ರಸ್ತೆ ಬದಿಯಲ್ಲೆ ಮಲಗಿ ಆಹೋರಾತ್ರಿ ಧರಣಿ
1 min readರಸ್ತೆ ಬದಿಯಲ್ಲೆ ಮಲಗಿ ಆಹೋರಾತ್ರಿ ಧರಣಿ
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ಆಹೋರಾತ್ರಿ ಧರಣಿ
ಹೆದ್ದಾರಿಯಲ್ಲೆ ಮಲಗಿದ ಅಂಗನವಾಡಿ ಕಾರ್ಯಕರ್ತೆಯರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಮುಂದೆ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಕೊರೆಯುವ ಚಳಿಯಲ್ಲಿಯೂ ರಸ್ತೆ ಪಕ್ಕದಲ್ಲಿಯೇ ಮಲಗಿ, ಅಹೋ ರಾತ್ರಿ ಧರಣಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಚಿಕ್ಕಬಳ್ಳಾಪುರ ದಲ್ಲಿ ಆಹೋರಾತ್ರಿ ಧರಣಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರೆ ಹೆದ್ದಾರಿಯ ಪುಟ್ ಪಾತ್ ಮೇಲೆ ಮಲಗಿ ಅಂಗನವಾಡಿ ಕಾರ್ಯಕರ್ತೆಯರು ಇಡೀ ರಾತ್ರಿ ಕಳೆದಿದ್ದಾರೆ. ಮೈ ಕೊರೆಯುವ ಚಳಿಯ ನಡುವೆ ಇಡೀ ರಾತ್ರಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳು, ಮನೆ ಮಂದಿಯನ್ನೆಲ್ಲಾ ಬಿಟ್ಟು ಬೀದಿಯಲ್ಲೇ ಮಲಗುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.