ಕಾಂಗ್ರೆಸ್ ಮುಖಂಡನ ಕೊಲೆ ಖಂಡಿಸಿ ಶ್ರೀನಿವಾಸಪುರ ಪಟ್ಟಣ ಬಂದ್
1 min readಜಿಪಂ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಹತ್ಯೆ ಖಂಡಿಸಿ ಶ್ರೀನಿವಾಸಪುರ ತಾಲೂಕು ಬಂದ್ ಮಾಡುವಂತೆ ವಿವಿಧ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆ ಇಂದು ಮಂಗಳವಾರ (ಅ.31) ಮಂಗಳವಾರ ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರಿಗೆ ಎಲ್ಲರು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವಂತೆ ದಲಿತಪರ ಸಂಘಟನೆಗಳು ಕರೆ ನೀಡಿವೆ.
ಸಮುದಾಯದ ಮುಖಂಡನ ಹತ್ಯೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದಲಿತ ಸಂಘಟನೆಗಳು ಶ್ರೀನಿವಾಸಪುರ ಸಂಪೂರ್ಣ ಬಂದ್ ಮಾಡಲು ನಿರ್ಧಿರಿಸಿವೆ. ಪಟ್ಟಣದ ಪ್ರಮುಖ ಬೀದಿಯಲ್ಲಿ ಬೈಕ್ ರ್ಯಾಲಿ ನಡೆಯಲಿದೆ. ನೂರಕ್ಕೂ ಹೆಚ್ಚು ಬೈಕ್‌ಗಳ ಮೂಲಕ ನಡೆಯಲಿರುವ ರಾಲಿ. ಸಂಜೆ ಆರುಗಂಟೆವರೆಗೆ ತಾಲೂಕು ಸಂಪೂರ್ಣ ಸ್ತಬ್ಧಗೊಳ್ಳಲಿದೆ. ಆದರೆ ಯಾವುದೇ ಕಾರಣಕ್ಕೂ ಬಲವಂತ ಮಾಡಿ ಮುಚ್ಚಿಸದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಶ್ರೀನಿವಾಸಪುರ ಪಟ್ಟಣಕ್ಕೆ ಎಂಟ್ರಿ ಕೊಡುವ ಮಾರ್ಗಗಳಿಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿರುವ ಸಂಘಟನೆಗಳು. ಪೊಲೀಸರ ಮುಂದೆಯೇ ದಲಿತ ಸಂಘಟನೆಗಳ ಕಾರ್ಯಕರ್ತರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಪಟ್ಟಣ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆ ಪಟ್ಟಣದಲ್ಲಿ ಸಂಚರಿಸದ KSRTC ಹಾಗೂ ಖಾಸಗಿ ಬಸ್ ಗಳು. ಬಸ್ ನಿಲ್ದಾಣ ಸಹ ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿವೆ. ಪಟ್ಟಣದ ಹೊರಹೊಲಯದಲ್ಲೇ ಸಂಚಾರ ಮಾಡ್ತಿರುವ ಬಸ್ ಗಳು. ಶ್ರೀನಿವಾಸಪುರ ಹೊರವಲಯದಲ್ಲಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗ್ತಿರೋ ಬಸ್ ಗಳು. ಬೇರೆಡೆ ಪ್ರಯಾಣಿಸುವವರು ಶ್ರೀನಿವಾಸಪುರ ಪಟ್ಟಣದ ಹೊರವಲಯಕ್ಕೆ ನಡೆದುಹೋಗುತ್ತಿದ್ದಾರೆ. ಒಳಗಡೆ ನಡೆದು ಬರುತ್ತಿದ್ದಾರೆ. ಸದ್ಯ ಪ್ರತಿಭಟನೆ ರಾಲಿ ನಡೆಸುತ್ತಿರುವ ಹಿನ್ನೆಲೆ ಶ್ರೀನಿವಾಸಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕಳೆದ ವಾರ ತಮ್ಮ ತೋಟದ ಬಳಿ ಬರ್ಬರವಾಗಿ ಹತ್ಯೆಯಾದ ಶ್ರೀನಿವಾಸನ್‌ರನ್ನು ಹತ್ಯೆ ಮಾಡಲಾಗಿತ್ತು. ಆರೋಪಿಗಳಿಗೆ ಕಠಿಣವಾದ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ತಾಲೂಕಿನ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳು ತಾಲೂಕು ಬಂದ್ ಮಾಡುವಂತೆ ಕರೆ ಕೊಟ್ಟಿದ್ದವು. ಈ ಹಿನ್ನೆಲೆ ಇಂದು ಪಟ್ಟಣ ಸಂಪೂರ್ಣ ಬಂದ್ ಆಗಲಿದೆ.