ಮುನಿರತ್ನ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆಗೆ ಚಿಂತನೆ
1 min readಮುನಿರತ್ನ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆಗೆ ಚಿಂತನೆ
ಚಿಕ್ಕಬಳ್ಳಾಪುರದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಸುಳಿವು
ನಿರ್ಮಲಾನಂದ ಶ್ರೀಗಳ ಅಧ್ಯಕ್ಷತೆಯಲ್ಲಿ ಖಂಡನಾ ಸಭೆ
ಪ್ರಕರಣ ಖಂಡಿಸದ ಆರ್.ಅಶೋಕ್ ವಿರುದ್ಧ ಸಚಿವರ ಗರಂ
ಶಾಸಕ ಮುನಿರತ್ನ ಏಡ್ಸ್ ಟ್ರಾಪ್ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಪ್ರಕರಣದ ಸಮಗ್ರ ತನಿಖೆ ನಡೆಸಲು ಎಸ್‌ಐಟಿ ರಚಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಶಾಸಕ ಮುನಿರ್ತ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಗಂಭೀರವಾಗಿ ಚರ್ಚಿಸಲಾಗಿದೆ, ಯಾರೇ ತಪ್ಪು ಮಾಡಿದರೂ ಸತ್ಯ ಹೊರಗೆ ಬರಬೇಕು. ಬಿಜೆಪಿ ಮಹಿಳೆಯ ಮೇಲೆ ಅತ್ಯಾಚಾರ ಆಗಿದ್ರೂ ಕುಮಾರಸ್ವಾಮಿ, ಅಶೋಕ್ ಸುಮ್ಮ ಅವರು ಮನುಷ್ಯರಾ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಸಮಾಧಾನ ಹೊರ ಹಾಕಿದರು.
ವಿಪಕಗ್ಷ ನಾಯಕ ಆರ್. ಅಶೋಕ್ ವಿರುದ್ಧ ಕಿಡಿಕಾರಿದ ಸಚಿವ ಕೃಷ್ಣಬೈರೇಗೌಡ, ನಾನು ಎಲ್ಲಿ ಬೇಕಾದರೂ ಓದ್ತೀನಿ ಅವರು ಡಿ ನೋಟಿಫೀಕೇಷನ್ ಮಾಡಿದ್ದಾರಾ ಇಲ್ವಾ, ಅವರು ಸ್ವಂತ ಲಾಭಕ್ಕೆ ಡಿ ನೋಟಿಪೀಕೇಷನ್ ಮಾಡಿ ಇಲ್ವಾ ಎಂಬುದನ್ನು ಸ್ಪಷ್ಟಪಡಿಸಲಿದೆ ಎಂದು ಸವಾಲು ಹಾಕಿದರು. ಕುಮಾರಸ್ವಾಮಿ, ಯಡಿಯೂರಪ್ಪ ತಪ್ಪು ಮಾಡಿದ್ದಾರಾ ಇಲ್ವಾ ಈ ಬಗ್ಗೆ ಉತ್ತರ ಕೊಡಲಿ ಎಂದು ಸಚಿವರು ಹೇಳಿದರು.
ದಾಖಲೆಗಳನ್ನು ಮಾಧ್ಯಮದ ಮುಂದೆ ಇಟ್ಟಿದ್ದೇವೆ, ಪ್ರಧಾನ ಕಾರ್ಯದರ್ಶಿಗಳು ಖಂಡಾತು0ಡವಾಗಿ ಮಾಡೋಕೆ ಬರಲ್ಲ ಅಂತ ಹೇಳಿದ್ರೂ, ಸತ್ತು ಹೋದವರ ಹೆಸರಲ್ಲಿ ಡಿ ನೋಟಿಫೀಕೇಷನ್ ಮಾಡಿ ಕುಮಾರಸ್ವಾಮಿ ಅವರ ಕುಟುಂಬದ ವಶಕ್ಕೆ ಬಂತಾ ಇಲ್ವಾ ಎಂದು ಕುಮಾರಸ್ವಾಮಿ ವಿರುದ್ಧ ಕೃಷ್ಣಬೈರೇಗೌಡ ಕೆಂಡ ಕಾರಿದರು.
ಶಾಸಕ ಮುನಿರತ್ನ ಏಡ್ಸ್ ರಾಕೆಟ್‌ನಲ್ಲಿ ಹಲವು ಅಧಿಕಾರಿಗಳು, ರಾಜಕಾರಣಿಗಳು ಬಲಿಯಾಗಿದ್ದಾರೆ. ಮುನಿರತ್ನ ರಾಕೆಟ್‌ಗೆ ಒಳಗಾದವರು ವಯಕ್ತಿಕ ಹಿತದೃಷ್ಟಿಯಿಂದ ಪರೀಕ್ಷೆಗೊಳಗಾಗೋದು ಒಳ್ಳೆಯದು. ಮುನಿರತ್ನ ಏಡ್ಸ್ ರಾಕೆಟ್‌ಗೆ ಮಾಜಿ ಸಿಎಂ ತುತ್ತು ವಿಚಾರಕ್ಕೆ ಸಚಿವ ಕೃಷ್ಣಬೈರೇಗೌಡ ಬೇಸರ ವ್ಯಕ್ತಪಡಿಸಿದರು. ರಾಜಕೀಯ ವ್ಯವಸ್ಥೆ ಎಲ್ಲಿಗೆ ಬಂದಿದೆ, ನಾವು ಯಾವ ಹಂತದಲ್ಲಿದ್ದೇವೆ ಪ್ರಸ್ತುತ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಂದಾಯ ಸಚಿವರು, ತಪ್ಪು ಯಾರೇ ಮಾಡಿದ್ರೂ ಕ್ರಮ ಆಗಲೇಬೇಕು ಎಂದರು.
ಆದಿಚು0ಚನಗಿರಿ ಮಠದ ಶ್ರೀ ನಿರ್ಮಲನಂದನಾಥಸ್ವಾಮೀಜಿಗಳ ನೇತೃತ್ವದಲ್ಲಿ ಈ ಸಂಬ0ಧ ಖಂಡನಾ ಸಭೆ ಕರೆಯಲಾಗಿದೆ. ಶಾಸಕ ಮುನಿರತ್ನ ಕಾಮಕಾಂಡ, ದಲಿತ, ಒಕ್ಕಲಿಗರ ಹೆಣ್ಣು ಮಕ್ಕಳ ಬಗ್ಗೆ ಆಡಿದ ಮಾತುಗಳ ಬಗ್ಗೆ ಖಂಡನಾ ಸಭೆ ನಡೆಯಲಿದ್ದು, ತಪ್ಪು ಮಾಡಿದ ಮುನಿರತ್ನ ವಿರುದ್ಧ ಧ್ವನಿ ಎತ್ತದ ಅಶೋಕ್, ಕುಮಾರಸ್ವಾಮಿ ಕ್ರಮದ ಬಗ್ಗೆ ಕೃಷ್ಣ ಬೈರೇಗೌಡ ಕಿಡಿ ಕಾರಿದರು.
ಮುನಿರತ್ನ ಕೇವಲ ಭ್ರಷ್ಟಾಚಾರಿ ಮಾತ್ರವಲ್ಲ, ರಾಕೆಟ್ ಮಾಫಿಯಾ ಬಯಲು ಮಾಡಬೇಕಾದರೆ ಸೂಕ್ತ ತನಿಖೆ ಆಗಬೇಕು. ಮುನಿರತ್ನ ಬಿಜೆಪಿಗೆ ಹೋದ್ರೆ ಬಿಟ್ಟಬೀಡಬೇಕಾ, ಅಶೋಕ್ ಈಗಲೂ ಮುನಿರತ್ನರನ್ನ ಸಮರ್ಥಿಸಿಕೊಳ್ತಿದ್ದಾರೆ. ಪಕ್ಷ ಬಿಟ್ಟು ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕು ಎಂದು ಕೃಷ್ಣ ಬೈರೇಗೌಡ ಹೇಳಿದರು.