ಸಮಾಜ ಸೇವಕ ಸಂದೀಪ್‌ರೆಡ್ಡಿ 46ನೇ ಹುಟ್ಟುಹಬ್ಬ
1 min readಸಮಾಜ ಸೇವಕ ಸಂದೀಪ್‌ರೆಡ್ಡಿ 46ನೇ ಹುಟ್ಟುಹಬ್ಬ
ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಅನ್ನದಾನ
ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು
ಅವರು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಮೂಲಕ ಸಮಾಜದಲ್ಲಿ ಬಡವರ ಅನ್ನದಾನಿಯಾಗಿ, ವಿದ್ಯಾರ್ಥಿಗಳ ವಿದ್ಯಾದಾನಿಯಾಗಿ ಕಷ್ಟ ನಿವಾರಿಸುವ ಮಹಾ ವ್ಯಕ್ತಿಯಾಗಿ ಸಮಾಜಮುಖಿ ಕೆಲಸಗಳ ಮೂಲಕವೇ ಗುರುತಿಸಿಕೊಂಡಿರುವ ವ್ಯಕ್ತಿಯ ಹುಟ್ಟು ಹಬ್ಬಕ್ಕೆ ಸಾವಿರಾರು ಜನ ನೂರಾರು ಕಡೆ ಕೇಕ್ ಕತ್ತರಿಸಿ ಅಭಿಮಾನ ಮೆರೆದಿದ್ದಾರೆ. ಇಷ್ಟಕ್ಕೂ ಆ ಸಮಾಜ ಸೇವಕ ಯಾರು ಅಂತೀರಾ, ನೀವೇ ನೋಡಿ.
ಪ್ರಧನಿ ನರೇಂದ್ರ ಮೋದಿ ಅವರ ಅಪ್ಪಟಅಭಿಮಾನಿ, ಅವರ ನಡೆ ನುಡಿಗಳನ್ನು ಅನುಸರಿಸುವ ಸಮಾಜ ಸೇವಕ. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ನಾಯಕ. ಬಡತನದಲ್ಲಿ ಬೆಳೆದು ಬಡವರ ಕಷ್ಟಗಳನ್ನು ತಿಳಿದು, ತಾವು ದುಡಿದ ಹಣದಲ್ಲಿ ಅರ್ಧ ಜನಸೇವೆಗೆಂದೆ ಮೀಸಲಿಟ್ಟ ಕರುಣಾಮಯಿ ಸಂದೀಪ್ ಬಿ ರೆಡ್ಡಿ. ಚಿಕ್ಕಬಳ್ಳಾಪುರ ತಾಲ್ಲೂಕಿನ ಪೇರೆಸಂದ್ರ ಗ್ರಾಮದಲ್ಲಿ ಜನಿಸಿದ ಸಂದೀಪ್ ರೆಡ್ಡಿ ಉದ್ಯಮಿಯಾಗಿ ಬೆಳೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಾಗಿ ಅವರ ನಡೆ ನುಡಿಯನ್ನು ಅನುಸರಿಸುವ ಸಂದೀಪ್‌ರೆಡ್ಡಿ, ತಮ್ಮ ಗ್ರಾಮದಲ್ಲಿ ಚಿಕ್ಕ ವಯಸ್ಸಿನಲ್ಲಿ ಬಡತನ ಕಣ್ಣಾರೆ ಕಂಡಿದ್ದರು. ಅದನ್ನು ಅವರ ಕೈಲಾದಷ್ಟು ನಿರ್ಮೂಲನೆ ಮಾಡಬೇಕೆಂದು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಮಾಡಿ, ಹಂತ ಹಂತವಾಗಿ ಜನ ಸೇವೆ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಹೈಟೆಕ್ ಟಚ್ ಕೊಟ್ಟು ವಿಧ್ಯಭ್ಯಸ ಕಲ್ಪಿಸಿರುವುದು, ಬಡ ಕುಟುಂಬಗಳಿಗೆ ಮನೆ ಕಟ್ಟಿಕೊಟ್ಟಿರುವುದು, ವಿದ್ಯಾರ್ಥಿನಿಯರಿಗೆ ಉಚಿತ ಊಟ ವ್ಯವಸ್ಥೆ ಕಲ್ಪಿಸಿರುವುದು, ಶಾಲಾ ಕಾಲೇಜು ವಿಧ್ಯರ್ಥಿಗಳಿಗೆ ಹಣ ಸಹಾಯ ಮಾಡಿರುವುದು, ಕ್ರೀಡಾ ಯುವಕರಿಗೆ ಪ್ರೋತ್ಸಾಹ ನೀಡುವುದು ಹತ್ತು ಹಲವಾರು ಸಹಾಯದ ಮೂಲಕ ಚಿಕ್ಕಬಳ್ಳಾಪುರದಲ್ಲಿ ಮನೆ ಮಾತಾಗಿದ್ದಾರೆ.
ಅಂತಹ ಸಮಾಜ ಸೇವಕ ಸಂದೀಪ್ ಬಿ ರೆಡ್ಡಿ ಅವರ ೪೬ನೇ ಹುಟ್ಟು ಹಬ್ಬ ಇಂದು. ಅವರ ಸಾವಿರಾರು ಅಭಿಮಾನಿಗಳು, ರಾಜಕೀಯ ಮುಖಂಡರು ತಾಲೂಕುನಾದ್ಯಂತ ಬೆಳಗ್ಗೆಯಿಂದಲೆ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.
ಸಮಾಜ ಸೇವಕ ಸಂದೀಪ್ ರೆಡ್ಡಿ ಬೆಳಗ್ಗೆಯಿಂದಲೇ ಹೂವಿನ ಮಾರ್ಕೆಟ್ ನಲ್ಲಿ ಬರ್ಜರಿ ಬಿರಿಯಾನಿ ವಿತರಣೆ, ಭೋಗ ನಂದೀಶ್ವರ ಮತ್ತು ನಗರದ ಕೈವಾರ ತಾತಯ್ಯನವರ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನಾಥ ಆಶ್ರಮದಲ್ಲಿ ವೃದ್ಧರ ಜೊತೆ ಆಚರಣೆ, ಅಂಗಟ್ಟ, ಕಣಜೇನಹಳ್ಳಿ, ವಡ್ರೇಪಾಳ್ಯ, ಪೇರೆಸಂದ್ರ, ದಿಬ್ಬೂರು, ನವಿಲು ಗುರ್ಕಿ, ಕಮ್ಮಗುಟ್ಟಹಳ್ಳಿ, ಮಂಡಿಕಲ್ಲು, ಗುಂಡ್ಲಗುರ್ಕಿ ಸೇರಿದಂತೆ ವಿವಿಧ ಕಡೆ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಬೃಹತ್ ಕೇಕ್ ಕತ್ತರಿಸಿ ತಮ್ಮ ನೆಚ್ಚಿನ ನಾಯಕನಿಗೆ ತಿನ್ನಿಸುವ ಮೂಲಕ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದರು.
ಸಮಾಜ ಸೇವಕ ಸಂದೀಪ್ ರೆಡ್ಡಿ ಅವರ ಹುಟ್ಟು ಹಬ್ಬದ ಹಂಗವಾಗಿ ನೂರಾರು ಕಡೆ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ರಾಜಕೀಯ ಮುಖಂಡರು, ಅಭಿಮಾನಿಗಳು, ಯುವಕರು ಚಿಕ್ಕಬಳ್ಳಾಪುರ ಜನತೆ ತಮ್ಮ ನೆಚ್ಚಿನ ನಾಯಕನಿಗೆ ಹೂ ಮಾಲೆಗಳನ್ನು ಹಾಕಿ ಶುಭ ಕೋರಿ ಮತ್ತಷ್ಟು ಜನ ಸೇವೆ ಮಾಡಲೆಂದು ಹಾರೈಸಿದರು.