ಆರ್‌ಟಿಒ ಅಧಿಕಾರಿಗಳೇ ಇದೇನಾ ನಿಮ್ಮ ಕರ್ತವ್ಯ ನಿರ್ವಹಣೆ?
1 min readಆರ್‌ಟಿಒ ಅಧಿಕಾರಿಗಳೇ ಇದೇನಾ ನಿಮ್ಮ ಕರ್ತವ್ಯ ನಿರ್ವಹಣೆ?
ಸಂಚಾರಿ ಪೊಲೀಸರೇ ಆಗಬಾರದ ಅನಾಹುತ ಆದರೆ ಹೊಣೆ ಯಾರು?
ಆಟೋದಲ್ಲಿ ತುಂಬುತ್ತಿದ್ದಾರೆ ಪುಟ್ಟ ಪುಟ್ಟ ಮಕ್ಕಳನ್ನ
ಆರ್‌ಟಿಒ ಕಚೇರಿ, ಸಂಚಾರಿ ಪೊಲೀಸ್ ಠಾಣೆ ಎದುರಿನಲ್ಲೇ ಸಂಚಾರ
ಆದರೂ ಗಮನ ಹರಿಸುತ್ತಿಲ್ಲ ಯಾವುದೇ ಅಧಿಕಾರಿ
ಅವರೆಲ್ಲಾ ಪುಟ್ಟ ಪುಟ್ಟ ಮಕ್ಕಳು. ಇನ್ನೂ ಪ್ರಾಥಮಿಕ ಪೂರ್ವ ಮತ್ತು ಪ್ರಾಥಮಿಕ ಶಿಕ್ಷಣ ಪಡೆಯುತ್ತಿರೋ ಈ ಮಕ್ಕಳನ್ನು ಕುರಿಗಳು ತುಂಬಿದAತೆ ಆಟೋದಲ್ಲಿ ತುಂಬಲಾಗುತ್ತಿದೆ. ಅದರಲ್ಲೂ ಲಗ್ಗೇಜ್ ಸಾಗಿಸ್ತಾರಲ್ಲ, ಆಪೆ ಆಟೋ, ಅಂತಹ ಆಟೋಗಳಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಎಂಬ ಯಾವುದೇ ಬೇಧವಿಲ್ಲದೆ ಹತ್ತಾರು ಜನರನ್ನು ತುಂಬಿಕೊoಡು ಹೋಗುತ್ತಿದ್ದರೂ ಅತ್ತ ತಿರುಗಿ ನೋಡುವ ಅಧಿಕಾರಿಯೇ ಇಲ್ಲ. ಇನ್ನು ಆರ್‌ಟಿಒ ಕಚೇರಿ ಮತ್ತು ಸಂಚಾರಿ ಠಾಣೆ ಎದುರಿನಲ್ಲಿಯೇ, ಅದರಲ್ಲೂ ರಾಷ್ಟಿಯ ಹದ್ದಾರಿಯಲ್ಲಿಯೇ ಹೀಗೆ ಜನರನ್ನು ತುಂಬಿಕೊAಡು ರಾಜಾರೋಷವಾಗಿ ಹೋಗುತ್ತಿದ್ದರೂ ಅಧಿಕಾರಿಗಳು ಮಾತ್ರ ಜಾಣ ಮೌನ. ಹಾಗಾದರೆ ಏನು ಈ ಸ್ಟೋರಿ ಅಂತೀರಾ, ನೀವೇ ನೋಡಿ.
ವೀಕ್ಷಕರೇ, ಇದು ಸಾರಿಗೆ ಸಚಿವರು ನೋಡಲೇಬೇಕಾದ ಸ್ಟೋರಿ. ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೂ ನೋಡಬೇಕಾದ ಸ್ಟೋರಿ. ಯಾಕೆ ಅಂತೀರಾ, ಜಿಲ್ಲೆಯಲ್ಲಿ ಈಗಾಗಲೇ ಅನೇಕ ಅಪಘಾತಗಳು ನಡೆದಿರೋದು ಆರ್‌ಟಿಒ ಮತ್ತು ಸಂಚಾರಿ ಪೊಲೀಸರ ಕರ್ತವ್ಯ ಲೋಪದಿಂದಲೇ ಎಂಬುದು ವಿಶೇಷ. ಈಗಲೂ ಈ ಉಭಯ ಇಲಾಖೆಗಳ ಅಧಿಕರಿಗಳ ಜಾಣ ಕುರುತನ ಮುಂದುವರಿದಿದ್ದು, ಯಾವುದೇ ಆಗಬಾರದ ಅನಾಹುತ ಆದರೆ ಅದಕ್ಕೆ ಆರ್‌ಟಿಒ ಮತ್ತು ಸಂಚಾರಿ ಪೊಲೀಸರೇ ನೇರ ಕಾರಣವಾಗಲಿದ್ದಾರೆ ಎಂಬುದರಲ್ಲಿ ವಿಶೇಷವಿಲ್ಲ.
ವೀಕ್ಷಕರೇ, ಈ ವಿಡೋಯ ತುಣಕನ್ನೊಮ್ಮೆ ನೋಡಿ, ಆಟೋಗೆ ನೇತುಹಾಕಿರುವ ಡಜನ್‌ಗಟ್ಟಲೇ ಶಾಲಾ ಬ್ಯಾಗು, ಆಟೋ ಹಿಂಭಾಗದಲ್ಲಿ ಕುಳಿತಿರೋ ಪುಟ್ಟ ಪುಟ್ಟ ಮಕ್ಕಳು. ಕಾಣ್ತಾಯ ಇದೆಯಲ್ಲಾ. ಈ ಆಟೋಗಳಿಗೆ ಹೀಗೆ ಮಕ್ಕಳನ್ನು ಲೆಕ್ಕವಿಲ್ಲದಷ್ಟು ತುಂಬಿಕೊoಡು ಹೋಗಲು ಯಾವುದೇ ಅನುಮತಿ, ಪರವಾನಿಗೆ ಇಲ್ಲ. ಆದರೂ ರಾಜಾರೋಷವಾಗಿ ತುಂಬಿಕೊoಡು ಹೋಗುತ್ತಿದ್ದಾರಲ್ಲ. ಇಲ್ಲಿ ಆಗಬಾರದ ಅನಾಹುತ ಆದರೆ ಯಾರು ಹೊಣೆ? ಆಟೋದವರಾ, ಇಲ್ಲವೇ ಮಕ್ಕಳ ಸುರಕ್ಷತೆಗಿಂತ ಸಮಯಕ್ಕೆ ಸೇರುವುದೇ ಮುಖ್ಯವೆಂದು ಭಾವಿಸಿದ ಪೋಷಕರದ್ದಾ, ಅಥವಾ ಕಾನೂನು ಬಾಹಿರವಾಗಿ ಮಕ್ಕಳನ್ನು ಸಾಗಿಸುತ್ತಿದ್ದರೂ ಕ್ರಮ ವಹಿಸದ ಸಂಬoಧಿಸಿದ ಅಧಿಕಾರಿಗಳದ್ದಾ ಅನ್ನೋದನ್ನ ಸಾರಿಗೆ ಸಚಿವರೇ ಹೇಳಬೇಕಿದೆ.
ಇನ್ನು ಇಲ್ಲಿ ನೋಡಿ, ಮಳೆ ಬರುತ್ತಿದೆ. ಆದರೂ ಪ್ಲಾಸ್ಟಿಕ್ ಪೇಪರ್ ಆಟೋಗೆ ಹೊದಿಸಿ, ಹಿಂದೆ ಮುಂದೆ ಎಂಬ ಯಾವುದೇ ಬೇಧವಿಲ್ಲದೆ, ಪ್ರಯಾಣಿಕರನ್ನು ತುಂಬಿಕೊAಡು ಹೋಗುತ್ತಿರುವ ಆಟೋ ಕಾಣಿಸುತ್ತಿದೆಯಲ್ಲಾ, ಇದು ಎಲ್ಲೋ ಗ್ರಾಮೀಣ ಪ್ರದೇಶದಲ್ಲಿ ಓಡುತ್ತಿರೋ ಆಟೋ ಅಲ್ಲ, ಬದಲಿಗೆ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ಸಂಚರಿಸುತ್ತಿರೋ ಆಟೋ. ಈ ಆಟೋ ಸಂಚಾರಿ ಪೊಲೀಸ್ ಠಾಮೆ ಮತ್ತು ಆರ್‌ಟಿಒ ಕಚೇರಿ ಎರಡರ ನಡುವೆಯೇ ಹಾದುಹೋಗುತ್ತದೆ. ಉಭಯ ಇಲಾಖೆಗಳ ಕಣ್ಣೆದುರಿನಲ್ಲಿಯೇ ಈ ರೀತಿ ನಿಯಮ ಮೀರಿ ಪ್ರಯಾಣಿಕರನ್ನು ತುಂಬಿಕೊoಡು ಹೋಗುತ್ತಿದ್ದರೂ ಯಾವುದೇ ಅಧಿಕಾರಿ ಇತ್ತ ಗಮನ ಹರಿಸುವುದಿರಲಿ, ಕಣ್ಣೆತ್ತಿಯೂ ನೋಡಿಲ್ಲ.
ಹೀಗೆ ರಾಜಾರೋಷವಾಗಿ ಹೆದ್ದಾರಿಯಲ್ಲಿ, ಅದರಲ್ಲೂ ಆರ್‌ಟಿಒ ಮತ್ತು ಸಂಚಾರಿ ಪೊಲೀಸರ ಎದುರಿನಲ್ಲಿಯೇ ಆಟೋದಲ್ಲಿ ಜನರನ್ನು ಕುರಿಗಳು ತುಂಬಿದAತೆ ತುಂಬಿ ಸಾಗುತ್ತಿದ್ದರೂ ಈವರೆಗೆ ಅಂತಹ ಆಟೋ ತಡೆದು ದಂಡ ಹಾಕುವುದಾಗಲೀ, ಕನಿಷ್ಠ ಎಚ್ಚರಿಕೆ ನಡೀಉವ ಕೆಲಸವಾಗಲೀ ಉಭಯ ಇಲಾಖೆಗಳ ಅಧಿಕಾರಿಗಳು ಮಾಡಿಲ್ಲ. ಇಲ್ಲಿ ನೋಡಿ, ನಿಲ್ಲಿಸಿದ ಆಟೋದಿಂದ ಎಷ್ಟು ಮಂದಿ ಇಳಿಯುತ್ತಿದ್ದಾರೆ ಎಂಬುದನ್ನ. ಕನಿಷ್ಠ ೨೦ ಮಂದಿಯಾದರೂ ಈ ಆಟೋದಲ್ಲಿ ಪ್ರಯಾಣ ಮಾಡಿ ಜಿಲ್ಲಾಕೇಂದ್ರಕ್ಕೆ ಬಂದಿದ್ದು, ಇಲ್ಲಿ ಇಳಿಯುತ್ತಿದ್ದಾರೆ. ಹಾಗಾದರೆ ಈ ಸಂಚಾರಿ ಪೊಲೀಸ್ ಮತ್ತು ಆರ್‌ಟಿಒ ಅಧಿಕರಿಗಳು ಇರುವುದಾದರೂ ಯಾಕೆ ಎಂಬ ಪ್ರಶ್ನೆ ಮೂಡದಿರದು.
ಇನ್ನು ಇಲ್ಲಿ ನೋಡಿ, ಅಪ್ರಾಪ್ತರಾದವರು ಬೈಕ್ ಓಡಿಸೋದನ್ನೂ ನಡೋಇ ಪುನೀತರಾಗಿ. ಅದೂ ಬೈಕಿನಲ್ಲಿ ಪ್ರಾಪ್ತರಾದವರು ಒಬ್ಬರೇ ಹೋಗುತ್ತಾರಾ ಎಂದರೆ ಅದೂ ಇಲ್ಲ. ಡಬಲ್ ಇಲ್ಲವೇ ತ್ರಿಬುಲ್ ರೈಡಿಂಗ್ ಹೋಗುವವರೇ ಹೆಚ್ಚು. ಪ್ರತಿನಿತ್ಯ ನೂರಾರು ಮಂದಿ ಅಪ್ರಾಪ್ತರು ಹೀಗೆ ಬೈಕ್ ಓಡಿಸುತ್ತಿದ್ದರೂ ಇದೇ ಆರ್‌ಟಿಒ ಮತ್ತು ಸಂಚಾರಿ ಪೊಲೀಸರು ಮತ್ರಾ ಅತ್ತ ತಿರುಗಿಯೂ ನೋಡಿಲ್ಲ. ಇತ್ತೀಚಿಗೆ ಅಪ್ರಾಪ್ತ ಬಾಲಕನೊಬ್ಬ ಕಾರು ಓಡಿಸಿ, ಹಲವರ ಸಾವಿಗೆ ಕಾರಣವಾಗಿದ್ದು, ಅದರಿಂದ ಪೋಷಕರ ವಿರುದ್ಧ ಪ್ರಕರಣ ದಾಖಲಾಗಿದ್ದು ನೆನಪಿದೆಯಲ್ಲವೇ, ಇದೇ ರೀತಿ ಇಲ್ಲಿಯೂ ಆಗ ಬಾರದ ಅನಾಹುತ ಆದರೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರಿಸುವ ಅಧಿಕಾರಿಯೇ ಇಲ್ಲವಾಗಿದ್ದಾರೆ.
ಆಪೆ ಆಟೋಗಳಲ್ಲಿ ಹತ್ತಾರು ಮಂದಿಯನ್ನು ತುಂಬಿ ಸಂಚಾರ ಮಾಡುವುದು, ಅದರಲ್ಲಿಯೂ ಶಾಲಾ ಮಕ್ಕಳನ್ನು ತುಂಬಿಕೊAಡು ನಿಗಧಿತ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಸಂಚರಿಸುವುದು, ಹೀಗೆ ಪ್ರತಿನಿತ್ಯ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಇದಕ್ಕೂ ತಮಗೂ ಸಂಬಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದು, ಇದರಿಂದ ಪೋಷಕರು ಮತ್ತು ಸಾರ್ವಜನಿಕರಲ್ಲಿ ತೀವ್ರ ಆತಂಕ ಮನೆಮಾಡಿದೆ. ಆದರೆ ಪೋಷಕರು ಅನಿವಾರ್ಯವಾಗಿ ಆಟೋಗಳನ್ನೇ ಅವಲಂಭಿಸಬೇಕಾದ ಸ್ಥಿತಿ ಎದುರಾಗಿರುವುದು ಮತ್ತೊಂದು ವಿಪರ್ಯಾಸ.
ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರದಿದ ಗ್ರಾಮೀಣ ಪ್ರದೇಶಕ್ಕೆ ಮತ್ತು ಗ್ರಾಮೀಣ ಪ್ರದೇಶದಿಂದ ಚಿಕ್ಕಬಳ್ಳಾಪುರಕ್ಕೆ ಶಾಲಾ ಕಾಲೇಜುಗಳಿಗೆ ಮಕ್ಕಳು ಹೋಗಲು ಶಾಲಾ ಕಾಲೇಜು ಸಮಯಕ್ಕೆ ಬಸ್ಸುಗಳೇ ಇಲ್ಲವಾಗಿದೆ. ಇದರಿಂದ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಬಸ್‌ಗಳಿಲ್ಲದ ಕಾರಣ ಅನಿವಾರ್ಯವಾಗಿ ಆಟೋಗಳಿಗೆ ಮೊರೆಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಆಟೋ ಚಾಲಕರು ಮಕ್ಕಳನ್ನು ನಿಗಧಿಗಿಂತ ಹೆಚ್ಚಾಗಿ ತುಂಬುವ ಜೊತೆಗೆ ನಿಗಧಿಗಿಂತ ಹೆಚ್ಚು ವೇಗದಲ್ಲಿ ಸಚಂರಿಸುತ್ತಿದ್ದಾರೆ.
ಲಗ್ಗೇಜ್ ಸಾಗಿಸೋ ಆಟೋಗಳಲ್ಲಿ ಜನರನ್ನು ತುಂಬಿಕೊAಡು ಪ್ರತಿನಿತ್ಯ ಸಂಚಾರ ಮಾಡೋ ಆಟೋಗಳು ಯಾವುದೇ ಅಂಜಿಕೆ ಇಲ್ಲದೆ ಓಡಾಡುತ್ತಿದ್ದರೂ ಅಧಿಕಾರಿಗಳು ಇತ್ತ ಗಮನವೇ ಹರಿಸದ ಕಾರಣ ರಾಜಾರೋಷವಾಗಿ ಸಂಚರಿಸುತ್ತಿದ್ದಾರೆ. ಇದರಿಂದ ಮಕ್ಕಳು ಜೀವ ಕೈಯಲ್ಲಿ ಹಿಡಿದೇ ಸಂಚರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ಶಾಲಾ ಕಾಲೇಜುಗಳ ಸಮಯಕ್ಕೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳುವ ಅದಿಕಾರಿಗಳು ಮತ್ತು ಜನಪ್ರತಿನಿಧಿಗಳು ಆ ಬಗ್ಗೆ ವಾಸ್ತವಾಂಶ ಎಷ್ಟಿದೆ ಎಂಬ ಬಗ್ಗೆ ಈವರೆಗೂ ರಿಯಾಲಿಟಿ ಚೆಕ್ ಮಡಾಇದ ನಿದರ್ಶನಗಳೇ ಇಲ್ಲ.
ಇದರಿಂದ ಶಾಲಾ ಕಾಲೇಜುಗಳ ಸಮಯಕ್ಕೆ ಬಸ್‌ಗಳ ಸಂಚಾರ ಎಂಬುದು ಕೇವಲ ಹೇಳಿಕೆಗೆ ಮತ್ರಾ ಸೀಮಿತವಾಗಿದ್ದು, ಅದು ಕಾರ್ಯರೂಪವಾಗುತ್ತಿಲ್ಲ. ಬಸ್ ಸಂಚಾರ ಇಲ್ಲದ ಕಾರಣ ಅನಿವಾರ್ಯವಾಗಿ ಆಟೋಗಳಿಗೆ ಮೊರೆ ಹೋಗಬೇಕಾದ ಸ್ಥಿತಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಎದುರಾಗಿದ್ದು, ಇದರಿಂದ ಆಗಬಾರದ ದುರಂತ ಸಂಭವಿಸಿದರೆ ಮಾತ್ರ ಅದರ ನೇರ ಹೊಣೆ ಆರ್‌ಟಿಒ ಮತ್ತು ಸಂಚಾರಿ ಪೊಲೀಸರೇ ಆಗಲಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ.
ಈಗಲಾದರೂ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಅವರು ಇಥ್ತ ಗಮನ ಹರಿಸಿ, ಸಂಚಾರಿ ಪೊಲೀಸರು ಮತ್ತು ಆರ್‌ಟಿಒ ಅಧಿಕಾರಿಗಳನ್ನು ಎಚ್ಚರಿಸುವ ಮೂಲಕ ಮುಂದೆ ನಡೆಯಬಹುದಾದ ಅನಾಹುತದಿಂದ ಮಕ್ಕಳನ್ನು ಪಾರು ಮಾಡಬೇಕೆಂದು ಪ್ರವಂತರು ಒತ್ತಾಯಿಸಿದ್ದಾರೆ.