ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 26, 2024

Ctv News Kannada

Chikkaballapura

ಪಾವಗಡದಲ್ಲಿ ಉರಿಯುತ್ತಿಲ್ಲ ಬೀದಿ ದೀಪಗಳು

1 min read

ಪಾವಗಡದಲ್ಲಿ ಉರಿಯುತ್ತಿಲ್ಲ ಬೀದಿ ದೀಪಗಳು

ಪುರಸಭೆ ವಿರುದ್ಧ ನಾಗರಿಕರ ಹಿಡಿ ಶಾಪ

ಮನವಿ ಮಾಡಿದರೂ ಗಮನ ಹರಿಸದ ಅಧಿಕಾರಿಗಳು

ಪಾವಗಡ ಪಟ್ಟಣದಲ್ಲಿ ವಿದ್ಯುತ್ ಕಚೇರಿ ಪಕ್ಕದಲ್ಲಿಯೇ ಬೀದಿ ದೀಪಗಳು ಉರಿಯುತ್ತಿಲ್ಲ. ಇದರಿಂದ ಕತ್ತಲೆಯಲ್ಲಿಯೇ ಜನ ಸಂಚಾರ ಮಾಡೋ ಸ್ಥಿತಿ ನಿರ್ಮಾಣವಾಗಿದ್ದು, ಪುರಸಭೆ ಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಪಾವಗಡ ಪಟ್ಟಣದಲ್ಲಿ ವಿದ್ಯುತ್ ಕಚೇರಿ ಪಕ್ಕದಲ್ಲಿಯೇ ಬೀದಿ ದೀಪಗಳು ಉರಿಯುತ್ತಿಲ್ಲ. ಇದರಿಂದ ಕತ್ತಲೆಯಲ್ಲಿಯೇ ಜನ ಸಂಚಾರ ಮಾಡೋ ಸ್ಥಿತಿ ನಿರ್ಮಾಣವಾಗಿದ್ದು, ಪುರಸಭೆ ಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಪಟ್ಟಣದ 4ನೇ ವಾರ್ಡಿನ ಕೆಇಬಿ ಆಫೀಸ್ ಪಕ್ಕ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬೀದಿ ದೀಪಗಳಿಲ್ಲದೆ ಸಾರ್ವಜನಿಕರು ಕತ್ತಲೆಯಲ್ಲಿ ಓಡಾಡುತ್ತಾರೆ. ಬೆಳಕಿನ ವ್ಯವಸ್ಥೆ ಕಲ್ಪಿಸಬೇಕಾದ ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸದೆ ನಿರ್ಲಕ್ಷ ವಹಿಸಿದ್ದಾರೆ ಸ್ಥಳೀಯರ ಆರೋಪ.

ಹಿರಿಯ ನಾಗರಿಕರು, ಮಹಿಳೆಯರು, ಶಾಲಾ ಮಕ್ಕಳು ರಾತ್ರಿ ವೇಳೆ ಮನೆಯಿಂದ ಹೊರ ಬರಲು ಹೆದರುವಂತಾಗಿದೆ. ಬೀದಿ ದೀಪಗಳ ಸಮಸ್ಯೆ ಜೊತೆಗೆ ಪುರಸಭೆ ವ್ಯಾಪ್ತಿಯ ನಿವಾಸಿಗಳಿಗೆ ಕರಡಿ ಕಾಟವೂ ಆರಂಭoವಾಗಿದೆ. ಜನವಸತಿ ಪ್ರದೇಶಗಳಲ್ಲಿ ಕರಡಿ ಪ್ರತ್ಯವಾಗಿದ್ದು, ಇದರಿಂದ ಸಾರ್ವಜನಿಕರು ತೀವ್ರ ಭೀತಿ ಎದುರಪಿಸುತ್ತಿದ್ದಾರೆ. ಪಟ್ಟಣದ ವ್ಯಾಪ್ತಿಯಲ್ಲಿಯೇ ಕರಡಿಗಳು ಕಾಣಿಸಿಕೊಡಂಇರುವ ಕಾರಣ ರಾತ್ರಿ ವೇಳೆ ಜನ ಹೊರಬರಲೂ ಆತಂಕಪಡುವoತಾಗಿದೆ.

ಜನ ನಿಬಿಡ ಪ್ರದೇಶಗಳ ಸಮೀಪದಲ್ಲಿಯೇ ಕರಡಿಗಳು ಪ್ರತ್ಯoವಾಗಿದ್ದು, ಜನರು ಭೀತಿಗೊಂಡಿದ್ದಾರೆ. ಪಟ್ಟಣದ ಬನಶಂಕರಿ , ಗುರಪ್ಪ ಕಾಂಪ್ಲೆಕ್ಸ್, ಹೊಸ ಬಸ್ ನಿಲ್ದಾಣ, ಮೂಡುಮಕಳನೆಲ ಮುಂತಾದ ಪ್ರದೇಶಗಳಲ್ಲಿ ಕರಡಿಗಳು ಕಾಣಿಸಿಕೊಂಡಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ. ಪಟ್ಟಣದ ಹೊರವಲಯದಲ್ಲಿರುವ ಕಣಿವೆನರಸಿಂಹ ಗುಡ್ಡದಲ್ಲಿ ಕರಡಿಗಳು ವಾಸವಾಗಿರುವುದು ಹಳೆಯ ವಿಚಾರವೇ ಆದರೂ ಅವು ಇದೀಗ ಪಟ್ಟಣದ ವರೆಗೂ ಬಂದಿರೋದು ಜನರಲ್ಲಿ ಆಈತಂಕ ಮೂಡಲು ಕಾರಣವಾಗಿದೆ.

ಕಳೆದ ಹಲವು ವರ್ಷಗಳಿಂದ ಗುಡ್ಡದಲ್ಲಿಯೇ ಇದ್ದ ಕರಡಿಗಳು ಜನರ ತಂಟೆಗೆ ಬಂದ ನಿದರ್ಶನಗಳೇ ಇಲ್ಲ. ಅಲ್ಲದೆ, ಅವು ಜನವಸತಿ ಪ್ರದೇಶಗಳತ್ತ ಬಂದ ಉದಾಹರಣೆಯೂ ಇರಲಿಲ್ಲ. ಆದರೆ ಇದೀಗ ಜನವಸತಿ ಪ್ರದೇಶಗಳತ್ತ ಕರಡಿಗಳು ಬರುತ್ತಿರುವುದು, ಅದರಲ್ಲಿಯೂ ಪಟ್ಟಣದ ಪ್ರದೇಶದಲ್ಲಿಯೇ ಪ್ರತ್ಯವಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಕರಡಿಗಳು ಹೆಚ್ಚಾಗಿ ಕಾಮಿಸಿಕೊಂಡಿವೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಪಟ್ಟದ ವಿವಿಧ ಬಡಾವಣೆಗಳಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲು ಆವರಿಸಿದ ಕಾರಣ ಕಳ್ಳರಿಗೆ ವರದಾನವಾಗಿ ಪರಿಣಮಿಸಲಿದೆ ಎಂಬ ಆತಂಕವೂ ಕಾಡುತ್ತಿದೆ. ಕೆಲ ಮುಖ್ಯ ರಸ್ತೆಗಳಲ್ಲಿ ದೀಪಗಳು ಉರಿಯುತ್ತಿದ್ದರೆ, ವಾರ್ಡುಗಳಲ್ಲಿ ಮಾತ್ರ ದೀಪಗಳು ಇಲ್ಲವಾಗಿವೆ.

 

About The Author

Leave a Reply

Your email address will not be published. Required fields are marked *