ವಿಜಯಪುರ ಕೆರೆಕೋಡಿ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸಂಕ್ರಾ0ತಿ
1 min read
ವಿಜಯಪುರ ಕೆರೆಕೋಡಿ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸಂಕ್ರಾ0ತಿ
ವಿಶೇಷ ಅಲಂಕಾರದೊ0ದಿಗೆ ಕಂಗೊಳಿಸಿದ ದೇವಾಲಯ
ದೇವಾಲಯಗಳ ನಗರಿ, ಪಂಚ ಕಲ್ಯಾಣಿಗಳ ಪಟ್ಟಣ ವಿಜಯಪುರದ ಕೆರೆಕೋಡಿ ಬಳಿಯಿರುವ ಧರ್ಮಶಾಸ್ತç ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾ0ತಿ ಅಂಗವಾಗಿ ಹೂವಿನ ಅಲಂಕಾರದೊ0ದಿಗೆ ವಿಶೇಷ ಪೂಜೆಗಳು ನಡೆದವು.
ವಿಜಯಪುರದ ಕೆರೆಕೋಡಿ ಬಳಿಯಿರುವ ಧರ್ಮಶಾಸ್ತç ಅಯ್ಯಪ್ಪಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ವಿದ್ಯುತ್ ದೀಪಗಳ ಅಲಂಕಾರದಿ0ದ ದೇವಾಲಯ ಕಂಗೊಳಿಸಿತು. ದೇವಾಲಯದ ಮುಂಭಾಗದಲ್ಲಿರುವ ಹದಿನೆಂಟು ಮೆಟ್ಟಿಲುಗಳಿಗೆ ವಿಶೇಷ ಹೂವಿನ ಅಲಂಕಾರದೊ0ದಿಗೆ ಕಲಶಗಳನ್ನು ಸ್ಥಾಪನೆ ಮಾಡಿ, ಪಡಿ ಪೂಜೆ ನೆರವೇರಿಸಿದರು. ದೇವಾಲಯಕ್ಕೆ ಬರುವ ಭಕ್ತರಿಗೆ ದೇವರ ದರ್ಶನ ಮಾಡಿಸುವುದಕ್ಕಾಗಿ ದೇವಾಲಯದೊಳಗೆ ಅಯ್ಯಪ್ಪಸ್ವಾಮಿ ಮೂರ್ತಿಯನ್ನು 18 ಮೆಟ್ಟಿಲುಗಳ ಮೇಲೆ ಪ್ರತಿಷ್ಟಾಪನೆ ಮಾಡಿ, ವ್ಯವಸ್ಥೆ ಮಾಡಲಾಗಿತ್ತು.
ಅಯ್ಯಪ್ಪ ಮಾಲಾಭಾರಿಗಳಾಗಿ ಇರುಮುಡಿ ಹೊರುವವರಿಗೆ ಮಾತ್ರ, 18 ಮೆಟ್ಟಿಲು ಹತ್ತಿ ಅಯ್ಯಪ್ಪಸ್ವಾಮಿಯ ದರ್ಶನ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಸಾವಿರಾರು ಮಂದಿ ಭಕ್ತರು ಪ್ರತಿನಿತ್ಯ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೀಪಗಳನ್ನು ಹಚ್ಚಿ ಸಂಭ್ರಮಿಸುತ್ತಾರೆ. ಮಕರ ಸಂಕ್ರಾ0ತಿ ಅಂಗವಾಗಿ ೨೫ನೇ ವರ್ಷದ ಲಕ್ಷದೀಪೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನವೆಂಬರ್ ೨೬ ರಿಂದ ಆರಂಭವಾಗಿರುವ ಪೂಜಾ ಕಾರ್ಯಕ್ರಮಗಳು ಜನವರಿ 17 ರವರೆಗೂ ನಿರಂತರವಾಗಿ ನಡೆಯಲಿವೆ ಎಂದು ದೇವಾಲಯದ ಪ್ರಧಾನ ಅರ್ಚಕ ಮುನಿರಾಜುಸ್ವಾಮಿ ಹೇಳಿದರು.
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಮಾದರಿಯಲ್ಲಿ ವಿಜಯಪುರದಲ್ಲೂ ದೇವಾಲಯ ನಿರ್ಮಾಣ ಮಾಡಲು ಪಟ್ಟಣದ ಜನತೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಹಕಾರ ಕೊಟ್ಟಿದ್ದಾರೆ. ಮಕರ ಸಂಕ್ರಾ0ತಿಯ0ದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಪ್ರತಿ ವರ್ಷ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ನಿರಂತರವಾಗಿ ಅನ್ನಸಂತರ್ಪಣೆ ನಡೆಯುತ್ತದೆ ಎಂದು ಸ್ಥಳೀಯ ಮುಖಂಡ ಶಿವಕುಮಾರ್ ಹೇಳಿದರು.