ಕರವೇ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆ
1 min readಕರವೇ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆ
ಕನ್ನಡ ನುಡಿ, ಜಲ ರಕ್ಷಣೆಗಾಗಿ ಯುವಕರು ಮುಂದಾಗಲಿ
ಕನ್ನಡ ನಾಡು, ನುಡಿ ರಕ್ಷಣೆಗಾಗಿ ದುಡಿಯುತ್ತಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದು ಕರವೇ ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಮುನಿರಾಜ್ ಹೇಳಿದರು. ಕರವೇ ಜಿಲ್ಲಾಧ್ಯಕ್ಷ ಎಂ.ಆರ್. ಲೋಕೇಶ್ ಸೂಚನೆ ಮೇರೆಗೆ ಕರವೇ ತಾಲ್ಲೂಕು, ನಗರ, ಯುವ ಹಾಗು ಮಹಿಳಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವದಾಧಿಕಾರಿಗಳ ಆಯ್ಕೆ ನಂತರ ಮಾತನಾಡಿದ ಕರವೇ ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಮುನಿರಾಜ್, ನಾಡಿನ ನೆಲ, ಜಲ ವಿಷಯದಲ್ಲಿ ಹೋರಾಟ ಮಾಡಲು ಸದಾ ಮುಂಚೂಣಿಯಲ್ಲಿರುವ ಕನ್ನಡ ಪರ ಸಂಘಟನೆಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಪರ ಭಾಷೆಯವರಿಂದ ನಮ್ಮ ನೆಲ, ಜಲ, ಬಾಷೆಯ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ತಡೆಯಲು ಯುವಕರು ಹೆಚ್ಚು ಸಂಘಟಿತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಕರವೇ ತಾಲ್ಲೂಕು, ನಗರ, ಯುವ ಹಾಗು ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ತಾಲ್ಲೂಕು ಅಧ್ಯಕ್ಷರಾಗಿ ಮುನಿರಾಜ್, ಕಾರ್ಯದರ್ಶಿಯಾಗಿ ಮುರಳಿ, ಮಣಿ, ಸಂಚಾಲಕರಾಗಿ ಶಶಿಕುಮಾರ್, ರಾಜೇಶ್, ಪ್ರಧಾನ ಸಂಚಾಲಕರಾಗಿ ಚನ್ನಕೃಷ್ಣಪ್ಪ, ಉಪಾಧ್ಯಕ್ಷರಾಗಿ ಆಸೀಫ್, ಗಿರೀಶ್, ಸಂಘಟನಾ ಕಾರ್ಯದರ್ಶಿಯಾಗಿ ದೇವರಾಜ್, ಖಜಾಂಚಿಯಾಗಿ ಸುಹೇಲ್, ಸಹಕಾರ್ಯದರ್ಶಿಯಾಗಿ ಮುರಳಿ, ಸಮಘಟನಾ ಕಾರ್ಯದರ್ಶಿಯಾಗಿ ಚಿಕನ್ ಅಪ್ಸರ್ ಆಯ್ಕೆಯಾಗಿದ್ದಾರೆ. ಅದೇ ರೀತಿಯಲ್ಲಿ ನಗರ ಘಟಕ , ಯುವ ಘಟಕ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆಯನ್ನೂ ಇದೇ ಸಂದರ್ಭದಲ್ಲಿ ಮಾಡಲಾಯಿತು.