ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ಶ್ರೀನಿವಾಸ ಸಾಗರ
1 min read
ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ಶ್ರೀನಿವಾಸ ಸಾಗರ
ಬೆಂಗಳೂರು ಸೇರಿದಂತೆ ಇತರೆ ಕಡೆಗಳಿಂದ ಪ್ರವಾಸಿಗರ ದಂಡು
ಹರಿಯುತ್ತಿರುವ ನೀರಿನಲ್ಲಿ ಮಿಂದೇಳುತ್ತಿರುವ ಪ್ರವಾಸಿಗರು
ಚಿಕ್ಕಬಳ್ಳಾಪುರ ಎಂದರೆ ಇತ್ತೀಚಿನ ದಿನಗಳಲ್ಲಿ ಪ್ರಮುಖ ಪ್ರವಾಸಿ ತಾಣವಾಗಿ ಬದಲಾಗುತ್ತಿದೆ. ಈ ಹಿಂದೆಯೇ ಇದ್ದ ನಂದಿಗಿರಿಧಾಮ ಸೇರಿದಂತೆ ಇಥರೆ ಪ್ರೇಕ್ಷಣೀಯ ಸ್ಥಳಗಳ ಜೊತೆಗೆ ಇತ್ತೀಚಿಗೆ ಇಶಾ ದೇವಾಲಯ ಸೇರ್ಪಡೆಯಾಗಿದೆ. ಅಲ್ಲದೆ ಶ್ರೀನಿವಾಸ ಸಾಗರದಂತಹ ಕೆರೆಗಳೂ ಇದೀಗ ಪ್ರವಾಸಿ ತಾಣಗಳಾಗಿ ಬದಲಾಗಿದ್ದು, ಪ್ರತಿನಿತ್ಯ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಹೌದು, ಚಿಕ್ಕಬಳ್ಳಾಪುರ ಎಂದರೆ ಬರದ ನಾಡು, ಚಿಕ್ಕಬಳ್ಳಾಪುರ ಎಂದರೆ ನೀರಿಲ್ಲದ ಜಿಲ್ಲೆ ಇವು ಈವರೆಗೂ ಚಿಕ್ಕಬಳ್ಳಾಪುರಕ್ಕೆ ಇದ್ದ ಕುಖ್ಯಾತಿಗಳು. ಆದರೆ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಈ ಕುಖ್ಯಾತಿಗಳು ಹೋಗಿ ಇದೀಗ ಪ್ರಖ್ಯಾತಿಗಳು ಆರಂಭವಾಗಿವೆ. ಇದಕ್ಕೆ ಕಾರಣ ಸತತ ಮಳೆಯಿಂದ ತುಂಬಿ ಕೋಡಿ ಹರಿಯುತ್ತಿರುವ ಕೆರೆಗಳು ಒಂದು ಕಡೆಯಾದರೆ, ಪ್ರಮುಖ ಪ್ರವಾಸಿ ತಾಣಗಳು ಮತ್ತೊಂದು ಕಡೆ.
ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮಕ್ಕೆ ಈವರೆಗೂ ವೀಕೆಂಡ್‌ನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಇಶಾ ದೇವಾಲಯ ಆರಂಭವಾದ ನಂತರ ಈ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಜೊತೆಗೆ ನಂದಿಬೆಟ್ಟ ಮತ್ತು ಇಶಾ ದೇವಾಲಯಗಳು ಜನರಿಂದ ಕಿಕ್ಕಿರಿದು ಸೇರುತ್ತಿದ್ದಾರೆ. ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರ ಅಂತಾರಾಷ್ಟಿಯ ವಿಮಾನ ನಿಲ್ದಾಣಕ್ಕೂ ಕೂಗಳತೆ ದೂರದಲ್ಲಿದೆ. ಇದರಿಂದಾಗಿ ವೀಕೆಂಡ್ ಬಂದರೆ ಪ್ರವಾಸಿಗರು ಚಿಕ್ಕಬಳ್ಳಾಪುರದತ್ತ ದಾಂಗುಡಿ ಇಡುತ್ತಿದ್ದಾರೆ.
ಪ್ರಸ್ತುತ ಸತತವಾಗಿ ಸುರಿದ ಮಳೆಯಿಂದಾಗಿ ಶ್ರೀನಿವಾಸ ಸಾಗರ ಕೆರೆ ತುಂಬಿ ಹರಿಯುತ್ತಿದೆ. ಕೋಡಿಯಿಂದ ದುಮ್ಮುಕ್ಕಿತ್ತಿರುವ ನೀರು ಜಲಾಶಯದಂತೆ ಕಂಡು ಬರುತ್ತಿದೆ. ಸಾಲದೆಂಬ0ತೆ ಶ್ರೀನಿವಾಸ ಸಾಗರ ಸುತ್ತಮುತ್ತ ಪರಿಸರವೂ ಹಸಿರುಮಯವಾಗಿದ್ದು, ಇಲ್ಲಿಗೆ ಆಗಮಿಸಿದರೆ ಮಲೆನಾಡು ವಾತಾವರಣ ನೆನಪಿಸುವ ರೀತಿಯಲ್ಲಿದೆ. ಹಾಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ತುಂಬಾ ಖುಷಿ ಪಡುತ್ತಿದ್ದಾರೆ.
ಶ್ರೀನಿವಾಸ ಸಾಗರ ಕೆರೆಯ ಕೋಡಿಯಿಂದ ನೀರು ಜಾರುತ್ತಿದ್ದು, ಇದು ಬೃಹತ್ ಜಲಪಾತದಂತೆ ಸವಾಗುತ್ತಿದೆ. ಇಲ್ಲಿ ಬೋಟಿಂಗ್ ಸೇರಿದಂತೆ ಇತರೆ ಅನುಕೂಲಗಳನ್ನು ಪ್ರವಾಸೋಧ್ಯಮ ಇಲಾಖೆ, ಇಲ್ಲವೆ ಜಿಲ್ಲಾಡಳಿತದಿಂದ ಮಾಡಿದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಗಣನೀಯವಾಗಿ ಹೆಚ್ಚಲಿದ್ದು, ಇದರಿಂದ ಚಿಕ್ಕಬಳ್ಳಾಪುರ ಪ್ರವಾಸೋಧ್ಯಮದಲ್ಲಿ ಮತ್ತಷ್ಟು ಪ್ರಖ್ಯಾತಿಗೆ ಬರುವುದರಲ್ಲಿ ಅನುಮಾನವಿಲ್ಲ.
ಇನ್ನು ಇಂದು ಭಾನುವಾರವಾದ ಕಾರಣ ಬೆಂಗಳೂರಿನಿ0ದ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರಕ್ಕೆ ಆಗಮಿಸಿದ್ದ ಪ್ರವಾಸಿ ಸುನಯನ ಸಿಟಿವಿ ನ್ಯೂಸ್‌ನೊಂದಿಗೆ ಮಾತನಾಡಿ, ಶ್ರೀನಿವಾಸ ಸಾಗರ ಸುತ್ತಮುತ್ತಲ ಪರಿಸರ ಮಲೆನಾಡು ರೀತಿಯಲ್ಲಿದೆ. ಹಾಗಾಗಿಯೇ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ, ನೀರಿನಲ್ಲಿ ಆಡುವುದೆಂದರೆ ಜನರಿಗೆ ಪ್ರೀತಿ, ಹಾಗಾಗಿ ಇಳ್ಲಿಗೆ ಬರುವ ಪ್ರತಿಯೊಬ್ಬರೂ ನೀರಿನಲ್ಲಿ ಮಿಂದು ಏಳುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ ಇಲ್ಲಿಗೆ ಬರಲು ಸಂಚಾರ ವ್ಯವಸ್ಥೆ ಸರಿಯಾಗಬೇಕಿದೆ. ಎಲ್ಲ ವಯೋಮಾನದವರೂ ಇಲ್ಲಿಗೆ ಬರುತ್ತಿದ್ದು, ವಯಸ್ಸಿನ ಯಾವುದೇ ಅಂಜಿಕೆ ಇಲ್ಲದೆ ನಲಿದಾಡುತ್ತಿದ್ದಾರೆ. ಇಲ್ಲಿ ಮಕ್ಕಳನ್ನು ಎಚ್ಚರದಿಂದ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.
ಇನ್ನು ದೇವನಹಳ್ಳಿ ಮೂಲದ ಮಮತಾ ಮಾತನಾಡಿ, ಜಲಾಶಯ ನೋಡಬೇಕಾದರೆ ಮಲೆನಾಡಿನ ಚಿಕ್ಕಮಗಳೂರು ಸೇರಿದಂತೆ ಇತರೆ ಪ್ರದೇಶಗಳಿಗೆ ಹೋಗಬೇಕು. ಅವು ತುಂಬಾ ದೂರವಿದ್ದು, ಹೆಚ್ಚಿನ ದಿನಗಳ ಸಮಯ ಹಿಡಿಯುತ್ತದೆ. ಆದರೆ ಒಂದೇ ದಿನದಲ್ಲಿ ಪ್ರವಾಸದ ಮೂಲಕ ಮಲೆನಾಡಿನಷ್ಟೇ ಪ್ರಕೃತಿಯಿರಕುವ ಶ್ರೀನಿವಾಸ ಸಾಗರ ಕಾಣಬಹುದಾಗಿದೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ, ಮಕ್ಕಳಿಗಂತೂ ತುಂಬಾ ಚೆನ್ನಾಗಿದೆ ಎಂದು ಖುಷಿ ಪಟ್ಟರು.