ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಸಿದ್ದರಾಮಯ್ಯ ಡುಪ್ಲಿಕೇಟ್ ಸಿಎಂ: ಹೆಚ್​ ಡಿ ಕುಮಾರಸ್ವಾಮಿ ವಾಗ್ದಾಳಿ

1 min read

ರಾಜ್ಯ ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಗಳ ವೈಫಲ್ಯದ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಕುಮಾರಸ್ವಾಮಿ ಮಾತನಾಡಿದರು.

ಬೆಂಗಳೂರು: ಮಾಜಿ ಸಿಎಂ ಮತ್ತು ಜೆಡಿಎಸ್​ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ನಾಲ್ಕು ಗ್ಯಾರಂಟಿಗಳ ವೈಫಲ್ಯದ ಬಗ್ಗೆ ದಾಖಲೆಗಳ ಸಮೇತ ಮಾಜಿ ಸಿಎಂ ಮಾತನಾಡಿದರು. ತೆಲಂಗಾಣದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್​ನ ಭರವಸೆಗಳನ್ನು ನಂಬಬೇಡಿ, ಗ್ಯಾರಂಟಿಗಳಿಗೆ ಮರುಳಾಗಬೇಡಿ, ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಹೆಚ್​ಡಿಕೆ ಆರೋಪಿಸಿದರು.

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದು ಡೂಪ್ಲಿಕೇಟ್ ಸಿಎಂ ಹೇಳಿದ್ದಾರೆ. ಅಲ್ಲಿ ಸರ್ಕಾರ ಮಾಡಿ ಏನು ಮಾಡುತ್ತೀರಿ, ಆ ರಾಜ್ಯವನ್ನೂ ಮುಳುಗಿಸುತ್ತೀರಿ? ಪಂಚ ರಾಜ್ಯಗಳಲ್ಲಿ ಮತದಾನಕ್ಕೂ ಎರಡು ದಿನ ಮುನ್ನ ಕಾಂಗ್ರೆಸ್​ ವೋಚರ್ ನೀಡಿ ಐದು ಸಾವಿರ ಮೊತ್ತದ ಉಡುಗೊರೆ ಆಮಿಷ ಒಡ್ಡುತ್ತಿದ್ದಾರೆ. ನಂಬಬೇಡಿ, ಇದಕ್ಕೆ ಬಲಿಯಾಗಬೇಡಿ. ಗೃಹಲಕ್ಷ್ಮಿ ಯೋಜನೆಯಡಿ ಸಿಎಂ ಕ್ಷೇತ್ರದಲ್ಲೇ ಲಕ್ಷಕ್ಕೂ ಹೆಚ್ಚು ಜನರಿಗೆ ಮೊದಲ ಕಂತಿನ ಹಣ ಸಿಕ್ಕಿಲ್ಲ. ಅಷ್ಟರಲ್ಲೇ ತೆಲಂಗಾಣದಲ್ಲಿ ಭಾಷಣ ಮಾಡುತ್ತಿದ್ದಾರೆ. ಶಕ್ತಿ ಕಾರ್ಯಕ್ರಮದಿಂದಾಗಿ ಮಕ್ಕಳು ಬಸ್ಸಿಲ್ಲದೆ ಜೆಸಿಬಿನಲ್ಲಿ ಕೂತು ಶಾಲಾ ಕಾಲೇಜುಗಳಿಗೆ ಹೋಗಿತ್ತಿದ್ದಾರೆ. ಮಕ್ಕಳಿಗೆ ಹೆಚ್ಚುಕಮ್ಮಿ ಆದರೆ ಕುಟುಂಬದ ಕಥೆ ಏನು? ಇದೇನಾ ನಿಮ್ಮ ಅಭಿವೃದ್ಧಿ?. ನಿಮ್ಮ ಗ್ಯಾರಂಟಿ ಕೊಡುಗೆ? ದೇಶಕ್ಕೆ ವಿಸ್ತರಿಸಲು ಹೊರಟಿದ್ದಾರೆ ಎಂದು ಹೆಚ್​.ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಗ್ಯಾರಂಟಿಗೆ ಯೋಜನೆಗಳಿಗೆ ಹಣ ಹೊಂದಿಸಲು ಸಾಲ ಮಾಡಲು ಮುಂದಾಗಿದ್ದಾರೆ. ಐದು ಗ್ಯಾರಂಟಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 11 ಸಾವಿರ ಕೋಟಿ ವರ್ಗಾಯಿಸಿದ್ದಾರೆ. ಆದರೆ, ಆ ಇಲಾಖೆಯಿಂದ ಆಗಬೇಕಾದ ಕಾರ್ಯಕ್ಕೆ ಹಣ ಎಲ್ಲಿದೆ? ಇವರು ಪ್ರಧಾನಿ ನರೇಂದ್ರ ಮೋದಿಗೆ ಚಾಲೆಂಜ್ ಮಾಡುತ್ತಾರೆ. ಸಾಲದ ವಿಷಯದಲ್ಲಿ ಕೇಂದ್ರದ ವಿರುದ್ಧ ಆರೋಪ ಮಾಡ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2.42 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಾಲದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

ಈವರೆಗೆ ಗ್ಯಾರಂಟಿ ಯೋಜನೆಗಳಿಗೆ 5.71 ಲಕ್ಷ ಕೋಟಿ ಸಾಲ ಇದೆ. 85,818 ಕೋಟಿ ಈ ವರ್ಷ ಸಾಲದ ಗುರಿ ಹಾಕಿಕೊಂಡಿದ್ದಾರೆ. ಇದು ನಿಮ್ಮ ಐದು ತಿಂಗಳ ಕೊಡುಗೆ. ಇನ್ನು ನಾಲ್ಕೂವರೆ ವರ್ಷ ಇದ್ದರೆ ಏನು ಕಥೆ?. ಖಜಾನೆಯಲ್ಲಿ ಹಣ ಇಲ್ಲ. ಆದ್ರೆ ಆಯ್ದ ವ್ಯಕ್ತಿಗಳ ಮನೆಯಲ್ಲಿ ಹಣ ಇಟ್ಟಿದ್ದಾರೆ. ಮೋದಿ ಒನ್ ನೇಷನ್ ಒನ್ ಎಲೆಕ್ಷನ್ ಎಂದರೆ ಇವರು ಒಂದು ರಾಜ್ಯದ ಹಣ ಮತ್ತೊಂದು ರಾಜ್ಯದ ಚುನಾವಣೆಗೆ ಖರ್ಚು ಎನ್ನುತ್ತಿದ್ದಾರೆ. ಯುವನಿಧಿ ಹೆಸರಿನಲ್ಲಿ ಯುವಕರಿಗೆ ಮೂರು ನಾಮ ಹಾಕಿದ್ದೀರಿ,‌ ಅಲ್ಪಸಂಖ್ಯಾತರಿಗೆ ನಾಲ್ಕು ಸಾವಿರ ಕೋಟಿ ಕೊಡುತ್ತೇವೆ ಎಂದಿದ್ದೀರಿ, ಇಲ್ಲಿ ಎಷ್ಟು ಕೊಟ್ಟಿದ್ದೀರ? ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಸಿಎಂ ಮನೆಯಲ್ಲಿ ಅಂದಾಜು 3 ಕೋಟಿ ವೆಚ್ಚದಲ್ಲಿ ಕಾನ್ಫರೆನ್ಸ್ ಹಾಲ್ ನಿರ್ಮಾಣ ಮಾಡಿದ್ದಾರೆ. ಸರ್ಕಾರದ ದುಡ್ಡಲ್ಲ ಸಚಿವರೊಬ್ಬರು ಸಿಎಂ ಮನೆ ರಿನೋವೇಷನ್​​ಗೆ ಸ್ಟಾಂಗ್ಲೆ ಅಂತ ಫರ್ನಿಚರ್ ಕೊಟ್ಟಿದ್ದಾರಂತೆ. ಇದರಲ್ಲಿ ಒಂದು ಸೋಫಾ ಸೆಟ್ ಒಂದು ಕಾಟ್ ಬೆಲೆ 1 ಕೋಟಿ 90 ಲಕ್ಷ ರೂ ಇದೆ. ಇದು ಹ್ಯೂಬ್ಲೆಟ್​​ ವಾಚ್​ನ ಅಪ್​ಡೇಟೆಡ್ ವರ್ಷನ್. ಈ ಬಗ್ಗೆ ಸಿಎಂ ಅವರೇ ಉತ್ತರ ಕೊಡಬೇಕು ಎಂದು ಕುಮಾರಸ್ವಾಮಿ ಆರೋಪಿಸಿದರು.

About The Author

Leave a Reply

Your email address will not be published. Required fields are marked *