ಶ್ರೀನಿವಾಸಪುರ ತಾಲೂಕು ನೌಕರರ ಸಂಘದ ಚುನಾವಣೆ
1 min readಶ್ರೀನಿವಾಸಪುರ ತಾಲೂಕು ನೌಕರರ ಸಂಘದ ಚುನಾವಣೆ
ಬೈರೇಗೌಡ ತಾಲೂಕು ಅಧ್ಯಕ್ಷರಾಗಿ ಆಯ್ಕೆ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಎಂ ಬೈರೇಗೌಡ 19 ಮತ ಪಡೆದು ಜಯಶೀಲರಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಶ್ರೀನಿವಾಸಪುರ ತಾಲೂಕು ನೌಕರರ ಸಂಘದ ಅಧ್ಯಕ್ಷರಾಗಿ ಬೈರೇಗೌಡ ಆಯ್ಕೆಯಾಗಿದ್ದಾರೆ ಆಯ್ಕೆ ನಂತರ ನೂತನ ಅಧ್ಯಕ್ಷ ಎಂ.ಬೈರೇಗೌಡ ಮಾತನಾಡಿ, ಒಟ್ಟು 32 ನಿರ್ದೇಶಕರಲ್ಲಿ 19 ಮಂದಿ ನಿರ್ದೇಶಕರು ಆಶೀರ್ವಾದ ಮಾಡಿದ್ದಾರೆ. ಅವರ ಆಶೀರ್ವಾದ ದಿಂದ ಮುಂದಿನ ಐದು ವರ್ಷ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ಕಳೆದ ಎರಡು ಚುನಾವಣೆಗಳಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಸ್ಪರ್ಧೆ ಮಾಡಿ ನಿರ್ದೇಶಕನಾಗಿ ಆಯ್ಕೆಯಾಗಿದ್ದೆ. ಆದರೆ ಈ ಬಾರಿ ಕೆಲವರು ಕುತಂತ್ರ ಮಾಡಿ ಪ್ರಾಥಮಿಕ ಶಾಲಾ ಶಿಕ್ಷಕರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದರು. ಆದರೂ ಪ್ರಾಥಮಿಕ ಶಾಲಾ ಮತದಾರರು ಆಶೀರ್ವಾದ ಮಾಡಿ ನಿರ್ದೇಶಕರಾಗಿ ಆಯ್ಕೆ ಮಾಡಿದರು. ಅಧ್ಯಕ್ಷರ ಚುನಾವಣೆಯಲ್ಲಿಯೂ 19 ಮಂದಿ ಮತ ನೀಡಿ ಆಶೀರ್ವಾದ ಮಾಡಿದ್ದಾರೆ, ಆಶೀರ್ವಾದ ಮಾಡಿದ ಎಲ್ಲರಿಗೂ ಚಿರರುಣಿಯಾಗಿರುವುದಾಗಿ ಅವರು ಹೇಳಿದರು.