ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಚಿಕ್ಕಬಳ್ಳಾಪುರದಲ್ಲಿ ಘನತ್ಯಾಜ್ಯ ನಿರ್ವಹಣೆ ಯೋಜನೆ ಆರಂಭ

1 min read

ಚಿಕ್ಕಬಳ್ಳಾಪುರದಲ್ಲಿ ಘನತ್ಯಾಜ್ಯ ನಿರ್ವಹಣೆ ಯೋಜನೆ ಆರಂಭ

ಕ್ಲೀನ್ ಕ್ಲೀನ್ ಚಿಕ್ಕಬಳ್ಳಾಪುರ ಎಂಬ ಘೋಷಣೆಯೊಂದಿಗೆ ಯೋಜನೆ

ಹಸಿ ಕಸ, ಒಣ ಕಸ ವಿಂಗಡಿಸಲು ನಗರಸಭೆ ಅಧ್ಯಕ್ಷ ಮನವಿ

ಚಿಕ್ಕಬಳ್ಳಾಪುರ ನಗರಸಭೆ ಭಾರತೀಯ ಮಾನವ ವಸಾಹತುಗಳ ಸಂಸ್ಥೆ ಮತ್ತು ಗೋದ್ರೇಜ್ ಪ್ರಾಪರ್ಟಿಸ್ ಲಿಮಿಟೆಡ್ ಸಹಯೋಗದಲ್ಲಿ
ಘನತ್ಯಾಜ್ಯ ನಿರ್ವಹಣೆ ಯೋಜನೆ ಆರಂಭಿಸಲಾಗಿದೆ. ಕ್ಲೀನ್ ಕ್ಲೀನ್ ಚಿಕ್ಕಬಳ್ಳಾಪುರ ಎಂಬ ಘೋಷಣೆಯೊಂದಿಗೆ ನೂತನ ಯೋಜನೆ ಆರಂಭಿಸಲಾಗಿದೆ.

ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿ ಯಲ್ಲಿ ಉತ್ಪತ್ತಿ ಯಾಗುವ ಹಸಿ ಕಸ ರೈತರ ಜಾಗದಲ್ಲಿಯೇ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಕ್ರಮಗಳನ್ನು ಈ ಯೋಜನೆ ಮೂಲಕ ಕೈಗೊಂಡಿದೆ. ಈ ಯೋಜನೆ ಯಶಸ್ಸಿಗಾಗಿ, ಮೂಲದಲ್ಲಿಯೇ ಕಸ ವಿಂಗಡಣೆ ಮತ್ತು ತ್ಯಾಜ್ಯ ನಿರ್ವಹಣೆ ಪ್ರಗತಿಗಾಗಿ ನಗರದ ಪ್ರತಿ ವಾರ್ಡ್ ನಲ್ಲಿ ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಇದರ ಭಾಗವಾಗಿ ಇಂದು ಚಿಕ್ಕಬಳ್ಳಾಪುರ ನಗರದ ೭ನೇ ವಾರ್ಡ್ನಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ನಗರ ¸ ಅಧ್ಯಕ್ಷ ಎ.ಗಜೇಂದ್ರ, ಆರೋಗ್ಯ ಅಧಿಕಾರಿ ಮುರಳೀಧರ್ ಮತ್ತು ಐಐಎಚ್‌ಎಸ್ ಸಂಸ್ಥೆಯ ಕಿರಣ್, ಅಂಬರೀಷ್, ಹೇಮಂತ್ ಹಾಗೂ ನಗರ ಸಭೆಯ ಅಧಿಕಾರಿಗಳು ಭಾಗವಹಿಸಿದ್ದರು. ಚಿಕ್ಕಬಳ್ಳಾಪುರ ನಗರದ ಜನತೆ ಕಸ ವಿಂಗಡಣೆ ವಿಚಾರದಲ್ಲಿ ಹೆಚ್ಚು ಸಹಕರಿಸಿ ಮೂಲದಲ್ಲಿಯೇ ಕಸ ವಿಂಗಡಿಸಿದರೆ, ನಗರ ಸ್ವಚ್ಚವಾಗುವ ಜೊತೆಗೆ ನಗರವಾಸಿಗಳು ಬಳಸುವ ಆಹಾರ ಪದಾರ್ಥಗಳನ್ನು ರಾಸಾಯನಿಕ ಮುಕ್ತ ಮಾಡಬಹುದಾಗಿದೆ ಎಂದು ನಗರಸಭೆ ಅಧ್ಯಕ್ಷ ಗಜೇಂದ್ರ ಹೇಳಿದರು.

ಬೆಳೆಯುತ್ತಿರುವ ನಗರಗಳಿಗೆ ಕಸ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿದಲ್ಲಿ ಅದು ರೈತರಿಗೆ ಅನುಕೂಲವಾಗುವ ಜೊತೆಗೆ ಕಸದ ಸಮಸ್ಯೆಯೂ ಪರಿಹಾರವಾಗಲಿದೆ. ಹಾಗಾಗಿ ಮನೆಗಳಲ್ಲಿಯೇ ಹಸಿ ಕಸ ಮತ್ತು ಒಣ ಕಸ ವಿಂಗಣಡೆ ಮಾಡಿ ಕೊಡಬೇಕಾದ ಹೊಣೆ ನಾಗರಿಕರ ಮೇಲಿದೆ. ಒಣ ಕಸ ಪ್ಲಾಸ್ಟಿಕ್, ಗಾಜು ಸೇರಿದಂತೆ ಇತರೆ ಗೊಬ್ಬರವಾಗದ ಕಸವಾಗಿದ್ದು, ಇದನ್ನು ವೈನಿಕವಾಗಿ ನಿರ್ವಹಣೆ ಮಾಡಲಾಗುತ್ತದೆ.

ಆದರೆ ಹಸಿ ಕಸ ಗೊಬ್ಬರವಾಗಿ ಪರಿವರ್ತನೆಯಾಗಬಲ್ಲ ಕಸವಾಗಿದ್ದು, ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದಲ್ಲಿ ಕಸದ ಸಮಸ್ಯೆ ಪರಿಹಾರವಾಗುವ ಜೊತೆಗೆ ರೈತರಿಗೆ ಇದು ಲಾಭಾದಾಯಕವಾಗಿ ಪರಿಣಮಿಸಲಿದೆ. ಹಾಗಾಗಿಯೇ ಈ ಹೊಸ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಮೂಲಕ ರೈತರಿಗೆ ಫಲವತ್ತಾದ ಗೊಬ್ಬರ ಸಿಗಲಿದ್ದು, ನಾಗರಿಕರಿಗೆ ಕಸದ ಸಮಸ್ಯೆಯೂ ಪರಿಹಾರವಾಗಲಿದೆ. ಹಾಗಾಗಿ ನಗರದ ಪ್ರತಿ ಮನೆಯವರೂ ಕಸ ವಿಂಗಡಣೆ ವಿಚಾರದಲ್ಲಿ ಸಹಕರಿಸಬೇಕೆಂದು ಗಜೇಂದ್ರ ಕೋರಿದರು.

About The Author

Leave a Reply

Your email address will not be published. Required fields are marked *