ಮಗ-ಸೊಸೆಯ ಜಗಳದಲ್ಲಿ ಅತ್ತೆಗೆ ಗೂಸ!
1 min readಮಗ-ಸೊಸೆಯ ಜಗಳದಲ್ಲಿ ಅತ್ತೆಗೆ ಗೂಸ!
ಸಂಧಾನಕ್ಕೆ ಬಂದ ಅತ್ತೆ ಮೇಲೆ ಪ್ರತಾಪ ತೋರಿದ ಅಳಿಯ
ಗಾಯಗೊಂಡ ಅತ್ತೆ ಆಸ್ಪತ್ರೆೆಗೆ ದಾಖಲು
ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದರೆ ಅದೇ ಜಗಳದಲ್ಲಿ ಮತ್ತೊಬ್ಬರು ಮಧ್ಯಪ್ರವೇಶ ಮಡಿದರೆ ಮಾತ್ರ ಅಪಾಯ ತಪ್ಪಿದ್ದಲ್ಲ ಎಂಬುದಕ್ಕೆ ಈ ಸ್ಟೋರಿ ಉತ್ತಮ ಉದಾಹರಣೆ. ಗಂಡ ಹೆಂಡತಿ ಜಗಳದಲ್ಲಿ ಸಂಧಾನ ಮಾಡಲು ಬಂದ ಅತ್ತೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಪಾವಗಡದಲ್ಲಿ ನಡೆದಿದ್ದು, ಹಲ್ಲೆಯಿಂದ ಅಸ್ವಸ್ಥಗೊಂಡಿರುವ ಅತ್ತೆ ಆಸ್ಪತ್ರೆ ಪಾಲಾಗಿದ್ದಾರೆ.
ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದರೆ ಅದೇ ಜಗಳದಲ್ಲಿ ಮತ್ತೊಬ್ಬರು ಮಧ್ಯಪ್ರವೇಶ ಮಡಿದರೆ ಮಾತ್ರ ಅಪಾಯ ತಪ್ಪಿದ್ದಲ್ಲ ಎಂಬುದಕ್ಕೆ ಈ ಸ್ಟೋರಿ ಉತ್ತಮ ಉದಾಹರಣೆ. ಗಂಡ ಹೆಂಡತಿ ಜಗಳದಲ್ಲಿ ಸಂಧಾನ ಮಾಡಲು ಬಂದ ಅತ್ತೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಪಾವಗಡದಲ್ಲಿ ನಡೆದಿದ್ದು, ಹಲ್ಲೆಯಿಂದ ಅಸ್ವಸ್ಥಗೊಂಡಿರುವ ಅತ್ತೆ ಆಸ್ಪತ್ರೆ ಪಾಲಾಗಿದ್ದಾರೆ. ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ಚಿಕ್ಕಜಾಲೋಡು ಗ್ರಾಮದ ಮಹಿಳೆ ಲಕ್ಷ್ಮೀದೇವಿ, ಸೊಸೆ ನೇತ್ರಾಳ ಅಣ್ಣ ಸತೀಸ್ ಮತ್ತು ತಾಯಿ ಯಲಕ್ಕ ಈ ಮೂವರೂ ಸೇರಿ ಮನೆಯ ಮುಂದೆಯೇ ನೆಲಕ್ಕೆ ಹಾಕಿ ಕಬ್ಬಿಣದ ರಾಡ್ ನಿಂದ ಹೊಡಿದಿರುವ ಘಟನೆ ನಡೆದಿದೆ.
ಚಿಕ್ಕಜಾಲೋಡು ಗ್ರಾಮದ ಒಂಕೇಶ್ 13 ವರ್ಷದ ಹಿಂದೆ ಜೋಡಿ ಅಚ್ಚಮ್ಮನಹಳ್ಳಿಯಿಂದ ನೇತ್ರಾಳನ್ನು ಮದುವೆಯಾಗಿದ್ದಾನೆ. ನೇತ್ರಾಳ ತಂದೆ ಕೋಳಿ ಫಾರ್ಮ್ ಮಾಡುವಂತೆ ಹೇಳಿ 30 ಲಕ್ಷ ಬಂಡವಾಳ ಹಾಕಿಸಲಾಗಿತ್ತು, 30 ಲಕ್ಷ ವಾಪಸ್ ಕೇಳಿದ ಕಾರಣಕ್ಕೆ ಗಲಾಟೆ ಮಾಡಿಕೊಂಡು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ತವರು ಮನೆಗೆ ಕಳುಹಿಸಿದ್ದಾರೆ ಎಂಬುದು ಸೊಸೆಯ ಆರೋಪವಾಗಿದೆ.
13 ವರ್ಷಗಳ ಹಿಂದೆ ಮದುವೆಯಾಗಿರುವ ಒಂಕೇಶ್ ದಂಪತಿಗಳಿಗೆ 11 ವರ್ಷದ ದೈವಿಕ ಮತ್ತು 9 ವರ್ಷದ ಸಾತ್ವಿಕ್ ಎಂಬ ಇಬ್ಬರು ಮಕ್ಕಳಿದ್ದು, ಈ ಸಂಬoಧ ಈ ಹಿಂದೆ ವೈ.ಎನ್ ಹೊಸಕೊಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ ದೂರು ನೀಡಿದ ವೇಳೆ ದಂಪತಿಗಳನ್ನು ಕರೆಯಿಸಿ ರಾಜಿ ಸಂಧಾನ ಮಾಡಿ ತವರು ಮನೆಯವರೇ ಗಂಡನ ಮನೆಗೆ ಬಿಟ್ಟುಬರುವಂತೆ ಹೇಳಲಾಗಿತ್ತು ಎನ್ನಲಾಗಿದೆ,
ಪೊಲೀಸ್ ಸಂಧಾನದಲ್ಲಿ ಗಂಡನ ಮನೆಗೆ ಬಿಡುವಂತೆ ಹೇಳಿದ್ದರೂ ಬಾರದೆ, ತಾಯಿಗೆ ವಯಸ್ಸಾದ ಕಾರಣದಿಂದ ಸಣ್ಣ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲವೆಂದು ಬುದ್ದಿ ಹೇಳಿ ಸೊಸೆಯನ್ನು ಕರೆತರಲು ಹೋದರೆ ಮನೆಯಿಂದ ಆಚೆ ತಬ್ಬಿ ನೆಲಕ್ಕೆ ಬೀಳಿಸಿ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು, ಸೊಸೆ ನೇತ್ರಾ, ಅವರ ಅಣ್ಣ ಸತೀಶ ಮತ್ತು ತಾಯಿ ಯಲಕ್ಕ ಮೂವರು ಸೇರಿ ಎದೆ ಭಾಗಕ್ಕೆ ಮತ್ತು ಬೆನ್ನು ಭಾಗಕ್ಕೆ ಕಬ್ಬಿಣದ ರಾಡ್ ನಿಂದ ಹೊಡೆದಿದ್ದಾರೆಂದು ಸಂಬoಧಿಕರು ನೋವು ತೊಡಿಕೊಂಡಿದ್ದಾರೆ.