ಸಿದ್ದರಾಮಯ್ಯನವರೇ ಮುಖ್ಯಂತ್ರಿಯಾಗಿ ಮುಂದುವರಿಯಲಿದ್ದಾರೆ
1 min readಜಾತಿಗಣತಿ ಸಿದ್ದರಾಮಯ್ಯನವರೇ ಬಿಡುಗಡೆ ಮಾಡಲಿದ್ದಾರೆ
ಹೊಸಕೋಟೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಸ್ಪಷ್ಟನೆ
ಸಿದ್ದರಾಮಯ್ಯನವರೇ ಮುಖ್ಯಂತ್ರಿಯಾಗಿ ಮುಂದುವರಿಯಲಿದ್ದಾರೆ
ಜಾತಿಗಣತಿ ಬಿಡುಗಡೆ ಮಾಡುವಂತೆ ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಸಂಬ0ಧಿಸಿ
ಹೊಸಕೋಟೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯ ಸರ್ಕಾರ ಜಾತಿಗಣತಿ ಬಿಡುಗಡೆ ಮಾಡುತ್ತೆ. ಕಾಂಗ್ರೇಸ್ ಸರ್ಕಾರ ಅದಕ್ಕೆ ಬದ್ದವಾಗಿದೆ. ಜಾತಿಗಣತಿ ಬಿಡುಗಡೆಯಾದ್ರೆ ಸರ್ಕಾರ ಬೀಳಲ್ಲ ಸಿಎಂ ಬದಲಾಗಲ್ಲ.
ಸಿಎಂ ಸಿದ್ದರಾಮಯ್ಯವರೆ ಜಾತಿಗಣತಿಯನ್ನ ಬಿಡುಗಡೆ ಮಾಡ್ತಾರೆ ಎಂದು ಶರತ್ ಬಚ್ಚೇಗೌಡ ಹೇಳಿದರು.
ತಾಂತ್ರಿಕ ಅಂಶಗಳನ್ನ ಪರಿಶೀಲನೆ ಮಾಡಿ ಜಾತಿಗಣತಿ ಹೊರಗಡೆ ಬಿಡ್ತಾರೆ. ಎಲ್ಲಾ ಜಾತಿ ಜನಾಂಗಗಳಿಗೆ ನ್ಯಾಯ ಸಿಗಬೇಕು. ಅವರ ಪಾಲು ಅವರಿಗೆ ಸಿಗಬೇಕೆಂದರೆ ಜಾತಿಗಣತಿ ಹೊರಗಡೆ ಬರಬೇಕಿದೆ. ಸಮಾಜವಾದದ ಹಿನ್ನೆಲೆಯಲ್ಲಿ ಎಲ್ಲಾ ಜಾತಿ ಜನಾಂಗಗಳಿಗೂ ನಮ್ಮ ಸರ್ಕಾರ ನ್ಯಾಯ ಒದಗಿಸುತ್ತದೆ ಎಂದರು.
ಸಂವಿಧಾನದ ಬಗ್ಗೆ, ಪ್ರಜಾ ಪ್ರಭುತ್ವದ ಬಗ್ಗೆ ಗೌರವವಿಲ್ಲದ ಪಕ್ಷ ಬಿಜೆಪಿ.
136 ಶಾಸಕರಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನ ಕೆಡವುದರ ಕೆಲಸದಲ್ಲಿ ನಿರತರಾಗಿದ್ದಾರೆ. ಶಾಸಕರನ್ನು ಖರೀದಿ ಮಾಡುವುದು, ಇಡಿ ಅಧಿಕಾರಿಗಳನ್ನ ಬಿಟ್ಟು ಬೆದರಿಸುವ ಕೆಲಸ ಮಾಡಿದ್ರು. ಅದ್ಯಾವುದು ಯಶಸ್ವಿಯಾಗಲಿಲ್ಲ ಅಂತ ರಾಜ್ಯಪಾಲರ ಕಛೇರಿಯನ್ನ ಬಿಜೆಪಿ ಕಛೇರಿ ಮಾಡಿಕೊಂಡಿದ್ದಾರೆ ಎಂದರು.
ರಾಜ್ಯಪಾಲರನ್ನ ಬಳಸಿಕೊಂಡು ಕಾಂಗ್ರೆಸ್ ಸರ್ಕಾರವನ್ನ ಅಸ್ಥಿತಗೊಳಿಸುವ ಕೆಲಸ ಮಾಡ್ತಿದ್ದಾರೆ. ರಾಜ್ಯ ಕಂಡ ಅತ್ಯುತ್ತಮ್ಮ ಸಿಎಂ ಸಿದ್ದರಾಮಯ್ಯ ಚರಿತ್ರೆಗೆ ಮಸಿ ಬಳಿಯುವ ಕೆಲಸವನ್ನ ಮಾಡ್ತಿದ್ದಾರೆ. ಯಾವುದೇ ಕಾರಣಕ್ಕೂ ಅದು ಯಶಸ್ವಿಯಾಗಲ್ಲ ಅವರ ಜೊತೆ ನಾವೆಲ್ಲ ಇದ್ದೇವೆ ಎಂದು ಶಾಸಕ ಶರತ್ ಬಚ್ಚೇಗೌಡ ಬಿಜೆಪಿ ವಿರುದ್ದ ವಾಗ್ದಾಳಿ ಮಾಡಿದರು.