ಮರಳುಕುಂಟೆ ಕೃಷ್ಣಮೂರ್ತಿ ಹುಟ್ಟು ಹಬ್ಬ ಆಚರಣೆ
1 min readಮರಳುಕುಂಟೆ ಕೃಷ್ಣಮೂರ್ತಿ ಹುಟ್ಟು ಹಬ್ಬ ಆಚರಣೆ
ಎಪಿಎಂಸಿ ಮಾಜಿ ಅಧ್ಯಕ್ಷ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳು ಕುಂಟೆ ಕೃಷ್ಣ ಮೂರ್ತಿ ಹುಟ್ಟು ಹಬ್ಬ ವನ್ನು ಕೇಕ್ ಕತ್ತರಿಸುವ ಜೊತೆಗೆ ಪಟಾಕಿ ಸಿಡಿಸಿ ಅವರ ಅಭಿಮಾನಿ ಗಳು ಇಂದು ಅದ್ಧೂರಿಯಾಗಿ ಆಚರಿಸಿದರು.
ಚಿಕ್ಕಬಳ್ಳಾಪುರದ ಹೂವಿನ ಮಾರುಕಟ್ಟೆ ಹಾಗೂ ನಗರದ ಕೆನರಾ ಬ್ಯಾಂಕ್ ಬಳಿ ಇರುವ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ಅವರ ಕಚೇರಿ ಬಳಿ ಅಭಿಮಾನಿಗಳು ಸೇರಿ ಹುಟ್ಟು ಹಬ್ಬವನ್ನು ಆಚರಿಸಿದರು, ಮೂರು ಸಾವಿರ ಜನರಿಗೆ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು, ಆಪಾರ ಸಂಖ್ಯೆಯಲ್ಲಿ ಬೆಂಬಲಿಗರು ಹುಟ್ಟುಹಬ್ಬ ಆಚರಣೆಯಲ್ಲಿ ಭಾಗವಹಿಸಿದ್ದರು.
ಕೃಷ್ಣಮೂರ್ತಿ ಅಭಿಮಾನಿ ಮುನಿರಾಜು ಮಾತನಾಡಿ, ಸರಳ ವ್ಯಕ್ತಿಯಾದ ಕೃಷ್ಣ ಮೂರ್ತಿ ಅವರು ನಂಬಿದ ವ್ಯಕ್ತಿಯನ್ನು ಕೈ ಬಿಟ್ಟಿಲ್ಲ. ಸರಳತೆ ಹಾಗೂ ನಂಬಿಕೆಗೆ ಖ್ಯಾತಿ ಪಡೆದ ಕೃಷ್ಣ ಮೂರ್ತಿ ಅವರ ಅಭಿಮಾನಿ ಗಳಿಂದ ಈ ಹುಟ್ಟು ಹಬ್ಬ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಕೃಷಿಗೆ ಸಂಬAಧಿಸಿದ ಎಲ್ಲ ವಿಚಾರಗಳು ರೈತರಿಗೆ ತಿಳಿಸಿ ಕೊಡುತ್ತಾರೆ. ಯಾವುದೇ ವಿಚಾರ ಆಗಲಿ ಸಹಾಯ ಮಾಡುವ ಸ್ವಭಾವ ಅವರದಗ್ದಾಗಿದೆ. ಅವರಿಗೆ ದೇವರು ಜನರ ಸೇವೆ ಮಾಡುವ ಅವಕಾಶ ನೀಡಬೇಕು ಎಂದು ಕೋರಿದರು.
ಚಿಕ್ಕಬಳ್ಳಾಪುರ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಅಭಿಮಾನಿಗಳು ಸೇರಿ ಹುಟ್ಟುಹಬ್ಬ ಆಚರಿಸಿದರು. ಚಿಕ್ಕಬಳ್ಳಾಪುರ ನಗರದಲ್ಲಿ ಮರಳುಕುಂಟೆ ಕೃಷ್ಣಮೂರ್ತಿಯವರ ಅಭಿಮಾನಿ ಗಳಿಂದ ಹುಟ್ಟು ಹಬ್ಬ ಆಚರಣೆ ಅದ್ಧೂರಿಯಾಗಿ ಆಚರಿಸಲಾಯಿತು.