ಕನ್ಯಾಕುಮಾರಿಯಿ0ದ ಕಾಶ್ಮೀರಕ್ಕೆ ಸೈಕಲಿಂಗ್ ಹೋಗಲಿರುವ ಸಂಪತ್
1 min readಹೈದರಾಬಾದ್ ನಿಂದ ಕನ್ಯಾಕುಮಾರಿಗೆ ಸೈಕಲಿಂಗ್
ಕನ್ಯಾಕುಮಾರಿಯಿ0ದ ಕಾಶ್ಮೀರಕ್ಕೆ ಸೈಕಲಿಂಗ್ ಹೋಗಲಿರುವ ಸಂಪತ್
ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊ0ದು ಗುರಿ ಇರುತ್ತೆ. ಹಾಗೆಯೇ ಈತನಿಗೂ ಒಂದು ಗುರಿ. ಅದು ಸೈಕಲ್ ಮೇಲೆ ದೇಶ ಸುತ್ತಬೇಕು ಎಂಬುದು. ಅದನ್ನು ಗುರಿ ಎನ್ನಬೇಕೋ, ಇಲ್ಲವೇ ಮತ್ತೇನು ಹೇಳಬೇಕೋ ಅರ್ಥವಾಗುತ್ತಿಲ್ಲವಾದರೂ ಈತನ ಸಾಹಸಕ್ಕೆ ಮೆಚ್ಚಲೇಬೇಕಾಗಿದೆ.
ಆತನ ಹೆಸರು ಸಂಪತ್. ಊರು ಹೈದರಾಬಾದ್, ಹೈದರಾಬಾದ್‌ನಿಂದ ಕನ್ಯಾಕುಮಾರಿಗೆ ಸೈಕಲ್‌ನಲ್ಲಿ ಹೊರಟಿದ್ದಾನಂತೆ. 10 ದಿನಗಳ ಹಿಂದೆ ಹೈದರಾಬಾದ್‌ನಿಂದ ಹೊರಟ ಸಂಪತ್ ಬರೋಬ್ಬರಿ 10 ದಿನಗಳ ನಂತರ ೫೦೦ ಕಿಲೋಮೀಟರ್ ಪ್ರಯಾಣ ಮಾಡಿ, ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾನೆ. ಈ ಸಂಪತ್ ಯೂಟ್ಯೂಬರ್ ಕೂಡಾ ಆಗಿದ್ದು, ತನ್ನ ಸೈಕಲ್ ಮೇಲೆ ದೇಶ ಸುತ್ತಬೇಕು ಎಂಬ ಗುರಿಯೊಂದಿಗೆ ಸುತ್ತಾಡುತ್ತಿರೋದು ಮಾತ್ರ ವಿಶೇಷ.
10 ದಿನಗಳಲ್ಲಿ 500 ಕಿಲೋಮೀಟರ್ ಪ್ರಯಾಣ ಮಾಡಿರುವ ಸಂಪತ್ ಮೊದಲಿಗೆ ಕನ್ಯಾಕುಮಾರಿಗೆ ಹೊರಡಲಿದ್ದು, ಅಲ್ಲಿಂದ ಕಾಶ್ಮೀರದ ಲಡಾಕ್‌ಗೆ ಹೋಗುವ ತಯಾರಿ ಮಾಡಿಕೊಂಡೇ ಬಂದಿದ್ದಾರೆ. ಸೈಕಲ್ ಮೇಲೆಯೇ ತನ್ನ ಬಟ್ಟೆ, ಹೆಲ್ಮೆಟ್ ಮತ್ತು ನೀರಿನ ಬಾಟೆಲ್‌ಗಳನ್ನು ಹಾಕಿಕೊಂಡು ಸಾಗುತ್ತಿರುವ ಸಂಪತ್, ಕತ್ತಲಾದರೆ ಮಾರ್ಗ ಮಧ್ಯ ಎದುರಾಗುವ ಊರಿನ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿ, ನಂತರ ಮಾರನೇ ದಿನ ತನ್ನ ಮುಂದಿನ ಪ್ರಯಾಣ ಬೆಳೆಸುತ್ತಿದ್ದಾರೆ.
ಒಟ್ಟಿನಲ್ಲಿ ಪ್ರಸ್ತುತ ಯುವಪೀಳಿಗೆ ಮಾದಕ ವಸ್ತುಗಳಿಗೆ ದಾಸರಾಗುವುದು, ಇಲ್ಲವೇ ವಿದೇಶಕ್ಕೆ ಹೋಗುವ ಹಂಬಲದಲ್ಲಿ ಪೋಷಕರಿಗೆ ತೊಂದರೆ ನೀಡುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಪೋಷಕರಿಗೆ ತಂದಿಟ್ಟು. ತಾವೂ ನೆಮ್ಮದಿ ಹಾಳು ಮಾಡಿಕೊಂಡು, ಪೋಷಕರ ನೆಮ್ಮದಿಗೂ ತರುತ್ತಿರುವ ಈ ಕಾಲದಲ್ಲಿ ಈ ಸಂಪತ್ ಕಾರ್ಯ ನಿಜಕ್ಕೂ ಪ್ರಶಂಸನೀಯ. ಆತನ ಪ್ರಯಾಣ ಯಶಸ್ವಿಯಾಗಲಿ ಎಂದು ಹಾರೈಸೋಣ ಅಲ್ಲವೇ.