ಮಾರಕ ಕುಲಾಂತರಿ ತಳಿಯ ಬಿತ್ತನೆ ಬೀಜ ಒದ್ದೋಡಿಸಿ
1 min readಮಾರಕ ಕುಲಾಂತರಿ ತಳಿಯ ಬಿತ್ತನೆ ಬೀಜ ಒದ್ದೋಡಿಸಿ
ದೇಶೀ ಸಾವಯವ ತಳಿಗಳ ಅಭಿವೃದ್ದಿ ಪಡಿಸಲು ಪ್ರತಿಭಟನೆ
ಸುರಕ್ಷಿತ, ಸುಸ್ಥಿರ ಮತ್ತು ಆರೋಗ್ಯಕರ ಭಾರತಕ್ಕಾಗಿ ಮಾರಕ ಕುಲಾಂತರಿ ತಳಿಯ ಬಿತ್ತನೆ ಬೀಜದ ವಿಷ ವರ್ತುಲಕ್ಕೆ ಅವಕಾಶ ನೀಡದಿರುವುದು ಸೇರಿದಂತೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸೆ.26 ರಂದು ಬೃಹತ್ ಪ್ರತಿಭಟನೆಯನ್ನು ರೈತ ಸಂಘ ಚುಕ್ಕಿ ನಂಜು0ಡಸ್ವಾಮಿ ಬಣ ಕೈಗೊಂಡಿದೆ ಎಂದು ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಪತ್ರರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ರೈತಸಂಘ ಚುಕ್ಕಿ ನಂಜುಡಸ್ವಾಮಿ ಬಣದ ಜಿಲ್ಲಾಧ್ಯಕ್ಷ ಎಂ ಆರ್ ಲಕ್ಷ್ಮಿನಾರಾಯಣ, ವಿದೇಶಿ ಖಾಸಗಿ ಕಂಪನಿಗಳು ಲಾಭದ ಲೆಕ್ಕಾಚಾರದಲ್ಲಿ ಹೊಸ ತಳಿಗಳನ್ನು ಸೃಷ್ಟಿಸಿ, ದೇಶಕ್ಕೆ ಪೂರೈಸಿ, ದೇಶದಲ್ಲಿರುವ ದೇಶೀ ತಳಿಗಳ ಮೇಲೆ ಪರಿಣಾಮ ಬೀರುತ್ತಿದೆ. ರೈತರ ಸಮಸ್ಯೆಗಳ ಬಗ್ಗೆ ಆಡಳಿತ ಯಂತ್ರಾಗದ ಗಮನ ಸೆಳೆಯಲು 26 ರಂದು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಹಿಂದಿನ ಸಾವಯವ ಪದ್ದತಿಯಲ್ಲಿ ಉತ್ಪಾದಿಸುತ್ತಿದ್ದ ಬಿತ್ತನೆ ಬೀಜ ಸತ್ವಧಾರಿತ, ಗುಣಮಟ್ಟದಿಂದ ಕೂಡಿರುತ್ತಿತ್ತು. ಅದೇ ಪದ್ದತಿಯನ್ನ ಈಗಲೂ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ಸ್ಥಳೀಯವಾಗಿ ರೈತರಿಗೆ ಸೌಕರ್ಯ ಕಡಿತಗೊಳಿಸುವ ಉದ್ದೇಶದಿಂದ ಹೊಸ ಮಾರಕ ನೀತಿಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ಖಾಸಗೀಕರಣದ ಉದ್ದೇಶದಲ್ಲಿ ಬೆಸ್ಕಾಂ ರೈತರ ಕೃಷಿ ಕೊಳವೆಬಾವಿಗಳಿಗೆ ಆಧಾರ್ ಸಂಖ್ಯೆ ಜೋಡಿಸಲಾಗುತ್ತಿದೆ. ಗೌರಿಬಿದನೂರು ಭಾಗದಲ್ಲಿ ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಬರದಿಂದ ನಷ್ಟ ಅನುಭವಿಸಿದ್ದು ಸಮರ್ಪಕ ಬೆಳೆ ವಿಮೆ ಸಿಕ್ಕಿಲ್ಲ. ಇದಕ್ಕೆ ಸಂಬಧಿಸಿ ದೂರು ಸಲ್ಲಿಸಿದಾಗ ಇಲಾಖೆ ತನಿಖೆ ನಡೆಸಿದೆ. ಆದರೆ, ವರದಿ ಬಂದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಪದಾಧಿಕಾರಿಗಳಾದ ಮುನೇಗೌಡ, ಬೈರೇಗೌಡ, ನವೀನ್ ಚಾರಿ, ರಾಮಚಂದ್ರ ರೆಡ್ಡಿ, ಹುಸೇನ್ ಸಾಬ್ ಮತ್ತಿತರರು ಇದ್ದರು.