ದೇವರಸನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಸೌಭಾಗ್ಯ ಅವಿರೋಧ ಆಯ್ಕೆ
1 min readದೇವರಸನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಸೌಭಾಗ್ಯ ಅವಿರೋಧ ಆಯ್ಕೆ
ಅಧ್ಯಕ್ಷ ಗಾದಿ ದಾಹಕ್ಕೆ ಕಿಡಿಗೇಡಿಗಳಿಂದ ಕೊಲೆಯಾದ ನಂಜು0ಡಸ್ವಾಮಿ ಪತ್ನಿ
ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಗಾದಿಯನ್ನು ಉಳಿಸಿಕೊಳ್ಳಲು ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ ಗೋವರ್ಧನ್ ಮತ್ತು ಸಹಚರರು ಸಂಚು ರೂಪಿಸಿ ಕೊಲೆ ಮಾಡಿದ ಘಟನೆ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಈಗ ಅದೇ ಗ್ರಾಪಂ ಅಧ್ಯಕ್ಷ ಸ್ಥಾನದ ಚುನಾವಣೆ ನಡೆದು, ಕೊಲೆಯಾದ ವ್ಯಕ್ತಿಯ ಪತ್ನಿಯೇ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹೊಸ ಸಂದೇಶ ರವಾನಿಸಲಾಗಿದೆ.
ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ೨೦ ಸದಸ್ಯರ ಬೆಂಬಲದಿAದ ಮೃತ ನಂಜು0ಡಸ್ವಾಮಿ ಅವರ ಪತ್ನಿ ಸೌಭಾಗ್ಯ ಎಂಬುವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಸಲಾಯಿತು. ಸೌಭಾಗ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಸೌಭಾಗ್ಯ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಹಾಗೂ ಚುನಾವಣಾ ಅಧಿಕಾರಿ ಶಿಲ್ಪಾ ಘೋಷಣೆ ಮಾಡಿದರು.
ಸುಮಾರು ೨೩ ಸದಸ್ಯರ ಬಲ ಹೊಂದಿರುವ ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ೨೦ ಸದಸ್ಯರು ಹಾಜರಿದ್ದು, ಮೂರು ಸದಸ್ಯರು ಗೈರಾಗಿದ್ದರು. ಆಯ್ಕೆ ನಂತರ ನೂತನ ಅಧ್ಯಕ್ಷ ಸೌಭಾಗ್ಯ ಮಾತನಾಡಿ, ಉಳಿದ ೧೦ ತಿಂಗಳ ಕಾಲ ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಆಡಳಿತ ನಡೆಸಿ, ಎಲ್ಲ ಸದಸ್ಯರ ಬೆಂಬಲದಿAದ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದರು.
ಮೂಲ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಮಾದರಿ ಗ್ರಾಮ ಪಂಚಾಯಿತಿ ಮಾಡಲು ಪಣತೊಟ್ಟು ಕಾರ್ಯನಿರ್ವಹಿಸುತ್ತೇನೆ. ಇದು ಸತ್ಯಕ್ಕೆ ಸಿಕ್ಕ ಜಯ, ಅಧ್ಯಕ್ಷ ಗಾದಿ ದುರಾಸೆಗಾಗಿ ಇಬ್ಬರ ನಡುವೆ ಒಪ್ಪಂದವಾಗಿದ್ದ ಮಾತು ಕಳೆದುಕೊಂಡು ತನ್ನ ಪತಿಯನ್ನು ಬಲಿ ಪಡೆದರು ಎಂದು ತಮ್ಮ ನೋವನ್ನು ತೋಡಿಕೊಂಡರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೈತ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಮ್ಮರಗಾಲ ಸೋಮಣ್ಣ ಇದ್ದರು.