿರುದ್ಧ ದಿಕ್ಕಿನಲ್ಲಿದೆ. ಈ ಸ್ಥಳಾಂತರದಿಂದ ರಾತ್ರಿಯ ಹೆಚ್ಚು ಸಮಯ ಈ ಗ್ರಹವನ್ನು ಆಕಾಶದಲ್ಲಿ ಕಾಣಬಹುದಾಗಿದೆ ಅಂತೆಯೇ ವೀಕ್ಷಿಸಲು ಅವಕಾಶವನ್ನೊದಗಿಸುತ್ತದೆ.

ಭೂಮಿಗಿಂತ ಸುಮಾರು 318 ಪಟ್ಟು ದ್ರವ್ಯರಾಶಿ ಮತ್ತು ಸರಿಸುಮಾರು 1320 ಪಟ್ಟು ಹೆಚ್ಚಿನ ಪರಿಮಾಣದೊಂದಿಗೆ ಬೃಹತ್ ಗಾತ್ರವನ್ನು ಹೊಂದಿರುವ ಗುರು ಗ್ರಹವು ನಕ್ಷತ್ರದಂತೆಯೇ ಹೊಳೆಯುತ್ತದೆ.

ಈ ಗ್ರಹವು ಅನಿಲ ದೈತ್ಯ ಎಂದೆನಿಸಿದ್ದು, ಪ್ರಾಥಮಿಕವಾಗಿ ಹೈಡ್ರೋಜನ್ ಮತ್ತು ಹೀಲಿಯಂನಿಂದ ಕೂಡಿದೆ. ಈ ಗ್ರಹದ ಇನ್ನೊಂದು ವಿಶೇಷತೆ ಎಂದರೆ ಇದು ವೇಗವಾಗಿ ತಿರುತ್ತದೆ ಅಂತೆಯೇ ಸೌರವ್ಯೂಹದಲ್ಲಿ ವೇಗವಾಗಿ ತಿರುಗುವ ಸ್ಪಿನ್ನರ್ ಎಂದೆನಿಸಿದೆ.

ಸರಿಸುಮಾರು ಪ್ರತಿ ಹತ್ತು ಗಂಟೆಗಳಿಗೊಮ್ಮೆ ತನ್ನ ಅಕ್ಷದ ಮೇಲೆ ತಿರುಗುವಿಕೆಯನ್ನು ಪೂರ್ಣಗೊಳಿಸುತ್ತದೆ, ಇದರೊಂದಿಗೆ ಈ ಗ್ರಹವು ಕಡಿಮೆ ಸೌರದಿನವನ್ನು ಹೊಂದಿದೆ.

ನವೆಂಬರ್ 3 ಕ್ಕೆ ನಡೆಯಲಿದೆ ಆಕಾಶದಲ್ಲಿ ವಿಸ್ಮಯ

ಗುರು ಗ್ರಹವು ವಿರುದ್ಧ ದಿಕ್ಕನ್ನು ಪ್ರತಿ 399 ದಿನಗಳಿಗೊಮ್ಮೆ ಅಥವಾ ಸುಮಾರು 13 ತಿಂಗಳಿಗೊಮ್ಮೆ ತಲುಪುತ್ತದೆ. ಈ ವರ್ಷ ಗ್ರಹವು ನವೆಂಬರ್ 3, 2023 ರಂದು ವಿರುದ್ಧ ದಿಕ್ಕಿನಲ್ಲಿರಲಿದೆ.

ಈ ಸಮಯದಲ್ಲಿ ಗ್ರಹವು ಭೂಮಿಗೆ ಹತ್ತಿರವಾಗಿರುವುದರಿಂದ ಇದರ ಗೋಚರತೆ ಹಾಗೂ ಹೊಳಪು ದುಪ್ಪಟ್ಟಾಗಿರುತ್ತದೆ. ಗುರು ಗ್ರಹವನ್ನು ನೀವು ಟೆಲಿಸ್ಕೋಪ್ ಸಹಾಯವಿಲ್ಲದೆ ಬರಿಗಣ್ಣಿನಿಂದ ವೀಕ್ಷಿಸಬಹುದಾಗಿದೆ. ಇನ್ನು ಬೈನಾಕ್ಯುಲರ್ ಇದ್ದಲ್ಲಿ ಇನ್ನಷ್ಟು ಸ್ಪಷ್ಟವಾಗಿ ಈ ಗ್ರಹವನ್ನು ನೀವು ಕಣ್ತುಂಬಿಕೊಳ್ಳಬಹುದು.

ಸೋಜಿಗದ ಅನ್ವೇಷಣೆಗೆ ದಾರಿ

ಗುರು ಗ್ರಹವು ವಿರುದ್ಧ ದಿಕ್ಕಿನಲ್ಲಿದ್ದಾಗ ಭೂಮಿಗೆ ಸಮೀಪವಾಗಿದ್ದರೂ ಆಕಾಶದಲ್ಲಿ ಹೆಚ್ಚಿನ ಅಂತರವನ್ನು ಹೊಂದಿದೆ. ಸೂರ್ಯನ ಸುತ್ತ ಕಕ್ಷೆಯನ್ನು ಪೂರ್ಣಗೊಳಿಸಲು ಅದು ತೆಗೆದುಕೊಳ್ಳುವ ಸಮಯ ಸುಮಾರು 4331 ಭೂಮಿಯ ದಿನಗಳು, ಅಂದರೆ 12 ವರ್ಷಗಳು. ಈ ವಿಶಾಲವಾದ ದೂರ ಹಾಗೂ ಮಂದಗತಿಯ ಕಕ್ಷೆಯು ವಿರುದ್ಧ ದಿಕ್ಕಿನಲ್ಲಿರುವ ಗುರು ಗ್ರಹದ ಅವಕಾಶವನ್ನು ಒತ್ತಿಹೇಳುತ್ತದೆ.

ನವೆಂಬರ್ 3 ಸಮೀಪಿಸುತ್ತಿದ್ದಂತೆಯೇ ಗುರು ಗ್ರಹ ಇನ್ನಷ್ಟು ಸ್ಪಷ್ಟವಾಗಿ ಪ್ರಖರವಾಗಿ ಹೊಳೆಯುತ್ತಾ ಗೋಚರಿಸುತ್ತದೆ ಇದು ಖಗೋಳ ಶಾಸ್ತ್ರದ ಆಸಕ್ತರಿಗೆ ಅವಕಾಶವನ್ನುಂಟು ಮಾಡುವುದು ಮಾತ್ರವಲ್ಲ ಇನ್ನಷ್ಟು ಸೋಜಿಗದ ಅನ್ವೇಷಣೆಗಳಿಗೆ ದಾರಿಮಾಡಿಕೊಡುತ್ತದೆ.

About The Author

Leave a Reply

Your email address will not be published. Required fields are marked *