ಲೋಕ ಕಲ್ಯಾಣಾರ್ಥವಾಗಿ ಸುದರ್ಶನ ಮಹಾವಿಷ್ಣು ಯಾಗ
1 min readಲೋಕ ಕಲ್ಯಾಣಾರ್ಥವಾಗಿ ಸುದರ್ಶನ ಮಹಾವಿಷ್ಣು ಯಾಗ
30 ಮಂದಿ ವೇದ ಪಂಡಿತರಿ0ದ ವಿವಿಧ ಧಾರ್ಮಿಕ ಕಾರ್ಯಗಳು
ಬಾಗೇಪಲ್ಲಿ ತಾಲೂಕಿನ ಶ್ರೀಕ್ಷೇತ್ರ ಗಡಿದಂನಲ್ಲಿ ಲೋಕ ಕಲ್ಯಾಣಕ್ಕಾಗಿ ಡಿ.22ರಂದು ಸುದರ್ಶನ ಮಹಾವಿಷ್ಣುಯಾಗ ಶ್ರದ್ಧಾ ಭಕ್ತಿಯಿಂದ ನೆರವೇರಿತು. 30 ವೇದ ಪಂಡಿತರಿ0ದ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.
ಗಡಿದಿಂ ದೇವಾಲಯದ ಪ್ರಧಾನ ಅರ್ಚಕ ಕೆ.ಪ್ರಕಾಶ್ ರಾವ್ ನೇತೃತ್ವದಲ್ಲಿ ಬೆಂಗಳೂರಿನ ವಿವಿಧ ಸೇವಾಕರ್ತರ ಸಹಯೋಗದಲ್ಲಿ ಮುಂಜಾನೆಯಿ0ದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಈ ಧಾರ್ಮಿಕ ವಿಧಿವಿಧಾನಗಳನ್ನು 30 ಮಂದಿ ವೇದ ಪಂಡಿತರ ನಡೆಸಿಕೊಟ್ಟರು. ಷಷ್ಠಿಗಣಪತಿ ಪೂಜೆ, ರಕ್ಷಾಬಂಧನ, ಗಣಪತಿ ನವಗ್ರಹ, ಮೃತ್ಯುಂಜಯ ಆಯುಷ್ಯ, ನಕ್ಷತ್ರ ಸರ್ಪ ಹೋಮ, ಭೂನೀಳಾ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ, ವೈಜಯಂತಿ ವಿಜಯಲಕ್ಷ್ಮೀ ಸಹಿತ ಸುದರ್ಶನ ಮಹಾವಿಷ್ಣು ಕಳಶ ಸ್ಥಾಪನೆ ಸೇರಿ ಬೆಳಗ್ಗೆ 7 ಗಂಟೆಗೆ ವೇದಪಾರಾಯಣ ಸುದರ್ಶನ ಮಹಾವಿಷ್ಣು ಚಕ್ರಕ್ಕೆ ತಿರುಮಂಜಸ, 10 ಗಂಟೆಗೆ ಹೋಮ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ನೆರವೇರಿಸಲಾಯಿತು.
ಈ ವೇಳೆ ಪ್ರಧಾನ ಅರ್ಚಕ ಪ್ರಕಾಶ್ ಮಾತನಾಡಿ, ಲೋಕ ಕಲ್ಯಾಣಾರ್ಥ ಈ ಯಾಗವನ್ನು ಮಾಡುತ್ತಿದ್ದು, ಭೂ ಲೋಕದಲ್ಲಿ ಅತಿವೃಷ್ಟಿ, ಅನಾವೃಷ್ಟಿಗಳು ಆಗದೆ, ಕಾಲಕಾಲಕ್ಕೆ ಉತ್ತಮ ಮಳೆ ಬೆಳೆಗಳಾಗಲಿ, ಎಲ್ಲೆಡೆ ಸಸ್ಯ ಶ್ಯಾಮಲವಾಗಿ ಸಂವೃದ್ಧಿಯಿ0ದ ಜನರು ಬದುಕು ನಡೆಸಲಿ ಎಂದು ಆ ಶ್ರೀ ಲಕ್ಷ್ಮೀ ವೆಂಕಟೇಶ್ವರನನ್ನು ಪ್ರಾರ್ಥಿಸಲಾಗಿದೆ. ಆ ಪರಮಾತ್ಮನ ಕೃಪಾ ಕಟಾಕ್ಷೆ ತೋರಲಿ ಎಂದು ತಿಳಿಸಿದರು.
ಈ ಯಾಗ ಸ್ಥಳಕ್ಕೆ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಕ್ಷೇತ್ರದ ಜನತೆಗೆ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಕಾಲಕಾಲಕ್ಕೆ ಉತ್ತಮ ಮಳೆ ಬೆಳೆಗಳಾಗಿ, ರೈತಾಪಿ ಜನರ ಸಂಕಷ್ಟ ಹರಣವಾಗಲಿ ಎಂದರು.