ಶಿಡ್ಲಘಟ್ಟದಲ್ಲಿ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಶಮೀ ಪೂಜೆ
1 min readಶಿಡ್ಲಘಟ್ಟದಲ್ಲಿ ಅದ್ಧೂರಿ ವಿಜಯ ದಶಮಿ
ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಶಮೀ ಪೂಜೆ
ಶಿಡ್ಲಘಟ್ಟ ನಗರದ ಶ್ರೀವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ನವರಾತ್ರಿ ಆಚರಣೆಯ ಕಡೆಯ ದಿನ ಸಂಜೆ ದೇವಾಲಯದ ಆವರಣದಲ್ಲಿ ಶಮೀ ವೃಕ್ಷ ಪೂಜೆ ನೆರವೇರಿಸಲಾಯಿತು. ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಲೋಕ ಕಲ್ಯಾಣಾರ್ಥವಾಗಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಶಮೀ ವೃಕ್ಷ ಪೂಜೆಯನ್ನು ವೇಣುಗೋಪಾಲಸ್ವಾಮಿ ದೇವಾಲಯದ ಅಭಿವೃದ್ದಿ ಸಮಿತಿ ನೆರವೇರಿಸಿತು.
ಶಿಡ್ಲಘಟ್ಟ ನಗರದ ಶ್ರೀವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ನವರಾತ್ರಿ ಆಚರಣೆಯ ಕಡೆಯ ದಿನ ಸಂಜೆ ದೇವಾಲಯದ ಆವರಣದಲ್ಲಿ ಶಮೀ ವೃಕ್ಷ ಪೂಜೆ ನೆರವೇರಿಸಲಾಯಿತು. ವೇದ ಬ್ರಹ್ಮ ದಾಶರಥಿ ಭಟ್ಟಾಚಾರ್ಯ ಅವರು ಶಮೀ ವೃಕ್ಷ ಪೂಜೆಯ ಮಹತ್ವ ವಿವರಿಸಿ, ಶಮೀ ವೃಕ್ಷ ಅಥವಾ ಬನ್ನಿ ವೃಕ್ಷವನ್ನು ಪೂಜಿಸುವುದರಿಂದ ಶತೃಗಳು, ಪಾಪ ಕರ್ಮಗಳು ನಾಶವಾಗುತ್ತವೆ ಎನ್ನುವ ನಂಬಿಕೆಯಿದೆ ಎಂದರು.
ಔಷಧೀಯ ಗುಣವುಳ್ಳ ಶಮೀ ವೃಕ್ಷಕ್ಕೆ ಬಹು ದೊಡ್ಡ ಇತಿಹಾಸ ಪರಂಪರೆಯ ಸ್ಥಾನವಿದೆ. ಪಾಂಡವರು ಅತವಾಸದಲ್ಲಿದ್ದಾಗ ಅರ್ಜುನನ ಚಾಣಕ್ಷತನದಿಂದ ಕೌರವರ ವಿರುದ್ದ ವಿಜಯ ಸಾಧಿಸಿದ ದಿನವೇ ವಿಜಯ ದಶಮಿ ಆಗಿದೆ. ಕೌರವರ ಕಣ್ಣಿಗೆ ಕಾಣದಂತೆ ಅರ್ಜುನನು ಯುದ್ದದ ಅಸ್ತಗಳನ್ನು ಶಮೀ ವೃಕ್ಷದಲ್ಲಿ ಅಡಗಿಸಿಟ್ಟದ್ದನಂತೆ. ಶಮೀ ವೃಕ್ಷದ ಮಹಿಮೆಯಿಂದ ಕೌರವರಿಗೆ ಅರ್ಜುನನ ಯುದ್ದಾಸ್ತಗಳು ಗಿಡ ಮರದ ಕೊಂಬೆ ರೆಂಬೆಗಳ0ತೆ ಕಾಣುತ್ತಿದ್ದವಂತೆ. ಈ ಮೂಲಕ ಕೌರವರಿಂದ ಅರ್ಜುನನು ಯುದ್ದಾಸ್ತಗಳನ್ನು ಶಮೀ ವೃಕ್ಷದ ಮೂಲಕ ಉಳಿಸಿಕೊಂಡಿದ್ದ ಎನ್ನುವ ಪ್ರತೀತಿ ಇದೆ ಎಂದರು.
ಹೀಗೆ ಶಮೀ ವೃಕ್ಷವನ್ನು ಪೂಜಿಸುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ನಮ್ಮ ಪರಂಪರೆಯಲ್ಲಿದ್ದು ವಿಜಯ ದಶಮಿಯ ದಿನ ಪೂಜಿಸಲಾಗುತ್ತದೆ ಎಂದು ಹೇಳಿದರು. ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಸೇವಾ ಮತ್ತು ಅಭಿವೃದ್ದಿ ಟ್ರಸ್ಟ್ ಸಂಚಾಲಕ ರೂಪಸಿ ರಮೇಶ್ ದಂಪತಿ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬಾಣ ಬಿಡುವ ಮೂಲಕ ಸಂಪ್ರದಾಯದ0ತೆ ಶಮೀ ವೃಕ್ಷ ಪೂಜೆಯನ್ನು ನೆರವೇರಿಸಿದರು.