‘ವರ್ಗಾವಣೆ’ ನಿರೀಕ್ಷೆಯಲ್ಲಿದ್ದ ‘ಶಿಕ್ಷಕ’ರಿಗೆ ಶಾಕಿಂಗ್ ನ್ಯೂಸ್: ಈ ವರ್ಷ ‘ಶಿಕ್ಷಕರ ವರ್ಗ’ ಇಲ್ಲ
1 min readರಾಜ್ಯ ಸರ್ಕಾರದ ವರ್ಗಾವಣೆ ನಿಯಮಗಳ ಪ್ರಕಾರ ಪ್ರತಿ ವರ್ಷ ಶಿಕ್ಷಕರ ವರ್ಗಾವಣೆ ನಡೆಸಬೇಕು. ಆದ್ರೇ ವಿವಿಧ ಕಾರಣಗಳಿಂದ ಕೆಲ ವರ್ಷಗಳಿಂದ ಎರಡು ವರ್ಷಗಳಿಗೆ ಒಮ್ಮೆ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ.
ಈ ವರ್ಷ ಯಾವುದೇ ಅಡೆತಡೆ ಇಲ್ಲದೇ ಶಿಕ್ಷಕರ ವರ್ಗಾವಣೆಯಾಗಿತ್ತು. 2022-23ನೇ ಸಾಲಿನ ಶಿಕ್ಷಕರ ವರ್ಗಾವಣೆ ನಾಲ್ಕು ತಿಂಗಳ ಹಿಂದಷ್ಟೇ ಮುಕ್ತಾಯಗೊಂಡಿತ್ತು. ಇದರ ನಂತ್ರ 13,351 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಈ ನೇಮಕಾತಿ ಪ್ರಕ್ರಿಯೆ ಮುಗಿಯೋ ವರೆಗೆ ವರ್ಗಾವಣೆ ಮಾಡದೇ ಇರೋ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂಬುದಾಗಿ ತಿಳಿದು ಬಂದಿದೆ.
ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿಯೋ ವೇಳೆಗೆ ಪರೀಕ್ಷಾ ಹಂತ ಬಂದು ನಿಲ್ಲಲಿದೆ. ಈ ವೇಳೆಯಲ್ಲಿ ವರ್ಗಾವಣೆ ಮಾಡೋದು ಸರಿಯಲ್ಲ ಅಂತ ನಿರ್ಧಾರ ಕೈಗೊಂಡಿರುವಂತ ರಾಜ್ಯ ಸರ್ಕಾರ ಈ ವರ್ಷ ಶಿಕ್ಷಕರ ವರ್ಗಾವಣೆಗೆ ಬ್ರೇಕ್ ಹಾಕೋ ಸಾಧ್ಯತೆ ಇದೆ.
ಎಂತಹ ವಿಪರ್ಯಾಸ ನೋಡಿ ಇವರಿಗೆ ಬುದ್ಧಿ ಜೀವಿ ಅನ್ನಬೇಕೋ ಅಥವಾ ಇನ್ನೇನು ಅನ್ನಬೇಕೋ ಗೊತ್ತಿಲ್ಲ. ಶಿಕ್ಷಕರ ವರ್ಗಾವಣೆ ಮಾಡಬೇಕಾಗಿರುವುದು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಅಂದರೆ ಅದು ಎಪ್ರಿಲ್ ಮತ್ತು ಮೇ ತಿಂಗಳಲ್ಲಿ. ಆದರೆ ಇವರು ಪರೀಕ್ಷೆ ನೆಪ ಹೇಳಿ ಮುಂದೂಡುತ್ತಿದ್ದಾರೆ.