ಶೀಘ್ರದಲ್ಲಿಯೇ ಬಾಗೇಪಲ್ಲಿ ಭಾಗ್ಯನಗರವಾಗಿ ಮರು ನಾಮಕರಣ
1 min readಶೀಘ್ರದಲ್ಲಿಯೇ ಬಾಗೇಪಲ್ಲಿ ಭಾಗ್ಯನಗರವಾಗಿ ಮರು ನಾಮಕರಣ
ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ಸುಬ್ಬಾರೆಡ್ಡಿ ಭರವಸೆ
ಕನ್ನಡ ಭವನ ನಿರ್ಮಾಣಕ್ಕೆ 10 ಗುಂಟೆ ಜಾಗ ಮಂಜೂರು
ಶೀಘ್ರದಲ್ಲಿಯೇ ಬಾಗೇಪಲ್ಲಿ ಭಾಗ್ಯನಗರವಾಗಿ ಬದಲಾವಣೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸಾಧ್ಯವಾದರೆ ಮುಂದಿನ ಸಂಪುಟ ಸ`ೆಯಲ್ಲಿ ಚರ್ಚೆ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಶ್ರಮಿಸುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದರು.
ಬಾಗೇಪಲ್ಲಿ ಪಟ್ಟಣದ ಬಾಲಕಿಯರ ಶಾಲಾ ಆವರಣದಲ್ಲಿ ಇಂದು ನಡೆದ 69ನೇ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಸಾಕ ಸುಬ್ಬಾರೆಡ್ಡಿ, ಆಂಧ್ರ ಪ್ರದೇಶದ ಗಡಿಯಲ್ಲಿರುವ ಬಾಗೇಪಲ್ಲಿ ತಾಲ್ಲೂಕಿನ ಹೆಸರಿನಲ್ಲಿ ತೆಲುಗಿನ ಅರ್ಥ ಬರುತ್ತದೆ. ಅದನ್ನು ಬದಲಿಸಿ ಭಾಗ್ಯನಗರ ಎಂದು ಮರುನಾಮಕರಣ ಮಾಡಿ ಎಂಬ ಕನ್ನಡಪರ ಸಂಘಟನೆಗಳ ಬಹುವರ್ಷಗಳ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ಆರಂಭಿಸಲಾಗಿದೆ. ಹೆಸರು ಬದಲಾಯಿಸುವುದು ಕೇಂದ್ರ ಸರ್ಕಾರದ ವ್ಯಾಪ್ತಿಯಾದ ಕಾರಣ ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಬಾಗೇಪಲ್ಲಿ ಗಡಿಭಾಗದಲ್ಲಿದ್ದರೂ ಭಾಷಾ ಸಂಘರ್ಷಕ್ಕೆ ಇಲ್ಲಿ ಅವಕಾಶ ದೊರೆತಿಲ್ಲ. ಭಾಷಾ ಸಾವರಸ್ಯ ಕಾಪಾಡಿಕೊಂಡು ಬರಲಾಗಿದೆ. ಕನ್ನಡ ಭಾಷೆ,ಪ್ರೀತಿ ಕಡಿಮೆಯಾಗಿಲ್ಲ. ಅದಕ್ಕೆ ಇಲ್ಲಿನ ಕನ್ನಡಪರ ಹೋರಾಟಗಾರರ ಶ್ರಮವೂ ಮುಖ್ಯವಾಗಿದೆ. ಶಾಲಾ-ಕಾಲೇಜು ಹಾಗು ಸರ್ಕಾರಿ ಕಚೇರಿಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಆಡಳಿತಾತ್ಮಕ ಭಾಷೆಯನ್ನಾಗಿ ಬಳಸಬೇಕಾಗಿದೆ. ಹೆದ್ದಾರಿ 44 ರ ಚಿತ್ರಾವತಿ ಜಲಾಶಯದ ಬಳಿ ಅಕ್ರಮವಾಗಿ ದಾಖ ಸೃಷ್ಟಿಸಿಕೊಂಡಿದ್ದ 6 ಎಕರೆ ಜಮೀನು ವಾಪಸ್ಸು ಪಡೆದು 32 ಕೋಟಿ ವೆಚ್ಚದ ಅಲ್ಪಸಂಖ್ಯಾತರ ವಸತಿ ಶಾಲೆ ಪ್ರಾರಂಭಕ್ಕೆ ನೀಡಲಾಗಿದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಮಾತನಾಡಿ, ಶ್ರೀಗಂಧದ ಬೀಡು, ಶಿಲ್ಪಕಲೆಗಳ ತವರೂರು, ಸಂಸ್ಕೃತಿಯ ನೆಲೆವೀಡಾಗಿರುವ ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದಿ0ದ ಆಚರಿಸುತ್ತಿದ್ದೇವೆ. ಅನೇಕ ಮಹಾನ್ ವಿಧ್ವ0ಸರು, ಕವಿಗಳು, ಸಾಹಿತಿಗಳಿಂದ ಕನ್ನಡ ನುಡಿ ಪ್ರಜ್ವಲಿಸುತ್ತಿದೆ. ಅನೇಕ ರಾಜಮನೆತನಗಳು ಕನ್ನಡದ ವೈವೋಪೇತ ಇತಿಹಾಸಕ್ಕೆ ಮತ್ತು ಶ್ರೀಮಂತ ಶಿಲ್ಪಕಲೆ, ಸಾಹಿತ್ಯ,ಸಂಸ್ಕೃತಿಯ ಬೆಳವಣಿಗೆಗಳಿಗೆ ವಿಶಿಷ್ಠ ಕೊಡುಗೆ ನೀಡಿದ್ದಾರೆ. ಏಕೀಕರಣ ಚಳುವಳಿಯ ಹೋರಾಟಗಾರರು, ಕನ್ನಡ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಆಶಯದಂತೆ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಗಿ ರೂಪಗೊಂಡಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಹಾಗು ಇತರೆ ಕನ್ನಡಪರ ಸಂಘಟನೆಗಳ ಮನವಿಯಂತೆ ಕಳೆದ ಕನ್ನಡ ರಾಜ್ಯೋತ್ವವದಲ್ಲಿ ನೀಡಿದ್ದ ಭರವಸೆಯಂತೆ ಕನ್ನಡ ಭವನ ನಿರ್ಮಾಣ ಮಾಡಲು ೧೦ ಗುಂಟೆ ಜಾಗವನ್ನು ಮಂಜೂರು ಮಾಡಿ ಇಂದೇ ಆದೇಶದ ಮಂಜೂರಾತಿ ಪತ್ರವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಹಸ್ತಾಂತರಿಸಿದರಲ್ಲದೆ ಮುಂದಿನ ಕನ್ನಡ ರಾಜ್ಯೊತ್ಸವ ಕನ್ನಡ ಭವನದಲ್ಲಿಯೇ ಆಚರಿಸಲು ಭವನ ನಿರ್ಮಾಣಕ್ಕೆ ಕೊಡುಗೆ ನೀಡುವುದಾಗಿ ಹೇಳಿದರು.
ತಹಶೀರ್ಲ್ದಾ ಮನೀಷ್ ಎನ್.ಪತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ಎಸ್.ಎಸ್.ಎಲ್.ಸಿ ಕನ್ನಡ ಪರೀಕ್ಷೆಯಲ್ಲಿ ೧೨೫ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು `ಧ್ವಜಾರೋಹಣವನ್ನು ತಹಶೀಲ್ದಾರ್ ಮನೀಷ್ ಎನ್.ಪತ್ರಿ ಮತ್ತು ನಾಡ`ಧ್ವಜಾರೋಹಣವನ್ನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ನೆರವೇರಿಸಿದರು. ಪಟ್ಟಣದ ನ್ಯಾಯಾಲಯ ಮುಂಭಾಗದಿ0ದ ಮುಖ್ಯ ರಸ್ತೆಯಲ್ಲಿ ಭವ್ಯವಾದ ರಾಜ್ಯೋತ್ಸವ ಮೆರವಣಿಗೆಯನ್ನು ನಡೆಸಲಾಯಿತು.