ನವೀನ್ ಕಿರಣ್ ಹುಟ್ಟು ಹಬ್ಬದ ಪ್ರಯುಕ್ತ ಸಾಮಾಜಿಕ ಸೇವಾ ಸಪ್ತಾಹ
1 min readಸೇವೆಯ ಮೂಲಕವೇ ನೆಚ್ಚಿನ ನಾಯಕನ ಹುಟ್ಟುಹಬ್ಬ ಆಚರಣೆ
ನವೀನ್ ಕಿರಣ್ ಹುಟ್ಟು ಹಬ್ಬದ ಪ್ರಯುಕ್ತ ಸಾಮಾಜಿಕ ಸೇವಾ ಸಪ್ತಾಹ
ನಾಳೆ ನಡೆಯಲಿರುವ ನವೀನ್ ಕಿರಣ್ ಹುಟ್ಟುಹಬ್ಬ
ಇಂದು ರಂಗೋಲಿ ಸ್ಪರ್ಧೆಯೊಂದಿಗೆ ಸಪ್ತಾಹಕ್ಕೆ ತೆರೆ
ಕಳೆದ ಒಂದು ವಾರದಿಂದ ಸತತವಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆವಿ ನವೀನ್ ಕಿರಣ್ ಅವರ ಹುಟ್ಟಹಬ್ಬದ ಪ್ರಯುಕ್ತ ಆರಂಭವಾಗಿದ್ದ ಸಪ್ತಾಹಕ್ಕೆ ಇಂದು ತೆರೆ ಬಿದ್ದಿದೆ. ವಿವಿಧ ಸಾಮಾಜಿಕ ಸೇವೆಗಳ ಮೂಲಕ ಆರಂಭವಾದ ಸಪ್ತಾಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮುಕ್ತಾಯವಾಗಿದೆ.
ಹೌದು, ನಾಳೆ ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆವಿ ನವೀನ್ ಕಿರಣ್ ಅವರ ಜನ್ಮದಿನ. ಅದೇ ಕಾರಣ ಅವರ ಅಭಿಮಾನಿಗಳು ಕಳೆದ ಒಂದು ವಾರದಿಂದ ಸಾಮಾಜಿಕ ಸೇವೆಗಳ ಸಪ್ತಾಹ ಹಮ್ಮಿಕೊಂಡಿದ್ದರು. ಮೊದಲ ದಿನ ಗುಡಿಬಂಡೆಯ ಗ್ರಂಥಾಲಯಕ್ಕೆ ಪುಸ್ತಕ ನೀಡುವ ಮೂಲಕ ಆರಂಭವಾದ ಸಪ್ತಾಹ 7ನೇ ದಿನವಾದ ಇಂದು ರಂಗೋಲಿ ಸ್ಪರ್ಧೆಯ ಮೂಲಕ ತೆರೆ ಬಿದ್ದಿದೆ. ಅಲ್ಲದೆ ನವೀನ್ ಕಿರಣ್ ಅವರ ಆರೋಗ್ಯ ಕೋರಿ ವಿನಾಯಕನಿಗೆ ವಿಶೇಷ ಪೂಜೆಗಳನ್ನೂ ಮಾಡಲಾಗಿದೆ. ನಾಳೆ ಚಿಕ್ಕಬಳ್ಳಾಪುರ ಹೊರವಲಯದ ಕೆವಿ ಕ್ಯಾಂಪಸ್‌ನಲ್ಲಿ ನವೀನ್ ಕಿರಣ್ ಅವರ ಹುಟ್ಟುಹಬ್ಬ ಅದ್ಧೂರಿಯಾಗಿ ನಡೆಯಲಿದೆ.
ನವೀನ್ ಕಿರಣ್ ಅವರ ೪೬ನೇ ಹುಟ್ಟುಹಬ್ಬದ ಪ್ರಯುಕ್ತ ಗುಡಿಬಂಡೆಯ ಶ್ರೀ ಪ್ರಸನ್ನ ಗಣಪತಿ ಯುವಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಪರಿಸರ ವೇದಿಕೆಯಿಂದ ಬೃಹತ್ ರಂಗೋಲಿ ಸ್ಪರ್ಧೆಯನ್ನು ಗುಡಿಬಂಡೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೆವಿ ನವೀನ್ ಕಿರಣ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಗುಂಪು ಮರದ ಆನಂದ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಮಂಜುನಾಥ್, ರಾಮಾಂಜಿನಪ್ಪ, ಪ್ರಶಾಂತ್, ಗೋವಿಂದಪ್ಪ, ಕಿರಣ್, ಮುನಿ, ಬಾಲಾಜಿ, ಮಂಜು ಸೇರಿದಂತೆ ಪ್ರಸನ್ನ ಗಣಪತಿ ಯುವಕರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಇನ್ನು ನವೀನ್ ಕಿರಣ್ ಅವರ 46ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳಿಂದ 1,500 ನೋಟ್ ಪುಸ್ತಕ, ಕಲಿಕಾ ಸಾಮಗ್ರಿಗಳು ಮತ್ತು ಪರೀಕ್ಷೆ ಬರೆಯಲು ಪ್ಯಾಡ್‌ಗಳನ್ನು ಕಳೆದ ಮೂರು ದಿನಗಳಿಂದ ವಿವಿಧ ಶಾಲೆಗಳ ಮಕ್ಕಳಿಗೆ ವಿತರಿಸಲಾಯಿತು. ಕಲಿಕಾ ಸಾಮಗ್ರಿ ವಿತರಣೆ ಶಿಕ್ಷಕ ಮಹಾಂತೇಶ್, ಚಂದ್ರಕಾ0ತ್ ನೇತೃತ್ವದಲ್ಲಿ ವಿವಿಧ ಸರಕಾರಿ ಶಾಲೆಗಳಿಗೆ ವಿತರಿಸಲಾಯಿತು.
ಸೂಲಕುಂಟೆ, ಗೊಲ್ಲಹಳ್ಳಿ, ಆನೆಮಡಗು, ಕೊತ್ತೂರು, ನಾಸ್ತಿಮನಹಳ್ಳಿ, ಗಂಗರೆಕಾಲುವೆ, ದೊಡ್ಡತಮ್ಮನ ಹಳ್ಳಿ, ಗೊಳ್ಳು ಸೇರಿದಂತೆ ಹಲವಾರು ಗ್ರಾಮೀಣ ಶಾಲೆಗಳ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಗಿದೆ. ಈ ವೇಳೆ ಬಿ. ಮಹೇಶ್, ನರಸಿಂಹಯ್ಯ, ಮಂಜುನಾಥ್, ನಾರಾಯಣಸ್ವಾಮಿ, ಪುನೀತ್ ಸೇರಿದಂತೆ ಇತರರು ಭಾಗವಹಿಸಿದ್ದರು.