ಕಾಳಿಕಾಂಬ, ಚೌಡೇಶ್ವರಿ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ
1 min readಕಣಜೇನಹಳ್ಳಿಯಲ್ಲಿ ನವರಾತ್ರಿ ಉತ್ಸವಗಳು ಅದ್ಧೂರಿ
ಕಾಳಿಕಾಂಬ, ಚೌಡೇಶ್ವರಿ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ
ಶ್ರೀ ಕ್ಷೇತ್ರ ಕಾಳಿಕಾಂಬ ದೇವಿ, ಚೌಡೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವದ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದು, ಶುಕ್ರವಾರ ನವಮಿ ಸಿದ್ದಿದಾತ್ರಿ ಅರಾದನೆ ಮತ್ತು ವಿಶೇಷ ಹೋಮ ನಡೆಯಲಿದೆ. ಈ ಪೂಜಾ ಕಾರ್ಯದಲ್ಲಿ ಭಕ್ತರು ಭಗವಹಿಸಿ ಯಶಸ್ವಿಗೊಳಿಸುವಂತೆ ದೇವಾಲಯದ `ಧರ್ಮದರ್ಶಿ ಶಿಲ್ಪಿ ಸುಬ್ರಮಣ್ಯ ಸ್ವಾಮಿ ಕೋರಿದರು.
ಚಿಕ್ಕಬಳ್ಳಾಪುರ ತಾಲೂಕಿನ ಕಣಜೇನಹಳ್ಳಿಯಲ್ಲಿ ನೆಲೆಸಿರುವ ಶ್ರೀ ಕ್ಷೇತ್ರ ಕಾಳಿಕಾಂಬ ದೇವಿ, ಚೌಡೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವದ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರತಿನಿತ್ಯ ವಿಶೇಷ ಪೂಜೆ, ಶ್ರೀ ಚಕ್ರ ಆರಾಧನೆ, ಚಂಡಿಕಾಪಾರಾಯಣ, ತ್ರಿಕಾಲ ಪೂಜೆ ಮತ್ತು ಶ್ರೀ ಕಾಳಿಕಾಂಬಾ ದೇವಿ, ಶ್ರೀ ಚೌಡೇಶ್ವರಿ ದೇವಿಯರಿಗೆ ಅಭಿಷೇಕ, ಪೂಜೆ ಮತ್ತು ಹೋಮ ಹವನಗಳು ನಡೆಯುತ್ತಿವೆ. ಈಗಾಗಲೇ ಪಾಂಡ್ಯ ಶೈಲಾ ಪುತ್ರಿ ಆರಾಧನೆ, ಬಿದಿಗೆ ಬ್ರಹ್ಮಚಾರಿ ಆರಾಧನೆ, ತದಿಗೆ ಚಂದ್ರಗಟ ಆರಾಧನೆ, ಚೌತಿ ಕುಷ್ಮಾಂಡಿನಿ ಆರಾಧನೆ, ಪಂಚಮಿ ಸ್ಕಂದ ಮಾತ ಲಲಿತಾ ಆರಾಧನೆ, ಷಷ್ಠಿ ಕಾತ್ಯಾಯಿನಿ ಆರಾಧನೆ, ಸಪ್ತಮಿ ಕಾಲರಾತ್ರಿ ಸರಸ್ವತಿ ಆರಾಧನೆ, ಅಷ್ಟಮಿ ಮಹಾ ಗೌರಿ ದುರ್ಗಾ ಆರಾಧನೆ ನಡೆದಿವೆ.
ಶುಕ್ರವಾರ ನವಮಿ ಸಿದ್ಧಿಧಾತ್ರಿ ಆರಾಧನೆ ಮತ್ತು ವಿಶೇಷ ಹೋಮ ನಡೆಯುತ್ತಿದೆ. ಇದಕ್ಕೆ ಸುಮಂಗಳಿಗಳು, ದಂಪತಿಗಳು, ಕನ್ಯೆಯರು ಕುಳಿತು ಕೈಕಂರ್ಯಗಳಲ್ಲಿ ಭಾಗಿಯಾಗಲಿದ್ದಾರೆ. ಚಿತ್ರ ಕೆಲವು ನಟರು, ಗಣ್ಯರು ಭಾಗಿಯಾಗಲಿದ್ದು, ಸಾವಿರಾರು ಭಕ್ತಾಧಿಗಳು ಭಗವಹಿಸಲಿದ್ದಾರೆ. ಸಾರ್ವಜನಿಕರು ವಿಶೇಷ ಪೂಜೆಯಲ್ಲಿ ಭಗಿಯಾಗಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಾಲಯದ ಧರ್ಮದರ್ಶಿ ಶಿಲ್ಪಿ ಸುಬ್ರಮಣ್ಯ ಸ್ವಾಮಿ ಆಹ್ವಾನಿಸಿದ್ದಾರೆ.
ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪೂರ್ಣಾವತಿ, ಹೋಮ ಹವನ, ಅಭಿಷೇಕ ಅಲಂಕಾರ ಪೂಜೆ, ಹೋಮ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ಸಕಾಲಕ್ಕೆ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಿ ಎಂದಿದ್ದಾರೆ.. ಸುದ್ದಿಗೋಷ್ಠಿಯಲ್ಲಿ ದೇವಾಲಯದ ಆರ್ಚಕ ಶಿಲ್ಪಿ ಮಂಜುನಾಥ ಚಾರಿ, ಶಿಲ್ಪಿ ಕಾಳಿಂಗ ಸ್ವಾಮಿಗಳು ಇದ್ದರು.