ಗೌರಿಬಿದನೂರಿನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು
1 min readಗೌರಿಬಿದನೂರಿನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು
ಕಾರ್ತಿಕ ಮಾಸದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು
ಗೌರಿಬಿದನೂರು ನಗರ ಹೊರವಲಯದ ಇತಿಹಾಸ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ಶ್ರದ್ಧಾಭಕ್ತಿಯಿಂದ ಇಂದು ನೆರವೇರಿತು. ಕಾರ್ತಿಕ ಮಾಸದ ಪ್ರಯುಕ್ತ 27 ನೇ ವಾರ್ಷಿಕೋತ್ಸವ ಹಾಗೂ ಲಕ್ಷದೀಪೋತ್ಸವ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಗಳು ನಡೆಯಲಿವೆ.
ಗೌರಿಬಿದನೂರು ನಗರ ಹೊರವಲಯದ ಇತಿಹಾಸ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ಶ್ರದ್ಧಾಭಕ್ತಿಯಿಂದ ಇಂದು ನೆರವೇರಿತು. ದೇವಾಲಯದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ, ಯಾಗ, ಕಳಶ ಸ್ಥಾಪನೆ, ಅಭಯ ಹಸ್ತ ಶ್ರೀ ಅಂಜನೇಯಸ್ವಾಮಿ ಪೂಜೆ, ನಾಗರ ಪೂಜೆ, ಮಹಾಗಣಪತಿ ಹೋಮ, ಗಿರಿಜಾ ಕಲ್ಯಾಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.
ಸೋಮವಾರ ಮಧ್ಯಾಹ್ನ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಈ ವೇಳೆಯಲ್ಲಿ ಶಾಸಕ ಕೆಎಚ್, ಪುಟ್ಟಸ್ವಾಮಿಗೌಡ ಶ್ರೀರಾಮಲಿಂಗೇಶ್ವರ ದೇವರ ಭ್ರಹ್ಮ ರಥೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಈ ದೇವಾಲಯ ಪುರಾಣ ಪ್ರಸಿದ್ದ ದೇವಾಲಯವಾಗಿದೆ, ಸರಿಸುಮಾರು 600 ವರ್ಷಗಳ ಇತಿಹಾಸ ಇರುವ ದೇವರು ಪ್ರತಿ ವರ್ಷ ಇಲ್ಲಿ ವಿಜೃಂಮಣೆಯಿಅದ ಪೂಜೆ ಕಾರ್ಯಕ್ರಮಗಳು ನಡೆಯತ್ತಿವೆ, ಈ ದೇವರ ದಯೆಯಿಂದ ತಾಲ್ಲೂಕಿನಲ್ಲಿ ಒಳ್ಳೆ ಮಳೆ ಬೆಳೆ ಅಗಬೇಕೆಂದು ಪ್ರಾರ್ಥಿಸುವೆ ಎಂದರು.
ದೇವಾಲಯಕ್ಕೆ ಮಾಜಿ ಶಾಸಕ ಎನ್,ಎಚ್, ಶಿವಶಂಕರರೆಡ್ಡಿ, ಸಿ,ಅರ್. ನರಸಿಂಹಮೂರ್ತಿ, ಸಮಾಜ ಸೇವಕ ಡಾ, ಕೆಂಪರಾಜು. ಜಯಪಾಲರೆಡ್ಡಿ ಇ ದೇವರ ದರ್ಶನ ಪಡೆದರು. ದೇವಾಲಯ ಆಡಳಿತ ಮಂಡಳಿಯಿ0ದ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.