ಪುರಾತನ ಧರ‍್ಮಿಕ ಸಂಸ್ಕೃತಿ ಪಾಲಿಸಿದರೆ ಮನಶ್ಸಾಂತಿ

ಆಸ್ತಿ ವಿವಾದ ಹಿನ್ನಲೆ ಒಂದೆ ಕುಟುಂಬದವರ ಜಟಾಪಟಿ

ಶ್ರೀದುರ್ಗಾಪರಮೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪನೆ

ಏಕಾಏಕಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ

April 20, 2025

Ctv News Kannada

Chikkaballapura

ಸಿದ್ದರಾಮೇಶ್ವರ ೮೫೩ನೇ ಜಯಂತಿ, ಭೋವಿ ಭವನ ಲೋಕಾರ್ಪಣೆ

1 min read

ಸಿದ್ದರಾಮೇಶ್ವರ ೮೫೩ನೇ ಜಯಂತಿ, ಭೋವಿ ಭವನ ಲೋಕಾರ್ಪಣೆ

1.5 ಕೋಟಿ ವೆಚ್ಚದಲ್ಲಿ ಬಾಗೇಪಲ್ಲಿಯಲ್ಲಿ ಭೋವಿ ಭವನ ನಿರ್ಮಾಣ

ಬಾಗೇಪಲ್ಲಿ ತಾಲ್ಲೂಕಿನ ಭೋವಿ ಸಮುದಾಯದ ಏಳ್ಗೆಗಾಗಿ ನೂತನವಾಗಿ ಭೋವಿ ಭವನ ಪಟ್ಟಣದ ೧ನೇ ವಾರ್ಡನ ಸಾಯಿ ಬಾಬಾ ದೇವಾಲಯದ ಹಿಂಭಾಗದಲ್ಲಿ ನಿರ್ಮಿಸಲಾಗಿದೆ. 1.5 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಿರುವ ಭೋವಿ ಭವನ ಜನವರಿ 14 ರಂದು ಲೋಕಾರ್ಪಣೆ ಆಗಲಿದೆ ಎಂದು ಬಾಗೇಪಲ್ಲಿ ತಾಲ್ಲೂಕು ಭೋವಿ ಸಂಘದ ಅಧ್ಯಕ್ಷ ವಿನಯ್ ಕುಮಾರ್ ಹೇಳಿದರು.

ಬಾಗೇಪಲ್ಲಿ ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಗೇಪಲ್ಲಿ ತಾಲ್ಲೂಕು ಭೋವಿ ಸಂಘದ ಅಧ್ಯಕ್ಷ ವಿನಯ್ ಕುಮಾರ್, ಸಮುದಾಯದ ಬಹು ವರ್ಷಗಳ ಭೋವಿ ಭವನದ ಕನಸು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಂದ ನನಸಾಗಿದೆ. ಲೋಕಾರ್ಪಣೆ ಕಾರ್ಯಕ್ರಮ ಸುಬ್ಬಾರೆಡ್ಡಿಯವರ ಅಧ್ಯಕ್ಷತೆಯಲ್ಲಿ ಮತ್ತು ಸಮುದಾಯದ ಹಿರಿಯರ ಸಮ್ಮುಖದಲ್ಲಿ ನಡೆಯಲಿದ್ದು, ಸಮಾಜದ ಗುರುಗಳಾದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ ಗಳು ತಮ್ಮ ಅಮೃತ ಹಸ್ತದಿಂದ ಭೋವಿ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ಈ ವೇಳೆ ಸಮುದಾಯದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಉನ್ನತ ಶಿಕ್ಷಣ ಪಡೆದ ವಿಧ್ಯಾರ್ಥಿಗಳಿಗೆ, ಹಿರಿಯರಿಗೆ ಹಾಗೂ ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿದೆ. ಭೋವಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಿದ್ದರಮೇಶ್ವರ ಜಯಂತಿ ಹಾಗೂ ಭೋವಿ ಭವನ ಕಾರ್ಯವನ್ನು ಯಶಸ್ವಿಗೊಳ್ಳಿಸಲು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಂ.ವಿ.ಕೃಷ್ಣಪ್ಪ, ಕೆ.ವಿ.ಶ್ರೀನಿವಾಸ್, ವೆಂಕಟರಾಮ್, ಲಂಬೂ ಶ್ರೀನಿವಾಸ್, ಅಶ್ವಥಪ್ಪ, ಎನ್.ನಾರಾಯಣಪ್ಪ, ರಮೇಶ್ ಬಾಬು, ವೆಂಕಟೇಶ್ ಇದ್ದರು.

About The Author

Leave a Reply

Your email address will not be published. Required fields are marked *