ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಕಾರ್ತಿಕ ಮಾಸದ ಪ್ರಯುಕ್ತ ವಿಶೇಷ ಪೂಜೆಗಳು

1 min read

ಕಾರ್ತಿಕ ಮಾಸದ ಪ್ರಯುಕ್ತ ವಿಶೇಷ ಪೂಜೆಗಳು
ವಿನಾಯಕ, ಆಂಜನೇಯ, ಶನೈಶ್ಚರ ದೇವಾಲಯದಲ್ಲಿ ಲಕ್ಷ ದೀಪೋತ್ಸವ
ಚಿಕ್ಕಬಳ್ಳಾಪುರದ 2ನೇ ವಾರ್ಡಿನಲ್ಲಿರುವ ದೇವಾಲಯಗಳು

ಕಾರ್ತಿಕ ಮಾಸ ಎಂದರೆ ಶಿವನಿಗೆ ಪ್ರಿಯವಾದ ಮಾಸ. ಈ ಮಾಸದಲ್ಲಿ ಶಿವ ದೇವಾಲಯಗಳಲ್ಲಿ ಮಾತ್ರವಲ್ಲದೆ ಇತರೆ ದೇವಾಲಯಗಳಲ್ಲಿಯೂ ವಿಶೇಷ ಪೂಜೆಗಳು ಅಲಂಕರಾಗಳು ನಡೆಯುವುದು ಸಹಜ. ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರದ 2ನೇ ವಾರ್ಡಿನ, ಗ್ಯಾರೇಜ್ ಮುಂಭಾಗದಲ್ಲಿರುವ ವಿನಾಯಕ ದೇವಾಲಯದಲ್ಲಿಯೂ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ತಿಕ ಮಾಸದ ಪ್ರಯುಕ್ತ ಬಹುತೇಕ ಎಲ್ಲ ದೇಗುಲಗಳಲ್ಲಿಯೂ ವಿಶೇಷ ಅಲಂಕಾರ ಮತ್ತು ಪೂಜೆಗಳು ನಡೆಯುವುದು ಸಹಜ. ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ನಗರದ 2ನೇ ವಾರ್ಡಿನ ಕೆಎಸ್‌ಆರ್‌ಟಿಸಿ ಗ್ಯಾರೇಜ್ ಮುಂಭಾಗದಲ್ಲಿರುವ ವಿನಾಯಕ ದೇವಾಲಯದಲ್ಲಿಯೂ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿನಾಯಕ ದೇವಾಲಯದೊಂದಿಗೆ ಇಲ್ಲಿಯೇ ಪ್ರತಿಷ್ಠಾಪಿಸಿರುವ ಆಂಜನೇಯ, ಶನೈಶ್ಚರ ದೇವಾಲಯಗಳಲ್ಲಿಯೂ ವಿಶೇಷ ಅಲಂತಕಾರ, ಹೋಮ, ಪೂಜೆಗಳು ನೆರವೇರಿದವು.

ಗ್ಯಾರೇಜ್ ಗಣಪತಿ ಎಂದೇ ಖ್ಯಾತಿಯಾಗಿರುವ ಈ ಮಹಾಗಣಪತಿ ದೇವಾಲಯದಲ್ಲಿ ವಿನಾಯಕನಿಗೆ ವಿಶೇಷ ಅಲಂಕಾರ ಹಮ್ಮಿಕೊಳ್ಳಳಾಗಿತ್ತು. ಅಳ್ಲದೆ ಆಂಜನೇಯ, ಶನೈಶ್ಚರನಿಗೂ ವಿಶೇಷ ಅಲಂಕರಾ ಮತ್ತು ಪೂಜೆಗಳನ್ನು ನೆರವೇರಿಸಲಾಯಿತು. ಭಕ್ತರು ಇಡೀ ದಿನ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಕಾರಣ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಇನ್ನು ಬಂದ ಭಕ್ತರೆಲ್ಲರೂ ಹಣತೆ ಹಚ್ಚುವ ಮೂಲಕ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ರಂಗೋಲಿ, ಕಾಂಪೌ0ಡ್ ಸೇರಿದಂತೆ ದೇವಾಲಯದ ಮೂಲೆ ಮೂಲೆಯಲ್ಲಿಯೂ ಹಣತೆಗಳು ಜ್ವಾಜಿಲ್ಯಮಾನವಾಗಿ ಪ್ರಜ್ವಲಿಸುತ್ತಿದ್ದ ದೃಶ್ಯ ನಯನ ಮನೋಹರವಾಗಿತ್ತು. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ಹಣತೆ ಹಚ್ಚುವ ಜೊತೆಗೆ ದೇವರ ದರ್ಶನ ಪಡೆದರು.

ಇನ್ನು 2ನೇ ವಾರ್ಡಿನ ನಗರಸಭಾ ಸದಸ್ಯರ ಪುತ್ರ ಅರುಣ್ ನೇತೃತ್ವದಲ್ಲಿ ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದ್ದು, ದೇವಾಲಯ ಆಡಳಿತ ಮಂಡಳಿ ಸದಸ್ಯರು, ವಾರ್ಡಿನ ನಾಗರಿಕರ ಸಹಕಾರದಿಂದ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸುತ್ತಿರುವುದಾಗಿ ಅರುಣ್ ತಿಳಿಸಿದ್ದಾರೆ. ಅಲ್ಲದೆ, ಉತ್ತಮ ಮಳೆಯಾಗಿ ರೈತರು ಸಮೃದ್ಧಿಯಾಗಿರಲಿ, ಯಾವುದೇ ಸಾಂಕ್ರಾಮಿಕ ರೋಗಗಳು ವಕ್ಕರಿಸದೆ ಜನರೆಲ್ಲರೂ ಆರೋಗ್ಯವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಅವರು ತಿಳಿಸಿದ್ದಾರೆ. ಇನ್ನು ದೇವಾಲಯಕ್ಕೆ ಆಗಮಿಸಿದ್ದ ಎಲ್ಲ ಭಕ್ತರಿಗೂ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇನ್ನು ದೇವಾಲಯದಲ್ಲಿ ಪ್ರತಿ ವರ್ಷ ಈ ಕಾರ್ಯಕ್ರಮಗಳನ್ನು ನಡೆಸಲಾಗುತತಿದ್ದು, ಪ್ರಸ್ತುತ 7ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಇದಾಗಿದೆ. ಎಲ್ಲ ದೇವಾಲಯಗಳಲ್ಲಿಯೂ ಕಾರ್ತಿಕ ಮಾಸದ ಸೋಮವಾರ ಲಕ್ಷ ದೀಪೋತ್ಸವ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರೆ, ಇಲ್ಲಿ ಕಾರ್ತಿಕ ಮಾಸದ ಮಂಗಳವಾರ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದು ವಿಶೇಷವಾಗಿದೆ. ಇನ್ನು ಸತತ ಒಂದು ವಾರಕ್ಕೂ ಹೆಚ್ಚು ಕಾಲದಿಂದ ದೇವಾಲಯದಲ್ಲಿ ನಡೆಸುವ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಶ್ರಮಿಸಿ ದೇವಾಲಯ ಆಡಳಿತ ಮಂಡಳಿ ಸದಸ್ಯರು ಮತ್ತು ಇತರೆ ಭಕ್ತರ ಕಾರ್ಯಕ್ಕೆ ಅರುಣ್ ಅಭಿನಂದನೆ ಸಲ್ಲಿಸಿದ್ದಾರೆ.

About The Author

Leave a Reply

Your email address will not be published. Required fields are marked *