ಸರ್ಕಾರಿ ಶಾಲೆ ಶಿಕ್ಷಕರಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ
1 min readಸರ್ಕಾರಿ ಶಾಲೆ ಶಿಕ್ಷಕರಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ
ಶಿಕ್ಷಕರಿಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿಗಳ ಆಕ್ರೋಶ
ಚಿಕ್ಕಬಳ್ಳಾಪುರ ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ
ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೇರಬೇಕು, ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದೆಲ್ಲ ವೇದಿಕೆಗಳಲ್ಲಿ ಪುಂಖಾನುಪು0ಖವಾಗಿ ಭಾಷಣ ಬಿಗಿಯುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೋಡಲೇಬೇಕಾದ ಸ್ಟೋರಿ ಇದು. ಸುಸಜ್ಜಿತ ಕಟ್ಟಡಗಳಿಲ್ಲದೆ ಪರದಾಡುವ ಮಕ್ಕಳು ಒಂದು ಕಡೆಯಾದರೆ ಶಿಕ್ಷಕರಿಲ್ಲದೆ ಪರದಾಡುತ್ತಿರುವ ಮಕ್ಕಳು ಮತ್ತೊಂದು ಕಡೆ. ಇದು ಸರ್ಕಾರಿ ಶಾಲೆಗಳ ಪ್ರಸ್ತುತ ಸ್ಥಿತಿ.
ಹೌದು, ಸರ್ಕಾರ ಶಿಕ್ಷಣಕ್ಕಾಗಿ ಪ್ರತಿ ವರ್ಷ ಕೋಟ್ಯಂತರ ರುಪಾಯಿಗಳ ವೆಚ್ಚ ಮಾಡುತ್ತಲೇ ಇದೆ. ಆದರೂ ದಿನೇ ದಿನೇ ಸರ್ಕಾರಿ ಶಾಲೆಗಳ ಶಿಕ್ಷಕರ ಆರ್ಥಿಕ ಮಟ್ಟ ಉತ್ತಮವಾಗುತ್ತಿದೆ ಹೊರತು, ಶಾಲೆಗಳಲ್ಲಿ ಕಲಿಯುವ ಮಕ್ಕಳ ಶಿಕ್ಷಣದ ಗುಣಮಟ್ಟ ಉತ್ತಮವಾಗಿಲ್ಲ ಎಂಬುದಕ್ಕೆ ಈ ಗ್ರಾಮದ ಶಾಲೆ ಒಂದು ಉಧಾಹರಣೆ ಅಷ್ಟೆ. ಇನ್ನು ಮಾತೆತ್ತಿದರೆ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಮಾತನಾಡುವ ಅಧಿಕಾರಿಗಳು, ಕನ್ನಡಪರ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಸರ್ಕಾರಿ ಶಾಲೆಗಳ ವಾಸತ್ವ ಸ್ಥಿತಿ ಅರಿಯುವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂಬುದಕ್ಕೆ ಈ ಶಾಲೆ ಒಂದು ನಿದರ್ಶನ.
ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಲ್ಲದೆ ವ್ಯಾಸಂಗ ಕಠಿಣವಾಗಿದ್ದು, ಕೂಡಲೇ ಅಗತ್ಯ ಶಿಕ್ಷಕರನ್ನ ನೇಮಿಸುವಂತೆ ಆಗ್ರಹಿಸಿ ಚಿಕ್ಕಬಳ್ಳಾಪುರ ಡಿಡಿಪಿಐ ಕಚೇರಿ ಮುಂದೆ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಚಿಕ್ಕಬಳ್ಳಾಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ೬ ವಿಷಯಗಳಿಗೆ ಇರೋದು ಇಬ್ಬರೇ ಶಿಕ್ಷಕರು, ಪರೀಕ್ಷೆಗಳು ಹತ್ತಿರವಾಗುತ್ತಿದ್ದರೂ ಕನ್ನಡ, ಹೊರತುಪಡಿಸಿ ಉಳಿದ ವಿಷಯಗಳಿಗೆ ಶಿಕ್ಷರಿಲ್ಲದೇ, ಸಮರ್ಪಕ ಶಿಕ್ಷಣದ ಕೊರತೆ ಎದುರಿಸುತ್ತಿದ್ದೇವೆ ಎಂದು ಅಡ್ಡಗಲ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಸಮಾಧಾನ ಹೊರ ಹಾಕಿದರು.
ಸರ್ಕಾರಿ ಶಾಲೆಗಳೆಂದರೆ ಬಡವರು ಮಾತ್ರ ವ್ಯಾಸಂಗ ಮಾಡುವ ಶಿಕ್ಷಣ ಕೇಂದ್ರಗಳಾಗಿರುವುದು ಗುಟ್ಟಾಗಿಲ್ಲ. ಅದರಲ್ಲೂ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಸಮರ್ಪಕ ಶಿಕ್ಷಕರಿಲ್ಲದೆ ಪ್ರತಿಭಟನೆ ಮುಂದಾಗಿದ್ದಾರೆ0ದರೇ ಅವರ ಸಂಕಷ್ಟ ಅರ್ಥ ಮಾಡಿಕೊಳ್ಳಬಹುದು. ಸರ್ಕಾರಿ ಶಾಲೆಗಳನ್ನು ಉದ್ದೆರ ಮಾಡುವುದಾಗಿ ಹೇಳುವ ಸರ್ಕಾರ ಮತ್ತು ಜನಪ್ರತಿನಿಧಿಗಳ ಮಾತು ಕೇವಲ ಮಾತಿಗೆ ಸೀಮಿತ, ಅದು ಅನುಷ್ಠಾನವಾಗುವುದಿಲ್ಲ ಎಂಬುದಕ್ಕೆ ಈ ಶಾಲೆಯ ಮಕ್ಕಳ ಹೋರಾಟವೇ ಸಾಕ್ಷಿಯಾಗಿದೆ.
ಇನ್ನು ಸರ್ಕಾರರದ ನಿರ್ಲಕ್ಷ ಹೀಗೇ ಮುಂದುವರಿದರೆ ಈ ಬಾರಿ 10ನೇ ತರಗತಿಯಲ್ಲಿರುವ ಮಕ್ಕಳ ಪಾಡೇನು ಎಂಬ ಆತಂಕ ಮಕ್ಕಳ ಪೋಷಕರನ್ನು ಕಾಡುತ್ತಿದೆ. ಹಾಗಾಗಿ ಸರ್ಕಾರದ ಕ್ರಮ ಖಂಡಿಸಿ ಗ್ರಾಮಸ್ಥರು ಶಿಕ್ಷಣ ಇಲಾಖೆ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಶಿಕ್ಷಣ ಇಲಾಖೆ ಸೋಮವಾರದ ನಂತರ ಅಗತ್ಯ ಶಿಕ್ಷಕರ ನೇಮಕ ಮಾಡುವ ಭರವಸೆ ನೀಡಿದೆ.