ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟ ; ಇಲ್ಲಿದೆ ಡಿಟೈಲ್ಸ್ |India vs Sri Lanka series Schedule
1 min readಟೀಂ ಇಂಡಿಯಾ ಸದ್ಯ ಜಿಂಬಾಬ್ವೆ ಪ್ರವಾಸದಲ್ಲಿದ್ದು, 5 ಪಂದ್ಯಗಳ ಟಿ20 ಸರಣಿ ಆಡುತ್ತಿದೆ. ಇದರ ನಂತ್ರ ಅವ್ರು ಶ್ರೀಲಂಕಾ ಪ್ರವಾಸಕ್ಕೆ ಹೋಗಬೇಕಾಗಿದೆ, ಅಲ್ಲಿ ಅವರು 3 ಪಂದ್ಯಗಳ ಟಿ 20 ಮತ್ತು ನಂತರ 3 ಪಂದ್ಯಗಳ ಏಕದಿನ ಸರಣಿಯನ್ನ ಆಡಬೇಕಾಗಿದೆ. ಈ ಎರಡೂ ಸರಣಿಗಳ ವೇಳಾಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ.
ಕಳೆದ ತಿಂಗಳು ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿತ್ತು. ರಾಹುಲ್ ದ್ರಾವಿಡ್ ಅವರ ಕೋಚ್ ಅವಧಿ ಈ ಟೂರ್ನಿಯ ನಂತರ ಕೊನೆಗೊಂಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರನ್ನ ಹೊಸ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ.
ಈಗ ಗಂಭೀರ್ ಈ ಶ್ರೀಲಂಕಾ ಪ್ರವಾಸದಿಂದ ತಮ್ಮ ತರಬೇತಿಯನ್ನ ಪ್ರಾರಂಭಿಸಲಿದ್ದಾರೆ. 2024ರ ಟಿ20 ವಿಶ್ವಕಪ್ ನಂತರ, ಯುವ ಭಾರತೀಯ ತಂಡವು ಶುಬ್ಮನ್ ಗಿಲ್ ನಾಯಕತ್ವದಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದೆ. ಇಲ್ಲಿ ಉಭಯ ತಂಡಗಳ ನಡುವೆ 5 ಪಂದ್ಯಗಳ ಟಿ 20 ಸರಣಿ ನಡೆಯುತ್ತಿದೆ. ಇದಾದ ಬಳಿಕ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.
ಆದರೆ, ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನ ಇನ್ನೂ ಘೋಷಿಸಲಾಗಿಲ್ಲ. ಈ ವಾರದ ಕೊನೆಯಲ್ಲಿ ತಂಡವನ್ನ ಘೋಷಿಸಲಾಗುವುದು ಎಂದು ಹೇಳಲಾಗುತ್ತಿದೆ. ಹಾರ್ದಿಕ್ ಪಾಂಡ್ಯ ಈ ಪ್ರವಾಸಕ್ಕೆ ಭಾರತ ಟಿ20 ತಂಡದ ನಾಯಕತ್ವವನ್ನ ಹಸ್ತಾಂತರಿಸಬಹುದು. ಏಕದಿನ ಕ್ರಿಕೆಟ್ನ ಕಮಾಂಡ್ ಕೆಎಲ್ ರಾಹುಲ್’ಗೆ ನೀಡಬಹುದು.
ಇದಕ್ಕೆ ಕಾರಣ ರೋಹಿತ್ ಶರ್ಮಾಗೆ ವಿಶ್ರಾಂತಿ. ವರದಿಗಳ ಪ್ರಕಾರ, ರೋಹಿತ್ ಈ ಪ್ರವಾಸದಿಂದ ವಿಶ್ರಾಂತಿ ಪಡೆಯಬಹುದು. ವಿಶ್ವಕಪ್ ನಂತರವೇ ಅವರು ಟಿ20 ಅಂತರರಾಷ್ಟ್ರೀಯ ಪಂದ್ಯದಿಂದ ನಿವೃತ್ತರಾಗಿದ್ದಾರೆ. ಹೀಗಾಗಿ ಟಿ20 ಯಲ್ಲಿ ಹಾರ್ದಿಕ್ ಮತ್ತು ಏಕದಿನ ಪಂದ್ಯಗಳಲ್ಲಿ ರಾಹುಲ್ ನಾಯಕನಾಗಬಹುದು.
ಭಾರತ-ಶ್ರೀಲಂಕಾ ವೇಳಾಪಟ್ಟಿ ಇಂತಿದೆ.!
ಜುಲೈ 26: ಮೊದಲ ಟಿ20- ಪಲ್ಲೆಕೆಲ್
ಜುಲೈ 27: 2ನೇ ಟಿ20- ಪಲ್ಲೆಕೆಲ್
ಜುಲೈ 29: 3ನೇ ಟಿ20- ಪಲ್ಲೆಕೆಲ್
ಆಗಸ್ಟ್ 1: ಮೊದಲ ಏಕದಿನ ಪಂದ್ಯ, ಕೊಲಂಬೊ
ಆಗಸ್ಟ್ 4: 2ನೇ ಏಕದಿನ ಪಂದ್ಯ, ಕೊಲಂಬೊ
ಆಗಸ್ಟ್ 7: ಮೂರನೇ ಏಕದಿನ ಪಂದ್ಯ, ಕೊಲಂಬೊ
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday