ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 26, 2024

Ctv News Kannada

Chikkaballapura

ಸೂರುಇಲ್ಲದೆ ಪರಿತಪಿಸುತ್ತಿದ್ದ ವಿಕಲಚೇತನ ಕುಟುಂಬಕ್ಕೆ ಆಸರೆ

1 min read

ಸೂರುಇಲ್ಲದೆ ಪರಿತಪಿಸುತ್ತಿದ್ದ ವಿಕಲಚೇತನ ಕುಟುಂಬಕ್ಕೆ ಆಸರೆ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸೂರು

ಬುದ್ಧಿಮಾಂಧ್ಯ ಕುಟುಂಬದ ಬದುಕಿಗೆ ಬೆಳಕಾದ ಸಂಸ್ಥೆ

ದಿನಗಳು ಉರುಳುತ್ತಿವೆ, ಹಂಗೋ ಹಿಂಗೋ ಬದುಕು ಸಾಗುತ್ತದೆ, ಮೂರ್ನಾಲ್ಕು ತಲೆಮಾರುಗಳಿಂದ ವಾಸಿಸುತ್ತಿರುವ ಗುಡಿಸಲು ಮಳೆ ಬಂದರೆ ಸೋರುತ್ತಿದೆ. ವಾಸದ ಮನೆಗಾಗಿ ಎಷ್ಟೇ ಪ್ರಯತ್ನಿಸಿದರು ಆ ಕುಟುಂಬದ ನೋವಿಗೆ ಸ್ಪಂದಿಸಿಲ್ಲ. ಆದರೆ, ನಂಜನಗೂಡಿನ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆ ಕುಟುಂಬದ ಕಷ್ಟಕ್ಕೆ ಮಿಡಿದಿದೆ. ಹಾಗಾದರೆ ಅಲ್ಲಿ ನಡೆದಿದ್ದಾರೂ ಏನು ಅಂತೀರಾ, ನೀವೇ ನೋಡಿ.

ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ಗೌರಮ್ಮ ಎಂಬುವರಿಗೆ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಲಾಗಿದೆ. ಮನೆ ಇಲ್ಲದೆ ಪರದಾಡುತ್ತಿದ್ದ ಅಜ್ಜಿ ಮತ್ತು ಬುದ್ಧಿಮಾಂಧ್ಯ ವಿಕಲಚೇತನ ಮಹಿಳೆಯರಿಗೆ ವಾತ್ಸಲ್ಯ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟು ಹಸ್ತಾಂತರ ಮಾಡಲಾಗಿದೆ.

ಸುಮಾರು ೧.೫೦ ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಮನೆ ನಿರ್ಮಾಣ ಮಾಡಲಾಗಿದ್ದು, ಅಡುಗೆ ಮನೆ, ಶೌಚಾಲಯ, ಕಲ್ಲಿನ ಮಂಚ ಸೇರಿದಂತೆ ವಿದ್ಯುತ್ ಸಂಪರ್ಕವನ್ನು ಮನೆಗೆ ಕಲ್ಪಿಸಿ ಕೊಡಲಾಗಿದೆ. ಹೊಸ ಮನೆಗೆ, ಹಾಲು ಉಕ್ಕಿಸಿ ಗೃಹಪ್ರವೇಶವನ್ನೂ ಮಾಡಲಾಗಿದೆ.
ನಂಜನಗೂಡಿನ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಿಬ್ಬಂದಿಗೆ ಗ್ರಾಮಸ್ಥರಿಂದ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.

ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತಾಯ ಮನೆಯನ್ನು ಹಸ್ತಾಂತರ ಮಾಡಿದ್ದಾರೆ. ಅಲ್ಲದೆ ವೃದ್ಧೆ ಗೌರಮ್ಮ ಕುಟುಂಬಕ್ಕೆ ಪ್ರತಿ ತಿಂಗಳು ಒಂದು ಸಾವಿರ ರೂ.ಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಸಾಸನ ನೀಡುತ್ತಿದ್ದಾರೆ. ಮೈಸೂರು ಜಿಲ್ಲೆಯ ನಿರ್ದೇಶಕ ವಿಜಯಕುಮಾರ್ ನಾಗನಾಳ, ನಂಜನಗೂಡು ತಾಲ್ಲೂಕು ಕ್ಷೇತ್ರ ಯೋಜನಾಧಿಕಾರಿ ಕೆ. ಧರ್ಮರಾಜ್, ಗ್ರಾಮ ಪಂಚಾಯಿತಿ ಸದಸ್ಯ ಮುದ್ದುಮಾದಶೆಟ್ಟಿ, ಮೇಲ್ವಿಚಾರಕ ಉದಯ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶಮ, ಒಕ್ಕೂಟದ ಅಧ್ಯಕ್ಷ ಸುಮಾ ಸೇರಿದಂತೆ ಶ್ರೀ ಧರ್ಮಸ್ಥಳ ಸಂಸ್ಥೆ ಕುಟುಂಬಕ್ಕೆ ಆಸರೆಯಾಗಿ ನಿಂತು ಬೆಳಕಾಗಿದ್ದಾರೆ.

 

About The Author

Leave a Reply

Your email address will not be published. Required fields are marked *