ವಿಜಯ ದಶಮಿಯಂದು ನಡೆಯುವ ಸಾದಲಮ್ಮ ಬ್ರಹ್ಮ ರಥೋತ್ಸವ
1 min readಸಾದಲಿ ಗ್ರಾಮದಲ್ಲಿ ಅದ್ಧೂರಿ ಸಾದಲಮ್ಮ ಬ್ರಹ್ಮರಥೋತ್ಸವ
ವಿಜಯ ದಶಮಿಯಂದು ನಡೆಯುವ ಸಾದಲಮ್ಮ ಬ್ರಹ್ಮ ರಥೋತ್ಸವ
ಶಿಡ್ಲಘಟ್ಟ ತಾಲೂಕಿನ ಸಾದಲಮ್ಮದೇವಾಲಯದಲ್ಲಿ ವಿಜಯ ದಶಮಿ ಪ್ರಯುಕ್ತ ಶನಿವಾರ ರಾತ್ರಿ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಅಲಂಕಾರ, ಅಭಿಷೇಕ, ಹೋಮ, ಹವನ ಮತ್ತಿತರರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಶಿಡ್ಲಘಟ್ಟ ತಾಲೂಕಿನ ಸಾದಲಮ್ಮದೇವಾಲಯದಲ್ಲಿ ವಿಜಯ ದಶಮಿ ಪ್ರಯುಕ್ತ ಶನಿವಾರ ರಾತ್ರಿ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಮಧ್ಯಹ್ನ 1 ಗಂಟೆಗೆ ಸಾದಲಮ್ಮ ದೇವಿಯ ಉತ್ಸವಮೂರ್ತಿಯನ್ನು ಮಂಗಳ ವಾದ್ಯದೊಂದಿಗೆ ತಂದು ಅಲಂಕರಿಸಿದ್ದ ರಥದಲ್ಲಿ ಇರಿಸಲಾಯಿತು. ಅಲಂಕೃತ ರಥದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಾಲಯ ಸಮಿತಿ ಬ್ರಹ್ಮರಥೋತ್ಸವ ಅಂಗವಾಗಿ ಪದಾಧಿಕಾರಿಗಳು ಹಾಗೂ ಗ್ರೆಡ್ 2 ತಹಶೀಲ್ದಾರ್ ಪೂರ್ಣಿಮಾ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು.
ಸಾದಲಿ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಬಾಳೆಹಣ್ಣು, ದವನವನ್ನು ರಥಕ್ಕೆ ಅರ್ಪಿಸಿದರು. ಭಕ್ತಾಧಿಗಳಿಗೆ ದೇಗುಲದಿಂದ ಅನ್ನಸಂತರ್ಪಣೆ ನಡೆಯಿತು. ಈ ವೇಳೆ ಮಾತನಾಡಿದ ರಾಜೀವ್ ಗೌಡ, ಸಾದಲಮ್ಮ ಬ್ರಹ್ಮರಥೋತ್ಸವ ಯಾವುದೇ ವಿಘ್ನಗಳಿಲ್ಲದೆ ಯಶಸ್ವಿಯಾಗಿ ನಡೆಯಿತು. ಇತಿಹಾಸವಿರುವ ಈ ಕ್ಷೇತ್ರವನ್ನು ಉಳಿಸಿ ಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಆಗಿದ್ದು, ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡಬೇಕಾಗಿದೆ ಎಂದರು. ಶಶಿಕಲಾ ಸುರೇಶ್, ವಿಜಯಾನಂದ, ಗೋವಿಂದರಾಜು, ಎಸ್ ಸಿ ಅಶ್ವತಪ್ಪ, ಪ್ರಕಾಶ್,ಕುಮಾರ್ ಇದ್ದರು.