ರಾಜ್ಯ ರೈತ ಸಂಘದಿoದ ವಿವಿಧ ಬೇಡಿಕೆ ಈಡೇರಿಸಲು ಹೋರಾಟ
1 min readವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜು.13ಕ್ಕೆ ಪ್ರತಿಭಟನೆ
ರಾಜ್ಯ ರೈತ ಸಂಘದಿoದ ವಿವಿಧ ಬೇಡಿಕೆ ಈಡೇರಿಸಲು ಹೋರಾಟ
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನೇಮಕ, ಬರ ಪರಿಹಾರ, ಬೆಳೆವಿಮೆ, ಬಗರ್ ಹುಕ್ಕು, ಹೊಲದ ದಾರಿ ಸಮಸ್ಯೆ, ವಿದ್ಯುತ್ ಟಿ.ಸಿ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಜುಲೈ 13 ಕ್ಕೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ. ಪೂಜಾರಪ್ಪ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ರೈತಸಂಘ ತಿಳಿಸಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನೇಮಕ, ಬರ ಪರಿಹಾರ, ಬೆಳೆವಿಮೆ, ಬಗರ್ ಹುಕ್ಕು, ಹೊಲದ ದಾರಿ ಸಮಸ್ಯೆ, ವಿದ್ಯುತ್ ಟಿ.ಸಿ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಜುಲೈ 13 ಕ್ಕೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ. ಪೂಜಾರಪ್ಪ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ರೈತಸಂಘ ತಿಳಿಸಿದೆ. ಪಾವಗಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಮಾತನಾಡಿದರು.
ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಜನತೆ ಖಾಸಗಿ ಅಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಬೆಸ್ಕಾಂ ಇಲಾಖೆಯಿಂದ ಅಕ್ರಮ ಸಕ್ರಮದಡಿ ಟಿಸಿಗಳನ್ನು ಈ ಹಿಂದಿನ ಬಿ.ಜೆ.ಪಿ ಸರ್ಕಾರದಲ್ಲಿ 25 ಸಾವಿರ ಕಟ್ಟಿದರೆ ನೇರವಾಗಿ ಟಿ.ಸಿ ತಂದು ಅಳವಡಿಸುತ್ತಿದ್ದರು, ಆದರೆ ಈಗಿನ ರಾಜ್ಯ ಸರ್ಕಾರ ಅಕ್ರಮ ಸಕ್ರಮ ಯೋಜನೆ ರದ್ದು ಮಾಡಿದೆ. ಎಲ್ಲಾ ಹೋಬಳಿಗಳಲ್ಲಿ ಉಪ ಕೇಂದ್ರಗಳಲ್ಲಿ ಕನಿಷ್ಠ 10 ಟಿ.ಸಿ ಇಟ್ಟುಕೊಂಡಿರಬೇಕು, ರೈತರ ಟಿ.ಸಿ ಸುಟ್ಟಾಗ ಮಧಗಿರಿಗೆ ಹೋಗಿ ತರುವುದಕ್ಕೆ ರೈತರ ಬಳಿ ಹಣವೂ ಇರುವುದಿಲ್ಲ, ತರುವಷ್ಟರಲ್ಲಿ ಇಟ್ಟ ಬೆಳೆಯು ಒಣಗಿ ಹೋಗುತ್ತಿವೆ ಎಂದು ಆರೋಪಿಸಿದರು.
ಟಿ.ಸಿ ಸುಟ್ಟಾಗ ತಕ್ಷಣಕ್ಕೆ ಹೋಬಳಿ ಉಪ ಕೇಂದ್ರದಲ್ಲಿದ್ದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ತಹಶೀಲ್ದಾರ್‌ಗೆ ಮನವಿ ಮಾಡಿದರು. ಪಟ್ಟಣದ ಹೃದಯ ಬಾಗದಲ್ಲಿರುವ ತಾಲ್ಲೂಕು ದಂಡಾಧಿಕಾರಿ ಕಛೇರಿಯನ್ನು ತುಮಕೂರು ರಸ್ತೆಯ ಕಣಿವೆನಹಳ್ಳ ಗೇಟ್ ಬಳಿ ಸ್ಥಳಾಂತರಿಸಲು ಹೊರಟಿದ್ದಾರೆ, ನಾಗಲಮಡಿಕೆ, ಕೋಟಗುಡ್ಡ, ಲಿಂಗದಹಳ್ಳಿ, ವೈ,ಎನ್ ಹೊಸಕೋಟೆ ವೆಂಕಟಾಪುರ, ದೊಮ್ಮತಮರಿ, ಸಿ,ಕೆ ಪುರ, ಅರಸೀಕೆರೆ ಈ ಎಲ್ಲಾ ಭಾಗದ ರೈತರಿಗೆ ಈಗಿರುವ ತಾಲ್ಲೂಕು ಕಛೇರಿ ಅನುಕೂಲವಾಗಿದೆ, ಪಟ್ಟಣದಿಂದ 4 ಕಿ.ಮೀ ದೂರಕ್ಕೆ ಸ್ಥಾಳಾಂತರ ಮಾಡುವುದರಿಂದ ಇಲ್ಲಿ ಯಾವುದೇ ಬಸ್ ವ್ಯವಸ್ಥೆಯಿಲ್ಲಾ, ಅಂಗವಿಕಲರು, ರೈತರು, ವಯೋವೃದ್ದರು ತಮ್ಮ ಕೆಲಸಕಾರ್ಯಗಳಿಗೆ ತೊಂದರೆ ಉಂಟಾಗುವುದರಿoದ ಈಗಿರುವ ಸ್ಥಳದಲ್ಲಿಯೇ ಕಛೇರಿ ದುರಸ್ತಿ ಮಾಡಬಾರದೆಂದು ಜಿಲ್ಲಾಧಿಕಾರಿಗಳಿಗೆ ಸುದ್ದೀಗೋಷ್ಠಿಯಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅರಸೀಕೆರೆ ಮಲ್ಲೇಶ್, ನಿಡಗಲ್ ಹೊಬಳಿ ಅಧ್ಯಕ್ಷ ವೀರಭದ್ರಪ್ಪ, ತಾಳೇಮರದಹಳ್ಳಿ ಗೋವಿಂದಪ್ಪ, ರಾಮಾಂಜಿನಪ್ಪ, ಪೂಜಾರ್ ಚಿತ್ತಯ್ಯ, ನರಸಪ್ಪ, ರಮೇಶ್ ಸೇರಿದಂತೆ ರೈತರು ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.